ಕಂಪದಕೋಡಿ ವೆದರ್ ರಿಪೋರ್ಟ್ - (ಕರ್ನಾಟಕ ರಾಜ್ಯದ ಹವಾಮಾನ ವರದಿ)
February 19, 2025 at 02:55 PM
ಕರಾವಳಿ ಜಿಲ್ಲೆಗಳಲ್ಲಿ ಕಳೆದ 2-3 ದಿನಗಳಿಂದ ಸಂಜೆಯ ನಂತರ ಮೋಡದ ವಾತಾವರಣ ಬರುತ್ತಿರುವ ಕಾರಣ ಸೆಕೆ ಆರಂಭವಾಗಿದೆ. ಇವತ್ತು ಸಂಜೆಯ ನಂತರ ಸುಳ್ಯ ತಾಲ್ಲೂಕಿನ ಕಲ್ಲಾಜೆ ಹರಿಹರ ಮಲ್ಲಾರ ಕಟ್ಟ-ಕೊಲ್ಲಮೊಗ್ರು ಸುತ್ತಮುತ್ತ ಸಣ್ಣಕೆ ತುಂತುರು ಮಳೆ ಬಂತು... ಮುಂದಿನ ದಿನಗಳಲ್ಲಿ ಸೆಕೆ ಜಾಸ್ತಿಯಾಗುತ್ತಾ ಹೋಗಲಿದ್ದು ಫೆಬ್ರವರಿ 22 ರ ನಂತರ ಬಂಗಾಳಕೊಲ್ಲಿಯ ದಕ್ಷಿಣ ಭಾಗದಲ್ಲಿ ವಾಯುಭಾರಕುಸಿತವಾಗುವ ಸಾಧ್ಯತೆ ಇದೆ. ಇದರಿಂದಾಗಿ ಮಾರ್ಚ್ ಮೊದಲ ವಾರ ತನಕ ಮೋಡ ಮತ್ತು ಸೆಕೆ ಮುಂದುವರಿಯಲಿದೆ.. ಕೆಲವು ದಿನ ಅಲ್ಲಲ್ಲಿ ತುಂತುರು ಮಳೆಯಾಗಲಿದ್ದು ಸಧ್ಯ ದೊಡ್ಡ ಮಳೆಯ ಮುನ್ಸೂಚನೆ ಇಲ್ಲ.
👍 🙏 😮 😢 28

Comments