ಶ್ರೀ ದತ್ತ ಪ್ರಸಾರ
                                
                            
                            
                    
                                
                                
                                January 31, 2025 at 02:00 AM
                               
                            
                        
                            *ಶ್ರೀ ದತ್ತ ಪ್ರಸಾದ – 42 -ಮೊಗಿಲಿಚೆರ್ಲಾ ಅವಧೂತ ಶ್ರೀ ದತ್ತಾತ್ರೇಯ ಸ್ವಾಮಿ ಮಂದಿರದಲ್ಲಿ ಭಕ್ತರ ಅನುಭವಗಳು - ಭಕ್ತಿ..ಸಾಕ್ಷಿ..*
"ನಾನು ವೆಂಕಟೇಶ್ವರ ಸ್ವಾಮಿಯನ್ನು ಮಾತ್ರ ನಂಬುತ್ತೇನೆ ಪ್ರಸಾದ್ ಸರ್... ಹೀಗೆ ಹೇಳುತ್ತಿದ್ದೇನೆ ಎಂದು ಏನೂ ತಪ್ಪಾಗಿ ಅಂದುಕೊಳ್ಳಬೇಡಿ... ನನಗೆ ಈ ಬಾಬಾ, ಯೋಗಿಗಳು, ಸಿದ್ಧರು ಮತ್ತು ಈ ರೀತಿಯ Man made Gods ಅಂದರೆ ಅಷ್ಟು ಭಕ್ತಿ ಇಲ್ಲ... ಇನ್ನೂ ಹೆಚ್ಚು ಸ್ಪಷ್ಟವಾಗಿ ಹೇಳಬೇಕಾದರೆ, ನಂಬಿಕೆಯೂ ಇಲ್ಲ... ಆದರೆ ಈ ಸ್ವಾಮಿಯವರು ನನ್ನ ವಿಷಯದಲ್ಲಿ ಒಂದು ಋಜುವಾತನ್ನು ತೋರಿಸಿದ್ದಾರೆ," ಎಂದು ಕಾವಳಿ ರಿಂದ ಬಂದ ನಂದನವನಂ ಮಧು ಅವರು ಹೇಳಿದರು. ಮಧು ಅವರು ಕಾವಳಿ ಬ್ರಾಹ್ಮಣ ಸಂಘದ ಉಪಾಧ್ಯಕ್ಷರಾಗಿ ಇದ್ದಾರೆ. ಮಧು ಅವರು ಮತ್ತು ಅವರೊಂದಿಗೆ ಕಾವಳಿ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಪ್ರಸಾದ್ ಅವರು ಇಬ್ಬರೂ ಒಟ್ಟಿಗೆ ಕಳೆದ ವಾರ ಮೊಗಲಿಚೆರ್ಲ ಅವಧೂತ ಶ್ರೀ ದತ್ತಾತ್ರೇಯ ಸ್ವಾಮಿಯವರ ಮಂದಿರಕ್ಕೆ ಬೆಳಗ್ಗೆ 10 ಗಂಟೆಗೆ ಬಂದಿದ್ದರು.
"ನಾನು ಡಯಾಬಿಟಿಕ್ ಪೇಷಂಟ್ ಅಯ್ಯಾ... ಶುಗರ್‌ನಿಂದ ಸಮಸ್ಯೆಗಳಿಗೆ ತುತ್ತಾಗಿದ್ದೇನೆ... ನೀವು ಈ ಸ್ವಾಮಿಯವರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬರೆದ ಲೇಖನಗಳನ್ನು ಎಲ್ಲವೂ ಓದುತ್ತಿದ್ದೇನೆ, ಆದರೆ ದೊಡ್ಡ ಮಟ್ಟದ ನಂಬಿಕೆಯನ್ನು ಬೆಳೆಸಿಕೊಂಡಿಲ್ಲ. ಆ ಸಮಯದಲ್ಲಿ ನನ್ನ ಕಾಲಿನ ತುದಿಯ ಮೇಲೆ, ಬೆರಳರ ಬಳಿಯಲ್ಲಿ ಒಂದು ಗಾಯವಾಯಿತು... ಬಹಳ ಇನ್ಫೆಕ್ಷನ್ ಆಯಿತು ಎಂದು ಡಾಕ್ಟರ್ ಅವರು ಔಷಧಿ ನೀಡಿದರು, ಆದರೆ ಗುಣವಾಗಲಿಲ್ಲ. ಇಬ್ಬರು ಮೂರವರಿಗೆ ತೋರಿಸಿದೆ, ಫಲಿತಾಂಶ ಬಂದಿಲ್ಲ; ಇನ್ಫೆಕ್ಷನ್ ಹೆಚ್ಚಾಗದಂತೆ ನೋಡಿಕೊಳ್ಳಲು ಬೆರಳನ್ನು ತೆಗೆದುಹಾಕಬೇಕು ಎಂದು ಹೇಳಿದ್ದಾರೆ. ಆಗ ನಾನು ಈ ಸ್ವಾಮಿಯವರನ್ನು ನೆನೆಸಿಕೊಂಡೆ... ಒಂದು ಎರಡು ಬಾರಿ ಇಲ್ಲಿಗೆ ಬಂದು ದರ್ಶನ ಮಾಡಿದೆ... ಮೂರೇ ತಿಂಗಳಲ್ಲಿ, ಗಾಯ ಸಂಪೂರ್ಣವಾಗಿ ಮಾಯವಾಯಿತು... ಯಾವುದೇ ಪೀನ್ಸ್ ಅಥವಾ ಇನ್ಫೆಕ್ಷನ್ ಬಾರದಂತೆ ಮಾಡಿ ನಯವಾಯಿತು. ಹಾಗೆಯೇ, ನನ್ನ ಮಗಳ ವಯಸ್ಸು 35 ವರ್ಷ, ಹೃದಯಕ್ಕೆ ಸಂಬಂಧಿಸಿದ ಸ್ವಲ್ಪ ಸಮಸ್ಯೆ ಇದ್ದಂತೆ ತೋಚಿತು, ಡಾಕ್ಟರ್‌ಗೆ ತೋರಿಸಿದ್ದಾಗ, ಹೃದಯದಲ್ಲಿ ಸಮಸ್ಯೆ ಇದ್ದಂತೆ ತಿಳಿಸಿದರು, ಒಂಗೋಲಿಗೆ ಚೆಕ್ ಅಪ್ ಮಾಡಿಸಲು ಹೇಳಿದರು... ಸ್ವಾಮಿಯವರಿಗೆ ನಮಸ್ಕರಿಸಿ ಒಂಗೋಲು ಹೋದೆವು... ರಿಪೋರ್ಟ್‌ಗಳು ಎಲ್ಲಾ ನಾರ್ಮಲ್ ಬಂದವು... ನನ್ನವರೆಗೆ ಇದು ಒಬ್ಬ ಉತ್ತಮ ಅನುಭವ ಪ್ರಸಾದ್ ಸರ್... ನೀವು ಈ ಸ್ವಾಮಿಯವರ ಭಕ್ತರ ಅನುಭವಗಳನ್ನು ಹೀಗೆ ಪೋಸ್ಟ್ ಮಾಡುತ್ತಿದ್ದೀರಿ, ಅನೇಕ ಮಂದಿಗೆ ಉಪಕಾರ ಮಾಡುತ್ತಿದ್ದೀರಿ... ಈ ಸ್ವಾಮಿಯವರು ನ್ಯಾಯವಾದ ಮನಸ್ಸಿನ ಆಶಯಗಳನ್ನು ಈಡೇರಿಸುವವರು," ಎಂದು ಒಬ್ಬ ಭಾವೋದ್ರಿಕ್ತತೆಯೊಂದಿಗೆ ಹೇಳಿದರು.
ಅನೇಕರಾದ ಭಕ್ತರು ಮೊಗಲಿಚೆರ್ಲಕ್ಕೆ ಬಂದು, ಅವಧೂತ ಶ್ರೀ ದತ್ತಾತ್ರೇಯನ ಸಮಾಧಿಯನ್ನು ಭೇಟಿ ಮಾಡಿ, ತಮ್ಮ ತಮ್ಮ ಸಮಸ್ಯೆಗಳನ್ನು ಅಲ್ಲಿ ತಿಳಿಸಿ, ಅವುಗಳು ಪರಿಹಾರವಾದ ನಂತರ ಮರುಭಾಗದಲ್ಲಿಯೇ ಶ್ರೀ ಸ್ವಾಮಿಯವರ ಮಂದಿರಕ್ಕೆ ಬಂದು ಕೃತಜ್ಞತೆಗಳನ್ನು ವ್ಯಕ್ತಪಡಿಸುತ್ತಾರೆ... ಅವರ ಅನುಭವಗಳನ್ನು ನನ್ನೊಂದಿಗೆ ಹಂಚಿಕೊಳ್ಳುತ್ತಾರೆ. ಆ ಅನುಭವಗಳನ್ನು ಬರೆಹ ರೂಪದಲ್ಲಿ ಆವಿಷ್ಕರಿಸುವ ಅವಕಾಶವನ್ನು ನೀಡಿದ ಆ ಅವಧೂತ ಶ್ರೀ ದತ್ತಾತ್ರೇಯನ ಪಾದಗಳಿಗೆ ನಮಸ್ಕರಿಸುತ್ತಾ...
ಸರ್ವಂ,
ಶ್ರೀ ದತ್ತಕೃಪ!
ರಚನೆ: ಶ್ರೀ ಪವನಿ ನಾಗೇಂದ್ರ ಪ್ರಸಾದ್
ಕನ್ನಡ ಅನುವಾದ ಸಹಕಾರ:ಶ್ರೀಮತಿ ಶ್ವೇತ ಡಿ.
-----
(ಮಂದಿರ ವಿವರಗಳಿಗಾಗಿ:  ಪವನಿ ಶ್ರೀ ವಿಷ್ಣು ಕೌಶಿಕ್.. ಶ್ರೀ ದತ್ತಾತ್ರೇಯ ಸ್ವಾಮಿ ಮಂದಿರ.. ಮೊಗಿಲಿಚೆರ್ಲ ಗ್ರಾಮ.. ಲಿಂಗಸಮುದ್ರ ಮಂಡಲ.. SPSR ನೆಲ್ಲೂರು ಜಿಲ್ಲೆ.. ಪಿನ್: 523114.. ಸೆಲ್: 9652429852)