Karnataka Varthe

37.1K subscribers

Verified Channel
Karnataka Varthe
February 8, 2025 at 02:51 PM
ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ಹಾಗೂ ಇನ್ವೆಸ್ಟ್‌ ಕರ್ನಾಟಕಕ್ಕಾಗಿ ಬೆಂಗಳೂರು ಸಜ್ಜಾಗುತ್ತಿದೆ. ಬಿಬಿಎಂಪಿ ವತಿಯಿಂದ ನಗರದ ಪ್ರಮುಖ ವೃತ್ತ ಹಾಗೂ ಜಂಕ್ಷನ್‌ಗಳ ಸೌಂದರ್ಯೀಕರಣದ ಕಾರ್ಯ ನಡೆಯುತ್ತಿದೆ. ಪೊಲೀಸ್‌ ವೃತ್ತ (ಹಡ್ಸನ್‌ ವೃತ್ತ), ಮೇಕ್‌ ಇನ್‌ ಇಂಡಿಯಾ ವೃತ್ತ (ವಿಂಡ್ಸರ್‌ ಮ್ಯಾನರ್‌ ಹೋಟೆಲ್‌ ಜಂಕ್ಷನ್‌), ಮೇಖ್ರಿ ವೃತ್ತ, ಹೈಗ್ರೌಂಡ್ಸ್‌ ವೃತ್ತ, ವಿಧಾನಸೌಧ ಜಂಕ್ಷನ್‌ (ಶಾಸಕರ ಭವನದ ಬಳಿ), ಸದಾಶಿವ ನಗರ ಪೊಲೀಸ್‌ ಠಾಣೆ ಜಂಕ್ಷನ್‌, ಶಾಂಗ್ರಿ - ಲಾ ಹೋಟೆಲ್‌ ಬಳಿಯ ಕಲ್ಪನಾ ಜಂಕ್ಷನ್‌, ಮೌಂಟ್‌ ಕಾರ್ಮೆಲ್‌ ಕಾಲೇಜು ಬಳಿಯ ಜಂಕ್ಷನ್‌, ರಾಜಭವನ ವೃತ್ತ, ಕಾಫಿ ಬೋರ್ಡ್‌ ಜಂಕ್ಷನ್‌, ಕಿಮ್ಸ್‌ ಬಳಿ, ಟಿಎಂಸಿ ವೃತ್ತ, ಕೆ.ಆರ್‌ ವೃತ್ತದ ಬಳಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ.
❤️ 2

Comments