
KPSC Vaani
February 12, 2025 at 07:48 AM
☘️🌺 ಮುಂದಿನ ಕೃತಕ ಬುದ್ಧಿಮತ್ತೆ (AI) ಆ್ಯಕ್ಷನ್ ಶೃಂಗಕ್ಕೆ ಭಾರತ ಆತಿಥ್ಯ
- ಮುಂದಿನ ಕೃತಕ ಬುದ್ಧಿಮತ್ತೆ (ಎಐ) ಬಗೆಗಿನ ಶೃಂಗ ಭಾರತದಲ್ಲಿ ನಡೆಯಲಿದೆ ಎಂದು ಫ್ರಾನ್ಸ್ ಅಧ್ಯಕ್ಷರ ಕಚೇರಿ ತಿಳಿಸಿದೆ. ಈ ನಿರ್ಧಾರಕ್ಕೆ ಒಪ್ಪಿಗೆ ಸೂಚಿಸಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ, ಮುಂದಿನ ಎಐ ಶೃಂಗದ ಆತಿಥ್ಯವನ್ನು ಭಾರತ ವಹಿಸಲಿದೆ ಎನ್ನುವುದಕ್ಕೆ ಸಂತೋಷವಾಗುತ್ತಿದೆ ಎಂದು ಹೇಳಿದ್ದಾರೆ.
- ಫ್ರಾನ್ಸ್‌ನಲ್ಲಿ ಈ ಬಾರಿ ಮೊದಲ ಎಐ ಆಕ್ಷನ್ ಶೃಂಗ ನಡೆದಿದೆ. ಇದಕ್ಕೆ ಮೋದಿ, ಫ್ರಾನ್ಸ್ ಅಧ್ಯಕ್ಷ ಎಮಾನ್ಯುಯೆಲ್ ಮ್ಯಾಕ್ರನ್ ಅವರನ್ನು ಅಭಿನಂದಿಸಿದರು. ಇದೇ ವೇಳೆ ಭಾರತದಲ್ಲಿ ನಡೆಯಲಿರುವ ಶೃಂಗಕ್ಕೆ ಎಲ್ಲಾ ರೀತಿಯ ಬೆಂಬಲ ನೀಡುವುದಾಗಿ ಮ್ಯಾಕ್ರನ್ ಭರವಸೆ ನೀಡಿದರು. ಶೃಂಗದಲ್ಲಿ ಕೈಗೊಂಡ ಎಐ ಫೌಂಡೇಶನ್ ಮತ್ತು ಸುಸ್ಥಿರ ಎಐ ಕೌನ್ಸಿಲ್ ರಚನೆ ಮಾಡುವ ನಿರ್ಧಾರವನ್ನು ಮೋದಿ ಸ್ವಾಗತಿಸಿದರು.
ಇನ್ನೂ ಹೆಚ್ಚಿನ ಪ್ರಚಲಿತ ಘಟನೆಗಳಿಗಾಗಿ ಕೆಳಗೆ ನೀಡಿರುವ ಲಿಂಕ್ ಗೆ ಭೇಟಿ ನೀಡಿ:https://www.kpscvaani.com/current-affairs/