Dinesh Gundu Rao
January 24, 2025 at 10:19 AM
ಕೋಲಾರ ಜಿಲ್ಲೆಯ ಬಂಗಾರಪೇಟೆಯ ಮಾಗೊಂದಿ ಗ್ರಾಮದ ಪ್ರತಿ ಮನೆ-ಮನೆಗೆ ಭೇಟಿ ನೀಡಿ ನಾವು ಜಾರಿಗೆ ತಂದಿರುವ ಗೃಹ ಆರೋಗ್ಯ ಕುರಿತು ಪರಿಶೀಲನೆ ನಡೆಸಿದೆ.
ಸ್ಥಳೀಯ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಹಾಗೂ ನಾಗರಿಕರು ಈ ಯೋಜನೆಯ ಅತ್ಯುತ್ತಮವಾಗಿದೆ ಎಂದು ತಿಳಿಸಿದ್ದು, ಸಾರ್ಥಕ ಭಾವ ಮೂಡಿತು.
ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲೆಡೆ ವಿಸ್ತರಿಸುವ ಚಿಂತನೆ ಇದೆ. ಇದೇ ಸಂದರ್ಭದಲ್ಲಿ ನಡೆದ ಸಮಾರಂಭಕ್ಕೆ ಚಾಲನೆ ನೀಡಿ, ಗೃಹ ಆರೋಗ್ಯ ಫಲಾನುಭವಿಗಳನ್ನು ವೇದಿಕೆಗೆ ಕರಿಸಿ ಅವರೊಂದಿಗೆ ಸಮಾಲೋಚನೆ ನಡೆಸಿದೆ.