Dinesh Gundu Rao

2.0K subscribers

Verified Channel
Dinesh Gundu Rao
January 22, 2025 at 07:46 AM
ಗರ್ಭಿಣಿಯರ ಆರೋಗ್ಯ ಸುರಕ್ಷತೆಗೆ ಆದ್ಯತೆ ನೀಡುವ ಬೃಹತ್ "ಮಾತೃತ್ವ ಸುರಕ್ಷಾ ಅಭಿಯಾನ"ಕ್ಕೆ ಇಂದು ರಾಯಚೂರಿನಲ್ಲಿ ಚಾಲನೆ ನೀಡಿದೆ. ಗರ್ಭಿಣಿಯರ ಆರೋಗ್ಯ ಗರ್ಭಿಣಿಯರ ಆರೋಗ್ಯ ಮತ್ತು ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳಲು ಪ್ರತಿ ತಿಂಗಳು 9 ಮತ್ತು 24 ರಂದು ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಉಚಿತ ಆರೋಗ್ಯ ತಪಾಸಣೆ ಸೌಲಭ್ಯ ಒದಗಿಸುವುದು ಅಭಿಯಾನದ ಮುಖ್ಯ ಉದ್ದೇಶವಾಗಿದೆ. ಸಮಾರಂಭದ ನಂತರ ಆಸ್ಪತ್ರೆಗೆ ಭೇಟಿ ನೀಡಿ ಗರ್ಭಿಣಿಯರು, ಬಾಣಂತಿಯರ ಆರೋಗ್ಯವನ್ನೂ ವಿಚಾರಿಸಿದೆ. ಈ ಸಂದರ್ಭದಲ್ಲಿ ಸಣ್ಣ ನೀರಾವರಿ ಖಾತೆ ಸಚಿವರಾದ ಎನ್‌.ಎಸ್‌. ಭೋಸರಾಜು, ಸ್ಥಳೀಯ ಶಾಸಕರು, ಮುಖಂಡರು, ಹಿರಿಯ ಅಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು. #ಮಾತೃತ್ವಸುರಕ್ಷಾ #maternitysafetycamp #freehealthcheckup #healthforall #raichur #healthdepartment

Comments