ಶ್ರೀ ದತ್ತ ಪ್ರಸಾರ
ಶ್ರೀ ದತ್ತ ಪ್ರಸಾರ
February 10, 2025 at 01:54 AM
*ಶ್ರೀ ದತ್ತ ಪ್ರಸಾದ – 50 -ಮೊಗಿಲಿಚೆರ್ಲಾ ಅವಧೂತ ಶ್ರೀ ದತ್ತಾತ್ರೇಯ ಸ್ವಾಮಿ ಮಂದಿರದಲ್ಲಿ ಭಕ್ತರ ಅನುಭವಗಳು - ಸೇವಾತತ್ಪರತೆ..* ಎರಡು ವರ್ಷಗಳ ಹಿಂದೆ ದತ್ತದೀಕ್ಷೆ ಆರಂಭವಾಗುವ ವಾರದ ಮೊದಲೇ, "ಅವರು ನಿನ್ನೆ ಸಂಜೆ ಬಂದರು.. ರಾತ್ರಿ ಮಂಟಪದಲ್ಲೇ ಮಲಗಿದ್ದರು.. ಬೆಳಗ್ಗೆಯೇ ಎದ್ದು ಹೊರಗೆ ಹೋಗಿ ಸ್ನಾನ ಮಾಡಿದರು.. ಸಾಮಾನ್ಯ ಸಾಲಿನಲ್ಲಿ ಬಂದು ಹಾರತಿ ತೆಗೆದುಕೊಂಡರು.. ಸಮಾಧಿ ದರ್ಶನವೂ ಅಲ್ಲಿ ಮಾಡಿಕೊಂಡರು.. ನಿಮ್ಮ ಬಗ್ಗೆ ಕೇಳಿದರು.. ನೀವು ಇಂದು ಬರುವಿರೆಂದು ತಿಳಿಸಿದ್ದೇವೆ.. ಮಂಟಪದಲ್ಲಿ ಕುಳಿತು ಸ್ವಾಮಿಯವರ ಚರಿತ್ರೆ ಓದುತ್ತಿದ್ದಾರೆ.. ಕರೆಯಬೇಕೇ?" ಎಂದು ನಮ್ಮ ಸಿಬ್ಬಂದಿ ಕೇಳಿದರು.. ಕರೆಯಲು ಹೇಳಿದೆ.. ಅವರನ್ನು ಕರೆದುಕೊಂಡು ಬಂದರು.. ಅವರು ನನ್ನ ಬಳಿ ಬಂದು ನಿಂತರು.. ಕುಳಿತಾರೆಯೆಂದು ಕೇಳಿದಾಗ, "ನಾನು ನಿಲ್ಲುತ್ತೇನೆ" ಎಂದು ಸೈಗು ಮಾಡಿದರು. "ನಿಮ್ಮ ಹೆಸರೇನು?" ಎಂದು ಕೇಳಿದೆ. ಸ್ವಲ್ಪ ಹೊತ್ತು ಮೌನವಾಗಿದ್ದರು.."ರಾಘವ" ಎಂದರು. "ನನ್ನ ಬಗ್ಗೆ ಕೇಳಿದ್ದೀರಂತೆ.. ಏನಾದರೂ ಮಾತನಾಡಬೇಕೇ?" ಎಂದು ಕೇಳಿದೆ. "ನಿಮಗೆ ಸಮಯ ಇದ್ದರೆ, ಸ್ವಲ್ಪ ಹೊತ್ತು ಮಾತಾಡುತ್ತೇನೆ" ಎಂದರು. "ಸರಿ, ಹೇಳಿ" ಎಂದೆ. "ಬಹು ದಿನಗಳಿಂದ ನಾನು ನಿಮ್ಮನ್ನು ಫೇಸ್ಬುಕ್‌ನಲ್ಲಿ ಅನುಸರಿಸುತ್ತಿದ್ದೇನೆ.. ನೀವು ಮೊಟ್ಟಮೊದಲ ಬಾರಿಗೆ ಸ್ವಾಮಿಯವರ ಚರಿತ್ರೆಯನ್ನು ಪೋಸ್ಟ್ ಮಾಡಿದ ದಿನದಿಂದಲೇ, 2016ರಿಂದ, ನೀವು ಹಾಕುವ ಎಲ್ಲಾ ಪೋಸ್ಟ್‌ಗಳನ್ನು ಆನಂದದಿಂದ ಓದುತ್ತಿದ್ದೇನೆ.. ಈಗ ಎರಡು ವರ್ಷಗಳು ಕಳೆದುಹೋಗಿವೆ.. ನಾನು ಅನಂತಪುರದ ಬಳಿ ವಾಸಿಸುತ್ತೇನೆ.. ಇಷ್ಟು ದಿನಗಳಿಂದ ಇಲ್ಲಿ ಬರುವ ಯತ್ನ ಮಾಡುತ್ತಿದ್ದೇನೆ.. ಯಾವ ದಿನವೂ ಆಗಲಿಲ್ಲ.. ಯಾವಾಗಲೋ ಒಂದು ಅಡ್ಡಿ ಬಂದು, ನನ್ನ ಪ್ರಯಾಣ ಮುಂದೂಡುತ್ತಾ ಇತ್ತು.. ಈ ಬಾರಿ ಒಮ್ಮೆ ನಿರ್ಧಾರ ಮಾಡಿದೆ.. ಯಾವುದೂ ಅಡ್ಡಿಯಾಗಲಿಲ್ಲ.. ಏನೋ ಒಂದು ಶಕ್ತಿ ನನ್ನನ್ನು ತಡೆಹಿಡಿಯದೇ, ಎಲ್ಲ ಜಾಗದಲ್ಲಿಯೂ ಬಸ್ ಸಿಕ್ಕಿತು.. ಪಾಮೂರು ತಲುಪಿದೆ.. ಅಲ್ಲಿ ವಿಚಾರಿಸಿದಾಗ, ಇಲ್ಲಿ ಬರುವ ನೇರ ಬಸ್ ಇಲ್ಲ.. 'ಮಾಲಕೊಂಡಕ್ಕೆ ಹೋಗಿ, ಅಲ್ಲಿಂದ ಆಟೋ ಹತ್ತಿ ಹೋಗಿ' ಎಂದು ತಿಳಿಸಿದರು. ಅದೇ ಸಮಯದಲ್ಲಿ, ಒಬ್ಬ ವೃದ್ಧ ನನ್ನ ಬಳಿ ಬಂದು, 'ನೀವು ಮೊಗಿಲಿಚೆರ್ಲ ದೇಗುಲಕ್ಕೆ ಹೋಗಬೇಕೆ?.. ನಾನು ಕೂಡ ಅಲ್ಲಿಗೆ ಹೋಗುತ್ತಿದ್ದೇನೆ.. ನಾವು ಇಬ್ಬರೂ ಒಟ್ಟಿಗೆ ಹೋಗೋಣ' ಎಂದು ಕೇಳಿ, ತಮ್ಮ ಬೈಕ್‌ನಲ್ಲಿ ನನ್ನನ್ನು ಇಲ್ಲಿ ತಲುಪಿಸಿದರು.. ಸ್ವಾಮಿಯ ದೇಗುಲದ ಮುಂದೆ ಇಳಿಸಿ, ದೇಗುಲಕ್ಕೆ ಹೊರಗಿನಿಂದಲೇ ನಮಸ್ಕಾರ ಮಾಡಿ ಹೋಗಿಬಿಟ್ಟರು.. ಇಷ್ಟು ದಿನಗಳ ನಂತರ, ಸ್ವಾಮಿಯವರು ನನ್ನನ್ನು ತಮ್ಮ ಬಳಿ ಕರೆಯಿಸಿಕೊಂಡಿದ್ದಾರೆಂದು ನನಗೆ ಅನಿಸಿದ್ದು, ನಿಮಗೆ ಈ ಅನುಭವವನ್ನು ಹೇಳಲು ನಿಮ್ಮ ಬಗ್ಗೆ ಕೇಳಿದ್ದೆ" ಎಂದರು. "ನನಗೆ ಮದುವೆ ಆಗಿ ಆರು ವರ್ಷಗಳಾಯಿತು.. ಇನ್ನೂ ಮಕ್ಕಳಾಗಿಲ್ಲ.. ಸ್ವಾಮಿಯವರಿಗೆ ಅನೇಕ ಬಾರಿ ಮನಸಿನಲ್ಲಿ ಪ್ರಾರ್ಥಿಸಿದೆ.. ಈ ಬಾರಿ ಇಲ್ಲಿ ದರ್ಶನ ಪಡೆದು, ನನ್ನ ಮನಸ್ಸಿನ ಆಶಯವನ್ನು ತಿಳಿಸುವುದೆಂದುಕೊಂಡೆ.. ನಾನು ಇಲ್ಲಿ ಮೂರು ದಿನಗಳು ಉಳಿಯುತ್ತೇನೆ.. ಸ್ವಾಮಿಯವರಿಗೆ ಮಾಡುವ ಸೇವೆಯಲ್ಲಿ ನನಗೂ ಒಂದು ಅವಕಾಶ ನೀಡಿದರೆ ಕೃಪೆ" ಎಂದರು. ನನ್ನ ಸಿಬ್ಬಂದಿಯನ್ನು ಕರೆದು, "ಏನಾದರೂ ಕೆಲಸ ಇದ್ದರೆ ನೀಡಿ" ಎಂದು ತಿಳಿಸಿದ್ದೆ. ಅವರು ಒಪ್ಪಿದರು. ರಾಘವ ಸ್ವಾಮಿಯ ದೇಗುಲದಲ್ಲಿ ಮೂರು ದಿನಗಳ ಕಾಲ ಇದ್ದರು.. ಮುಂಜಾನೆ ಎದ್ದು, ಸ್ನಾನ ಮಾಡಿ ಬಂದು, ದೇಗುಲವನ್ನು ಶುಚಿಮಾಡುತ್ತಿದ್ದರು.. ಪೂಜಾ ಸಾಮಾನುಗಳನ್ನು ತೊಳೆದು ಇಡುತ್ತಿದ್ದರು.. ಹೀಗೆ ಎಲ್ಲ ರೀತಿಯ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು.. ನಾವು ದತ್ತದೀಕ್ಷೆಯ ವ್ಯವಸ್ಥೆಗಳಲ್ಲಿ ಬ್ಯುಸಿಯಾಗಿದ್ದೆವು. "ಅಯ್ಯಾ, ನಾನಿನ್ನೆಯಂದು ನನ್ನ ಊರಿಗೆ ಹೋಗುತ್ತೇನೆ.. ಮತ್ತೆ ಎರಡು ದಿನಗಳಲ್ಲಿ ಹಿಂತಿರುಗಿ, ಈ ಬಾರಿ ನಾನು ಕೂಡ ದತ್ತದೀಕ್ಷೆ ತೆಗೆದುಕೊಳ್ಳುತ್ತೇನೆ.. ನನ್ನ ಹೆಂಡತಿಗೆ, ತಾಯಿ-ತಂದೆಗೆ ಹೇಳಿ ಬರುತ್ತೇನೆ" ಎಂದರು.. ಸರಿ ಎಂದೆ. ಊರಿಗೆ ಹೋದರು. ದತ್ತದೀಕ್ಷೆಯ ಮೊದಲೇ, ರಾಘವ ಬಂದರು.. ದೀಕ್ಷೆ ತೆಗೆದುಕೊಂಡರು.. "ಅಯ್ಯಾ, ನಾನು ಮನೆಗೆ ಹೇಳಿಕೊಂಡು ಬಂದಿದ್ದೇನೆ.. ಈ ನಲವತ್ತು ದಿನಗಳು ಇಲ್ಲಿ ಇದ್ದು, ಸ್ವಾಮಿಯವರಿಗೆ ಸೇವೆ ಮಾಡುತ್ತೇನೆ" ಎಂದರು.. ಅವರ ಬಗ್ಗೆ ಚಿಂತಿಸಲು ಏನೂ ಇರಲಿಲ್ಲ, ಅದರಿಂದ ಸರಿ ಎಂದೆ.. ಆ ದಿನದಿಂದ ಈ ನಲವತ್ತು ದಿನಗಳವರೆಗೂ ಅವರು ನಮ್ಮ ಸಿಬ್ಬಂದಿಯೊಂದಿಗೆ ಎಲ್ಲಾ ಕೆಲಸಗಳಲ್ಲಿ ಭಾಗವಹಿಸುತ್ತಿದ್ದರು.. ನಿತ್ಯವಾಗಿ ದತ್ತನಾಮ ಸ್ಮರಣೆ ಮಾಡುತ್ತಾ, ತಮಗೆ ನೀಡಿದ ಕೆಲಸವನ್ನು ಬಹಳ ಶ್ರದ್ಧೆಯಿಂದ ಮಾಡುತ್ತಿದ್ದರು.. ದೀಕ್ಷೆಯಲ್ಲಿದ್ದ ಸ್ವಾಮಿಗಳಿಗೆ ಎರಡು ಬಾರಿ ಊಟದ ವ್ಯವಸ್ಥೆಯನ್ನು ನೋಡುತ್ತಿದ್ದರು.. ಎರಡು ಸೋಮವಾರಗಳಲ್ಲಿ, ಆ ಸೇವೆಯ ಖರ್ಚನ್ನು ತಾವು ಮಾಡಿದರು. ಸ್ವಾಮಿಯ ಆರಾಧನೆಯ ದಿನ ಅಗ್ನಿಗಂಡವನ್ನು ದಾಟಿ ಬಂದು, "ಅಯ್ಯಾ, ದತ್ತನ ಕೃಪೆಯಿಂದ ದೀಕ್ಷೆಯನ್ನು ಪೂರ್ಣಗೊಳಿಸಿದೆ.. ನೀವು ಮಾಲೆಯನ್ನು ತೆಗೆದರೆ, ದೀಕ್ಷೆ ಮುಗಿಯುತ್ತದೆ" ಎಂದರು. ಅವರ ಮಲೆಗಳನ್ನು ತೆಗೆದು, ಅವರಿಗೆ ಹಸ್ತಾಂತರಿಸಿದೆ.. ಭಕ್ತಿಯಿಂದ ಕಣ್ಣೀರು ಹಾಕುತ್ತಾ, ಸ್ವಾಮಿಯ ಸಮಾಧಿಯ ಕಡೆ ಹೋಗಿ, ನಮಸ್ಕಾರ ಮಾಡಿ, ಹಿಂದಿರುಗಿದರು. ಆ ದಿನವೇ ತಮ್ಮ ಊರಿಗೆ ಹೋದರು. ಇನ್ನೂ ನಾಲ್ಕು ತಿಂಗಳುಗಳ ನಂತರ, ರಾಘವ ತನ್ನ ಹೆಂಡತಿಯನ್ನು ಕರೆದುಕೊಂಡು ಮತ್ತೆ ಬಂದರು. "ಅಯ್ಯಾ, ಪ್ರತಿವರ್ಷ ನಾನು ದೀಕ್ಷೆ ತೆಗೆದುಕೊಳ್ಳುತ್ತೇನೆ.. ಸ್ವಾಮಿಯವರು ಅದ್ಭುತ ಫಲವನ್ನು ಕೊಟ್ಟಿದ್ದಾರೆ.. ನನ್ನ ಹೆಂಡತಿ ಈಗ ಗರ್ಭವತಿ.. ನಾವು ಇಬ್ಬರೂ ಸ್ವಾಮಿಯ ಸಮಾಧಿಯ ದರ್ಶನ ಮಾಡಿ ಹೋಗೋಣ" ಎಂದರು. "ನಿನ್ನ ಸೇವಾತತ್ಪರತೆ, ಭಕ್ತಿ, ಸ್ವಾಮಿಯವರು ಗಮನಿಸಿ, ನಿನ್ನನ್ನು ಇಲ್ಲಿ ಕರೆಯಿಸಿಕೊಂಡರು.. ನಿನ್ನ ಆಶೆಯನ್ನು ಪೂರೈಸಿದ್ದಾರೆ" ಎಂದೆ. ಈ ಬಾರಿ ಕೂಡ ದತ್ತದೀಕ್ಷೆಗೆ ಅವರು ಬರುತ್ತಾರೆ ಎಂದರು.. ದೀಕ್ಷೆಯ ಸಮಯದಲ್ಲಿ ಎರಡು ಸೋಮವಾರಗಳಲ್ಲಿ ತಾವು ಅನ್ನಸಂತರ್ಪಣೆ ಮಾಡಲಿದ್ದಾರೆ, ಅದಕ್ಕೆ ಅವಕಾಶ ನೀಡಬೇಕೆಂದು ಕೋರಿ, "ಸೋಮವಾರ ಮಾತ್ರವೇ ಏಕೆ? ಯಾವುದಾದರೂ ವಿಶೇಷವೇ?" ಎಂದು ಕೇಳಿದಾಗ, "ನಮ್ಮ ಮನೆ ದೇವರು ಈಶ್ವರನು.. ಅವರ ಪ್ರೀತಿಗಾಗಿ ಸೋಮವಾರದಂದು ಅನ್ನದಾನ ಮಾಡಬೇಕೆಂಬ ನನ್ನ ಸಂಕಲ್ಪ" ಎಂದರು. ನಿಜವಾಗಿ, ಸ್ವಾಮಿಯವರು ಅವರಿಗೆ ಎಲ್ಲ ರೀತಿಯ ಅನುಮತಿಯನ್ನು ನೀಡಿದ್ದಾರೆ.. ನಮ್ಮ ಅನುಮತಿ ಕೇವಲ ಲಾಂಛನ.. ರಾಘವನಲ್ಲಿರುವ ಸೇವಾಭಾವನೆ, ಭಕ್ತಿ, ವಿನಯ.. ಈ ಮೂರು ಗುಣಗಳು, ಅವರನ್ನು ಸ್ವಾಮಿಯ ಕೃಪೆಗೆ ಪಾತ್ರನಾಗುವಂತೆ ಮಾಡಿವೆ.. ಆ ಸದುಗುಣಗಳು ನಮಲ್ಲಿದ್ದರೆ, ನಮ್ಮ ಮೇಲೂ ಸ್ವಾಮಿಯ ಕೃಪೆ ಹರಿಯುತ್ತದೆ.. ಸರ್ವಂ, ಶ್ರೀ ದತ್ತಕೃಪ! ರಚನೆ: ಶ್ರೀ ಪವನಿ ನಾಗೇಂದ್ರ ಪ್ರಸಾದ್ ಕನ್ನಡ ಅನುವಾದ ಸಹಕಾರ:ಶ್ರೀಮತಿ ಶ್ವೇತ ಡಿ. ----- (ಮಂದಿರ ವಿವರಗಳಿಗಾಗಿ: ಪವನಿ ಶ್ರೀ ವಿಷ್ಣು ಕೌಶಿಕ್.. ಶ್ರೀ ದತ್ತಾತ್ರೇಯ ಸ್ವಾಮಿ ಮಂದಿರ.. ಮೊಗಿಲಿಚೆರ್ಲ ಗ್ರಾಮ.. ಲಿಂಗಸಮುದ್ರ ಮಂಡಲ.. SPSR ನೆಲ್ಲೂರು ಜಿಲ್ಲೆ.. ಪಿನ್: 523114.. ಸೆಲ್: 9652429852)

Comments