RS W🌍RLD
January 21, 2025 at 05:52 PM
*Geography General Keywords*
*ಭೂಗೋಳಶಾಸ್ತ್ರದ ಸಾಮಾನ್ಯಜ್ಞಾನ*
(1) ಭೂಮಿ ಗೋಳಾಕಾರವಾಗಿದೆ ಮತ್ತು ಗ್ರಹಗಳ ಬಗ್ಗೆ ತಿಳಿಸಿದ ವ್ಯಕ್ತಿ ಯಾರು?
Ans) ಆರ್ಯಭಟ
2) ಸುಂದರಿ ಮರಗಳು ಯಾವ ಬಗೆಯ ಕಾಡುಗಳಲ್ಲಿ ಕಂಡುಬರುತ್ತದೆ?
Ans) ಮ್ಯಾನ್ ಗ್ರೋವ್ ಬಗೆಯ ಕಾಡುಗಳಲ್ಲಿ
3) ಮ್ಯಾನ್ ಗ್ರೋವ್ ಕಾಡುಗಳ ಅತ್ಯಧಿಕ ಪ್ರಮಾಣದಲ್ಲಿ ಎಲ್ಲಿ ಕಾಣಬಹುದು?
Ans) ಉಬ್ಬರವಿಳಿತ ಪ್ರಭಾವದ ನದಿಗಳ ಪ್ರದೇಶಗಳಲ್ಲಿ
4) ಭಾರತದಲ್ಲಿ ಅತ್ಯಂತ ವಿಶಾಲವಾದ ಹುಲಿ ಅಭಯಾರಣ್ಯವನ್ನು ಹೊಂದಿರುವ ರಾಜ್ಯ ಯಾವುದು?
Ans) ಕರ್ನಾಟಕ
5) ರಾಜ್ಯದಲ್ಲಿ ಕರಡಿಗಳಿಗಾಗಿ ಸ್ಥಾಪಿಸಿರುವ ರಕ್ಷಣಾಧಾಮ ಎಲ್ಲಿದೆ?
Ans) ಬಳ್ಳಾರಿ
6) ಭಾರತದಲ್ಲಿ ಅತೀ ಹೆಚ್ಚು ವಿಸ್ತೀರ್ಣದ ಅರಣ್ಯಗಳನ್ನೊಳಗೊಂಡಿರುವ ರಾಜ್ಯ ಯಾವುದು?
Ans) ಮಧ್ಯ ಪ್ರದೇಶ
7) ಕೇಂದ್ರಾಡಳಿತ ಪ್ರದೇಶಗಳಲ್ಲಿ ಅತಿ ಹೆಚ್ಚು ಅರಣ್ಯಗಳಿಂದ ಕೂಡಿರುವ ದ್ವೀಪಗಳು ಯಾವುದು?
Ans) ಅಂಡಮಾನ್ ಮತ್ತು ನಿಕೋಬಾರ್
8) ಭಾರತದಲ್ಲಿ ಅತಿ ಕಡಿಮೆ ಶೇಕಡಾವಾರು ಅರಣ್ಯ ಪ್ರದೇಶ ಹೊಂದಿರುವ ರಾಜ್ಯ ಯಾವುದು?
Ans) ಹರಿಯಾಣ
9) ಕರ್ನಾಟಕ ರಾಜ್ಯದ ಒಟ್ಟು ವಿಸ್ತೀರ್ಣ ಬಗ್ಗೆ ತಿಳಿಸಿ?
Ans) 1,91,791 ಚ.ಕಿ.ಮೀ.ಗಳು
10) ಕಾವೇರಿ ನದಿಯು ಉಗಮ ಹೊಂದುವ ಸ್ಥಳ ಯಾವುದು?
Ans) ಕರ್ನಾಟಕದ ಕೊಡಗು ಜಿಲ್ಲೆಯ ತಲಕಾವೇರಿ
11) ಕಾವೇರಿ ನದಿಯು ಶಿವಸಮುದ್ರದ ಬಳಿ ಹರಿಯುವಾಗ ಉಂಟಾಗುವ ಎರಡು ಜಲಪಾತಗಳು ಯಾವುವು?
Ans) " ಗಗನ ಚುಕ್ಕಿ " ಮತ್ತು " ಭರಚುಕ್ಕಿ"
12) ಕರ್ನಾಟಕದ ಮೊದಲ ಅಣೆಕಟ್ಟು ಯಾವುದು?
Ans) ಕನ್ನಂಬಾಡಿ ಅಣೆಕಟ್ಟು
14) 1928 ಮೇ 23 ರಂದು ಕರ್ನಾಟಕ ರಾಜ್ಯದ ಯಾವ ಜಿಲ್ಲೆಯಲ್ಲಿ ಅತಿ ಹೆಚ್ಚು ಉಷ್ಣಾಂಶ ದಾಖಲಾಗಿದೆ?
Ans) ರಾಯಚೂರು 45.6 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ
15) ಕರ್ನಾಟಕದಲ್ಲಿ 1918 ಡಿಸೆಂಬರ್ 16 ರಂದು ಅತೀ ಕಡಿಮೆ ಉಷ್ಣಾಂಶ 2.8 ಡಿಗ್ರಿ ಸೆಲ್ಸಿಯಸ್ ದಾಖಲಾದ ಜಿಲ್ಲೆ ಯಾವುದು?
Ans) ಬೀದರ್
16) ಕರ್ನಾಟಕದಲ್ಲಿ ಅತ್ಯಂತ ಕಡಿಮೆ ಮಳೆಯಾಗುವ ಪ್ರದೇಶ ಯಾವುದು?
Ans) ಚಳ್ಳಕೆರೆ (456 ಮಿ.ಮೀ)
17) ಶ್ರೀಗಂಧದ ಮರಗಳು ಹೆಚ್ಚಾಗಿ ಕಂಡುಬರುವ ರಾಜ್ಯ ಯಾವುದು?
Ans) ಕರ್ನಾಟಕ
18) ರಾಜೀವ್ ಗಾಂಧಿ ಉದ್ಯಾನವನ ಇರುವ ಸ್ಥಳ ಯಾವುದು?
Ans) ಕೊಡಗು ಜಿಲ್ಲೆಯ ನಾಗರಹೊಳೆ
19) ಬಂಡೀಪುರ ರಾಷ್ಟ್ರೀಯ ಉದ್ಯಾನವನ ಯಾವ ಜಿಲ್ಲೆಯಲ್ಲಿದೆ?
Ans) ಚಾಮರಾಜನಗರ
20) ಭಾರತದ ಯಾವ ಭಾಗವು ಮಳೆಗಾಲದಲ್ಲಿ ಮಳೆಯನ್ನು ಪಡೆಯುವುದಿಲ್ಲ?
Ans) ತಮಿಳುನಾಡು
21) ಓಜೋನ್ ಪದರ ವಲಯವು ವಾಯುಮಂಡಲದ ಯಾವ ಸ್ತರದಲ್ಲಿದೆ?
Ans) ಸಮೋಷ್ಣ ಮಂಡಲ
22) ಸಹಸ್ರ ಸರೋವರಗಳ ನಾಡು ಯಾವುದು?
Ans) ಫಿನ್ ಲ್ಯಾಂಡ್
23) ಯುರೋಪಿನ ಅತಿ ಉದ್ದವಾದ ನದಿ ಯಾವುದು?
Ans) ವೋಲ್ಗಾ ನದಿ
24) ಪ್ರಪಂಚದ ಅತ್ಯಂತ ದೊಡ್ಡ ಸಿಹಿನೀರಿನ ಸರೋವರ ಯಾವುದು?
Ans) ಸುಪೀರಿಯರ್
25) ಪ್ರಪಂಚದಲ್ಲೆ ಅತ್ಯಂತ ದೊಡ್ಡದಾದ ಉಪ್ಪು ನೀರಿನ ಸರೋವರ ಯಾವುದು?
Ans) ಕ್ಯಾಸ್ಪಿಯನ್ ಸರೋವರ
26) ಭಾರತದಲ್ಲಿ ಕಂಡುಬರುವ ಸಿಹಿನೀರಿನ ಸರೋವರಗಳನ್ನು ತಿಳಿಸಿ?
Ans) ದಾಲ್ ( ಜಮ್ಮು ಮತ್ತು ಕಾಶ್ಮೀರ) ,ನಾಲ್(ಳ್) (ಗುಜರಾತ್) , ಕೊಲ್ಲೇರು ( ಆಂಧ್ರ ಪ್ರದೇಶ), ವಲ್ಲಾರ್ ( ತಮಿಳುನಾಡು) .
27) ಜಗತ್ತಿನ ದೊಡ್ಡ ನದಿ ದ್ವೀಪ ಮರಾಜೋ ಇದನ್ನು ನಿರ್ಮಿಸಿರುವ ನದಿ ಯಾವುದು?
Ans) ಅಮೆಜಾನ್ ನದಿ
28) ಪ್ರಪಂಚದ ಸುತ್ತ ಜಲಾಯನ ಕೈಗೊಂಡ ಮೊಟ್ಟ ಮೊದಲ ನೌಕೆ ಯಾವುದು?
Ans) ವಿಕ್ಟೋರಿಯ ನೌಕೆ
29) ಮರಿಹುಲಿಗಳು ಎಂದು ಖ್ಯಾತವಾದ ದೇಶಗಳು ಯಾವುವು?
Ans) ಮಲೇಷಿಯಾ ಮತ್ತು ಥೈಲ್ಯಾಂಡ್
30) ಭತ್ತದ ಉತ್ಪಾದನೆಯಲ್ಲಿ ಪ್ರಥಮ ಸ್ಥಾನರಲ್ಲಿರುವ ದೇಶ ಯಾವುದು?
Ans) ಚೀನಾ
31) ಭಾರತದಲ್ಲಿ ಅತಿ ಹೆಚ್ಚು ಭತ್ತವನ್ನು ಉತ್ಪಾದಿಸುವ ರಾಜ್ಯ ಯಾವುದು?
Ans) ೧. ಪಶ್ಚಿಮ ಬಂಗಾಳ ೨.ಉತ್ತರ ಪ್ರದೇಶ ೩. ಆಂಧ್ರಪ್ರದೇಶ
32) ಭಾರತದಲ್ಲಿ ಭತ್ತದ ಇಳುವರಿಯ ಪ್ರಮಾಣದಲ್ಲಿ ಮೊದಲನೆಯ ಸ್ಥಾನದಲ್ಲಿರುವ ರಾಜ್ಯ ಯಾವುದು?
Ans) ಪಂಜಾಬ್
33) ಬಾಸುಮತಿ ಅಕ್ಕಿಯ ರಪ್ತಿನಲ್ಲಿ ಪ್ರಪಂಚದಲ್ಲಿ ಮೊದಲ ಸ್ಥಾನದಲ್ಲಿರುವ ದೇಶ ಯಾವುದು?
Ans) ಭಾರತ
34) ಗೋಧಿಯ ಉತ್ಪಾದನೆಯಲ್ಲಿ ಪ್ರಪಂಚದಲ್ಲಿಯೇ ಮೊದಲ ಸ್ಥಾನದಲ್ಲಿರುವ ರಾಷ್ಟ್ರ ಯಾವುದು?
Ans) ೧. ಚೀನಾ ೨. ಭಾರತ
35) ಭಾರತದಲ್ಲಿ ಗೋಧಿಯ ಉತ್ಪಾದನೆಯಲ್ಲಿ ಮೊದಲ ಸ್ಥಾನದಲ್ಲಿರುವ ರಾಜ್ಯ ಯಾವುದು?
Ans) ೧. ಉತ್ತರ ಪ್ರದೇಶ ೨. ಪಂಜಾಬ್ ೩. ಹರಿಯಾಣ
36) " ಭಾರತದ ಗೋಧಿಯ ಕಣಜ " ಎಂದು ಯಾವ ರಾಜ್ಯವನ್ನು ಕರೆಯುತ್ತಾರೆ?
Ans) ಪಂಜಾಬ್
37) ಕಬ್ಬಿನ ಕ್ಷೇತ್ರ ಮತ್ತು ಉತ್ಪಾದನೆಯಲ್ಲಿ ಮೊದಲ ಸ್ಥಾನದಲ್ಲಿರುವ ದೇಶ ಯಾವುದು?
Ans) ೧.ಬ್ರೆಜಿಲ್ ೨. ಭಾರತ
38) ಭಾರತದಲ್ಲಿ ಅತಿ ಹೆಚ್ಚು ಕಬ್ಬನ್ನು ಬೆಳೆಯುವ ರಾಜ್ಯ ಯಾವುದು?
Ans) ೧.ಉತ್ತರ ಪ್ರದೇಶ ೨. ಮಹಾರಾಷ್ಟ್ರ ೩. ಆಂದ್ರ ಪ್ರದೇಶ ೪. ಕರ್ನಾಟಕ
39) " ಭಾರತದ ಜಾವಾ " ಎಂದು ಯಾವುದನ್ನು ಕರೆಯುತ್ತಾರೆ?
Ans) ಗೋರಖ್ ಪುರ
40) ಭೂಗೋಳದ ಅತಿ ಎತ್ತರವಾದ ಖಂಡ ಯಾವುದು?
Ans) ಅಂಟಾರ್ಟಿಕಾ
41) ಪ್ರಪಂಚದಲ್ಲಿ ಅತಿ ಹೆಚ್ಚು ಭತ್ತದ ಕ್ಷೇತ್ರವನ್ನು ಹೊಂದಿರುವ ದೇಶ ಯಾವುದು?
Ans) ಭಾರತ
42) ಹೊಗೆಸೊಪ್ಪು ( ನಿಕೋಷಿಯಾನ್) ಉತ್ಪಾದನೆಯಲ್ಲಿ ಪ್ರಥಮ ಸ್ಥಾನದಲ್ಲಿರುವ ದೇಶ ಯಾವುದು?
Ans) ೧. ಚೀನಾ ೨. ಅಮೆರಿಕ ೩. ಭಾರತ
43) ಸಿಗರೇಟ್ ತಯಾರಿಕೆಗೆ ಬಳಸುವ ಹೊಗೆಸೊಪ್ಪು ಯಾವುದು?
Ans) ವರ್ಜೀನಿಯಾ ಹೊಗೆಸೊಪ್ಪು
44) ಹೊಗೆಸೊಪ್ಪು ಉತ್ಪಾದನೆಯಲ್ಲಿ ಪ್ರಥಮ ಸ್ಥಾನದಲ್ಲಿರುವ ರಾಜ್ಯ ಯಾವುದು?
Ans) ೧.ಆಂಧ್ರಪ್ರದೇಶ ೨. ಗುಜರಾತ್ ೩. ಕರ್ನಾಟಕ
45) ಹತ್ತಿಯ ಉತ್ಪಾದನೆಯಲ್ಲಿ ಪ್ರಥಮ ಸ್ಥಾನದಲ್ಲಿರುವ ದೇಶ ಯಾವುದು?
Ans) ೧.ಚೀನಾ (೨.ಅಮೆರಿಕ ಸಂಯುಕ್ತ ಸಂಸ್ಥಾನ ೩.ಭಾರತ)
46) ಹತ್ತಿಯನ್ನು ಸಾಮಾನ್ಯವಾಗಿ ಯಾವ ಕಾಲದಲ್ಲಿ ಉತ್ಪಾದಿಸಲಾಗುತ್ತದೆ?
Ans) ಮುಂಗಾರಿನ ಅವಧಿಯಲ್ಲಿ ಅಂದರೆ ಖಾರೀಪ್ ಬೆಳೆಯಾಗಿ
❤️
1