Karnataka Varthe
February 7, 2025 at 09:10 AM
ಮುಖ್ಯಮಂತ್ರಿಗಳ ಕಚೇರಿಯಿಂದ ಮಾಧ್ಯಮ ಪ್ರಕಟಣೆ
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 2024ರ ಏಪ್ರಿಲ್-ಡಿಸೆಂಬರ್‌ನ ಅವಧಿಯಲ್ಲಿ ಶಿಶು ಮರಣ ಪ್ರಮಾಣ ಹೆಚ್ಚಾದ ಕುರಿತು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಇದನ್ನು ಗಮನಿಸಿದ ಮುಖ್ಯಮಂತ್ರಿಗಳ ಕಚೇರಿಯ ಕುಂದುಕೊರತೆ ವಿಭಾಗದ ವಿಶೇಷ ಕರ್ತವ್ಯಾಧಿಕಾರಿಗಳು ಪರಿಶೀಲಿಸಿ ವರದಿ ಸಲ್ಲಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಶಿಶು ಮರಣದ ನಿಯಂತ್ರಣಕ್ಕೆ ನೋಂದಣಿಯಾದ ಗರ್ಭಿಣಿಯರಿಗೆ 1ನೇ ಡೋಸ್ ಟಿ.ಟಿ. ಹಾಗೂ ಒಂದು ತಿಂಗಳ ನಂತರ 2ನೇ ಡೋಸ್ ಟಿ.ಟಿ. ಯನ್ನು ನೀಡಲಾಗುತ್ತಿದೆ. ಪೌಷ್ಠಿಕಾಂಶ ಕೊರತೆ ಇದ್ದಲ್ಲಿ ಕಬ್ಬಿಣಾಂಶ ಮಾತ್ರೆ ಹಾಗೂ ಕ್ಯಾಲ್ಸಿಯಂ ಮಾತ್ರೆಗಳನ್ನು ನೀಡುವುದರ ಜೊತೆಗೆ ಉತ್ತಮ ಆಹಾರ ಸೇವನೆಗೆ ಮಾರ್ಗದರ್ಶನ ಹಾಗೂ ಬೇಕಾದ ಸೌಲಭ್ಯವನ್ನು ನೀಡಲಾಗುತ್ತಿದೆ.
ಅವಧಿಗೆ ಮುನ್ನ ಹೆರಿಗೆ ಆದಲ್ಲಿ ನವಜಾತ ಶಿಶು ಆರೈಕೆ ಕೇಂದ್ರಗಳಲ್ಲಿ ಹೆಚ್ಚಿನ ಚಿಕಿತ್ಸೆಯನ್ನು ನೀಡಲಾಗುತ್ತಿದ್ದು, ನಂತರದ ದಿನಗಳಲ್ಲಿಯೂ ಆಶಾ ಕಾರ್ಯಕರ್ತೆಯರು, ಪಿ.ಹೆಚ್.ಸಿ.ಒ. ಗಳು ವೈದ್ಯಾಧಿಕಾರಿಗಳ ನಿರ್ದೇಶನದಂತೆ ಸಕಾಲದಲ್ಲಿ ಮನೆಗೆ ಭೇಟಿ ನೀಡಿ ಮುಂಜಾಗ್ರತಾ ಕ್ರಮಗಳನ್ನು ನಿರ್ವಹಿಸುತ್ತಿದ್ದಾರೆ. ಅದರಂತೆ ಇನ್ನಿತರ ಹಲವಾರು ಕಾರ್ಯಕ್ರಮಗಳ ಮೂಲಕ ಮಗುವಿನ ಆರೋಗ್ಯದ ಕುರಿತು ತಾಯಂದಿರಿಗೆ ತಿಳುವಳಿಕೆಯನ್ನು ನೀಡಲಾಗುತ್ತಿದೆ.
ಏಪ್ರಿಲ್-ಡಿಸೆಂಬರ್ 2024ರ ವರೆಗೆ ಹೆಚ್ಚಿದ ಶಿಶು ಮರಣ ಪ್ರಮಾಣದ ಹಿನ್ನೆಲೆ ಗರ್ಭಿಣಿಯರಿಗೆ ಹಾಗೂ ಶಿಶು ಜನನದ ಆರೈಕೆಯಲ್ಲಿ ಉತ್ತಮ ಸೇವೆಯನ್ನು ಒದಗಿಸಲಾಗುತ್ತಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ತಿಳಿಸಿದ್ದಾರೆ.
❤️
👍
2