Dinesh Gundu Rao

2.0K subscribers

Verified Channel
Dinesh Gundu Rao
January 24, 2025 at 01:32 PM
ಕೋಲಾರದ ಎಸ್.ಎನ್.ಆರ್ ಜಿಲ್ಲಾಸ್ಪತ್ರೆಯಲ್ಲಿ ಇಂದು ಪಿಂಕ್‌ ಬಲೂನ್‌ಗಳನ್ನು ಹಾರಿ ಬಿಡುವ ಮೂಲಕ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಗೆ ಚಾಲನೆ ನೀಡಿದೆ. ಸಮಾಜದಲ್ಲಿ ಪ್ರತಿ ಹೆಣ್ಣು ಮಗುವಿಗೂ ಸ್ವಾತಂತ್ರ್ಯ ದೊರಕಲಿ ಎಂಬುದು ಇದರ ಉದ್ದೇಶವಾಗಿದೆ. ನಂತರ ಮೆಮೋಗ್ರಫಿ ಮೆಷಿನ್‌ ಸೆಂಟರ್ ಅನ್ನು ಉದ್ಘಾಟಿಸಿದೆ. ಇದು ಸ್ತನ ಕ್ಯಾನ್ಸರ್ ಕುರಿತು ತಪಾಸಣೆ ನಡೆಸುವ ಯಂತ್ರವಾಗಿದೆ. ರಾಷ್ಟ್ರೀಯ ಹೆಣ್ಣು ಮಕ್ಕಳ ದಿನದಂದು ಜನಿಸಿದ ಹೆಣ್ಣುಮಗುವಿಗೆ ಒಂದು ಸಾವಿರ ರೂಪಾಯಿ ಮೌಲ್ಯದ ವಿಶೇಷ ಮಕ್ಕಳ ಕಿಟ್‌ ವಿತರಿಸಲಾಯಿತು. ಸ್ಥಳೀಯ ಸಂಸದರು, ಶಾಸಕರು, ಹಾಗೂ ಆರೋಗ್ಯ ಇಲಾಖೆಯ ಆಯುಕ್ತರು, ಅಭಿಯಾನ ನಿರ್ದೇಶಕರು ಸೇರಿದಂತೆ ಜಿಲ್ಲಾ ಆರೋಗ್ಯ ಸಿಬ್ಬಂದಿ ಹಾಗೂ ಇತರರು ಉಪಸ್ಥಿತರಿದ್ದರು. #nationalgirlchildday #savegirlchild

Comments