
KPSC Vaani
February 11, 2025 at 08:27 AM
ಹೆನ್ಲಿ ಪಾಸ್‌ಪೋರ್ಟ್ ಸೂಚ್ಯಂಕ 2025: ಸಿಂಗಾಪುರ್ ನಂ. 1 ಸ್ಥಾನ, ಭಾರತಕ್ಕೆ 80ನೇ ಸ್ಥಾನ
- ಹೆನ್ಲಿ ಪಾಸ್‌ಪೋರ್ಟ್ ಸೂಚ್ಯಂಕ 2025 ಪ್ರಕಾರ ಜಾಗತಿಕ ಪ್ರಬಲ ಪಾಸ್‌ಪೋರ್ಟ್‌ಗಳ ಪೈಕಿ ಸಿಂಗಾಪುರ ಪಾಸ್‌ಪೋರ್ಟ್ ನಂಬರ್ 1 ಸ್ಥಾನ ಗಳಿಸಿದೆ. ಈ ಪಾಸ್‌ಪೋರ್ಟ್ ಇದ್ದರೆ ಜಗತ್ತಿನ 227 ದೇಶಗಳ ಪೈಕಿ 193 ದೇಶಗಳಿಗೆ ವೀಸಾ ಇಲ್ಲದೆ ಪ್ರಯಾಣ ಮಾಡಬಹುದು. ಭಾರತಕ್ಕೆ 80ನೇ ಸ್ಥಾನ ದಕ್ಕಿದೆ. ಭಾರತ ಪಾಸ್‌ಪೋರ್ಟ್ ಇದ್ದರೆ 56 ದೇಶಗಳಿಗೆ ವೀಸಾ ಅಗತ್ಯವಿರುವುದಿಲ್ಲ. 80ನೇ ಸ್ಥಾನವನ್ನು ಅಲ್ಜೀರಿಯಾ, ತಜಕಿಸ್ತಾನ, ಈಕ್ವಟೋರಿಯಲ್, ಗಿನಿಯಾ ಕೂಡ ಹಂಚಿಕೊಂಡಿವೆ. ಹೆನ್ಲೆ ಪಾಸ್‌ಪೋರ್ಟ್ ಬಿಡುಗಡೆ ಮಾಡಿದ ಪಾಸ್‌ಪೋರ್ಟ್ ಸೂಚ್ಯಂಕದಲ್ಲಿಈ ವಿಷಯ ಅನಾವರಣಗೊಂಡಿದೆ.
- ಹೆನ್ಲಿ ಪಾಸ್‌ಪೋರ್ಟ್ ಇಂಡೆಕ್ಸ್ 2025 ರ ಪ್ರಮುಖ ಮುಖ್ಯಾಂಶಗಳು :
ಉನ್ನತ ಶ್ರೇಣಿಯ ಪಾಸ್‌ಪೋರ್ಟ್‌ಗಳು
1 ನೇ ಸ್ಥಾನ: ಸಿಂಗಾಪುರ
227 ಸ್ಥಳಗಳಲ್ಲಿ 193 ಸ್ಥಳಗಳಿಗೆ ವೀಸಾ ಮುಕ್ತ ಪ್ರವೇಶ.
2 ನೇ ಸ್ಥಾನ: ಜಪಾನ್ ಮತ್ತು ದಕ್ಷಿಣ ಕೊರಿಯಾ
190 ದೇಶಗಳಿಗೆ ವೀಸಾ ಮುಕ್ತ ಪ್ರವೇಶ.
3 ನೇ ಸ್ಥಾನ: ಯುರೋಪಿಯನ್ ರಾಷ್ಟ್ರಗಳು
ಫಿನ್ಲ್ಯಾಂಡ್, ಫ್ರಾನ್ಸ್, ಜರ್ಮನಿ, ಸ್ಪೇನ್, ಇಟಲಿ, ಐರ್ಲೆಂಡ್
189 ಸ್ಥಳಗಳಿಗೆ ಪ್ರವೇಶ.
▪️ ಇನ್ನೂ ಹೆಚ್ಚಿನ ಪ್ರಚಲಿತ ಘಟನೆಗಳಿಗಾಗಿ ಕೆಳಗೆ ನೀಡಿರುವ ಲಿಂಕ್ ಗೆ ಭೇಟಿ ನೀಡಿ:https://www.kpscvaani.com/current-affairs/