Sode Sri Vadiraja Matha.
February 5, 2025 at 09:51 AM
ಶ್ರೀವೇದಾಂತಗುರು ಸೋದರರಾದ ಶ್ರೀವಿಷ್ಣುತೀರ್ಥರ ಪರಂಪರೆಯಲ್ಲಿ ಬಂದ ಶ್ರೀವಾದಿರಾಜತೀರ್ಥ ಭಗವತ್ಪಾದರಕ್ಕಿಂತ ಪೂರ್ವದಲ್ಲಿ ಬಂದ ಶ್ರೀರತ್ನಗರ್ಭತೀರ್ಥರ ಶಿಷ್ಯರೇ ಶ್ರೀವೇದಾಂಗತೀರ್ಥರು. ಭೀಷ್ಮಾಷ್ಟಮಿಯಂದು ಅವರ ಆರಾಧನೆಯನ್ನು ಆಚರಿಸಲಾಗುತ್ತದೆ. ಶ್ರೀವಾಯುಸ್ತುತಿ ಟೀಕಾ, ಶ್ರೀಮಧ್ವವಿಜಯ ಟೀಕಾ, ಅಣು ಮಧ್ವವಿಜಯ ಟೀಕಾ, ಶ್ರೀಮದ್ಭಾಗವತ ಟೀಕಾ, ಶ್ರೀಮಹಾಭಾರತತಾತ್ಪರ್ಯ ನಿರ್ಣಯ ಟೀಕಾ, ಪಾರಿಜಾತಾಪಹರಣಂ ಟೀಕಾ, ಐತರೇಯೋಪನಿಷದ್ಭಾಷ್ಯ ಟೀಕಾ, ಭಜ ಮಧ್ವೇಶಂ ಇತ್ಯಾದಿ ಗ್ರಂಥಕಾರರಾದ ಪೂಜ್ಯರು ಸಿದ್ದಾಪುರ ತಾಲೂಕಿನ ಬೀಳಗಿ ಎಂಬ ಗ್ರಾಮದಲ್ಲಿ ವೃಂದಾವನಸ್ಥರಾದರು. ತ್ರೈಲೋಕ್ಯವಂದಿತರಾದ ಶ್ರೀಮನ್ಮಧ್ವಾಚಾರ್ಯರು, ತಮ್ಮ ಗ್ರಂಥಗಳನ್ನು ಕಡ್ತಿಲಾ ಎಂಬ ಪ್ರಾಂತದಲ್ಲಿ ಯಾವರೀತಿಯಲ್ಲಿ ಭೂಗತ ಮಾಡಿದರೋ ಅದೇ ರೀತಿ ಶ್ರೀರಾಜರು ಸಹ ತಮ್ಮ ಗ್ರಂಥಗಳನ್ನು ಶ್ರೀವೇದಾಂಗತೀರ್ಥರ ವೃಂದಾವನ ಸನಿಹದಲ್ಲೇ ಭೂಗತ ಮಾಡಿದ್ದು ವಿಶೇಷ.
🙏 12

Comments