ಆಳ್ವಾಸ್ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ
ಆಳ್ವಾಸ್ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ
February 24, 2025 at 04:34 AM
ಆತ್ಮೀಯರೇ, ದಿನಾಂಕ 02/03/2025ರಂದು ನಡೆಯುವ ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯ ಆಯ್ಕೆ ಪ್ರಕ್ರಿಯೆಯ ಪೂರ್ವಭಾವಿಯಾಗಿ ಕೆಲವಾರು ಸೂಚನೆಗಳು... * ಪರೀಕ್ಷೆಯ ಹಿಂದಿನದಿನ ಬಂದಲ್ಲಿ ಕೃಷಿ ಸಿರಿ ವೇದಿಕೆಯಲ್ಲಿ (open Hall) ವಸತಿ ವ್ಯವಸ್ಥೆ ಇರುತ್ತದೆ.. ಊಟ/ತಿಂಡಿ ಇನ್ನಿತರ ವ್ಯವಸ್ಥೆ ಇರುವುದಿಲ್ಲ. * ಬೇರೆ ಬೇರೆ ಊರಿನಿಂದ ಆಗಮಿಸುವ ಪಾಲಕರಿಗೆ ಧರ್ಮಸ್ಥಳಕ್ಕೆ ತೆರಳುವ ಹೆಚ್ಚಿನ ಎಲ್ಲಾ KSRTC ಬಸ್ಗಳು ಮೂಡುಬಿದಿರೆಗೆ ಬರುತ್ತದೆ.. ಬಜ್ಪೆಯ ಸಮೀಪ ಏರ್ಪೋರ್ಟ್ ವ್ಯವಸ್ಥೆ ಇದೆ(15KM)ಬಂಟ್ವಾಳದಲ್ಲಿ ರೈಲ್ವೆ ವ್ಯವಸ್ಥೆ ಇದೆ(25KM ) * ಪರೀಕ್ಷೆ ಬರೆಯಲು ಪೆನ್ನು ಪೆನ್ಸಿಲ್, ರಬ್ಬರ್ ಮಾತ್ರ ಅಗತ್ಯವಿರುತ್ತದೆ,, ಬೇರೆ ಫೋಟೋ, ಆಧಾರ್ ಕಾರ್ಡ್ ಪ್ರತಿಗಳು ಅಗತ್ಯವಿರುವುದಿಲ್ಲ, * ಆಳ್ವಾಸ್ ಕ್ಯಾಂಪಸ್ ಮೂಡುಬಿದಿರೆ ಸಿಟಿಗೆ ಅತ್ಯಂತ ಸಮೀಪದಲ್ಲಿದೆ. * ಆಳ್ವಾಸ್ ಕ್ಯಾಂಪಸ್ ಶಿಸ್ತು, ಶುಚಿತ್ವ ಕ್ಕೆ ಹೆಸರಾಗಿದ್ದು ಇಡೀ ಆಯ್ಕೆ ಪ್ರಕ್ರಿಯೆಯಲ್ಲಿ ಇದನ್ನು ತಾವೆಲ್ಲರೂ ಕಾಪಾಡಿಕೊಂಡು ಬರುವುದು.. ಅನಗತ್ಯ ಗಲಾಟೆ, ಬೊಬ್ಬೆ ಇನ್ನಿತರ ಅಹಿತಕರ ಘಟನೆಗಳಿಗೆ ಅವಕಾಶ ಮಾಡಿಕೊಡದಿರಿ.. ಇಂತಹ ಘಟನೆ ನಡೆದಲ್ಲಿ ಆಯ್ಕೆ ಪ್ರಕ್ರಿಯೆಯಿಂದ ನಿಮ್ಮ ಮಗುವನ್ನು ಕೈಬಿಡಲಾಗುವುದು. * ಕ್ಯಾಂಪಸ್ ಒಳಗೆ ಪರೀಕ್ಷೆಯ ಸ್ಥಳಗಳ ಬಗ್ಗೆ ಮಾಹಿತಿ ಬೇಕಿದ್ದಲ್ಲಿ ಸೆಕ್ಯೂರಿಟಿಯವರನ್ನು, NCC ಸ್ವಯಂಸೇವಕರನ್ನು ಸಂಪರ್ಕ ಮಾಡಿ ಮಾಹಿತಿ ಪಡೆದುಕೊಳ್ಳಿ. * ಪರೀಕ್ಷಾ ದಿನದಂದು ತರಗತಿ /ಹೆಸರು ಇನ್ನಿತರ ಯಾವುದೇ ತಿದ್ದುಪಡಿ ಮಾಡಲು ಸಾಧ್ಯವಿಲ್ಲ... * ತಾಳ್ಮೆಯಿಂದ ವ್ಯವಹರಿಸಿ.. ಗೊಂದಲಗಳಿಗೆ ಅವಕಾಶ ಮಾಡದಿರಿ.. ಕ್ರಮಬದ್ದ ಮಾಹಿತಿಯನ್ನು ಕೃಷಿ ಸಿರಿ ವೇದಿಕೆಯಲ್ಲಿ ಸಂಜೆ 5.00 ರ ನಂತರ ಇರುವ ಕೌಂಟರ್ ನಲ್ಲಿ ಪಡೆದುಕೊಳ್ಳಿ.. ಅನಧಿಕೃತ ವ್ಯಕ್ತಿಗಳಿಂದ ಮಾಹಿತಿ ಪಡೆದು ವ್ಯವಹರಿಸಿದಲ್ಲಿ ನಾವುಗಳು ಜವಾಬ್ದಾರಿ ಅಲ್ಲ. * ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯ ಪರೀಕ್ಷೆ ಕುರಿತಂತೆ ಯಾವುದೇ ಶುಲ್ಕ ಪ್ರಯಾಣ ವೆಚ್ಚ ಅರ್ಜಿ ಶುಲ್ಕ ಇರುವುದಿಲ್ಲ.. ಆಯ್ಕೆ ಪ್ರಕ್ರಿಯೆ ಸಂಪೂರ್ಣ ಉಚಿತವಾಗಿ ಇರುತ್ತದೆ.. * ಹಿಂದಿನ ದಿನ ಬರುವವರಿಗೆ ಪಾರ್ಕಿಂಗ್ ವ್ಯವಸ್ಥೆನಿಗದಿತ ಸ್ಥಳವನ್ನು ಗುರುತಿಸಿದ್ದು ಅಲ್ಲೇ ಪಾರ್ಕಿಂಗ್ ಮಾಡಿಕೊಳ್ಳುವುದು. * ಊಟಕ್ಕಾಗಿ ಗ್ಯಾಸ್ / ಓಲೆ ಇನ್ನಿತರ ವ್ಯವಸ್ಥೆ ಇದ್ದಲ್ಲಿ ಸಂಸ್ಥೆ ಸೂಚಿಸಿದ ಸ್ಥಳದಲ್ಲಿ ವ್ಯವಸ್ಥೆ ಮಾಡಿಕೊಳ್ಳುವುದು. * ಆಳ್ವಾಸ್ ಕ್ಯಾಂಪಸ್ ವಿಶಾಲವಾದ ಆವರಣವಾದ ಹಿನ್ನಲೆಯಲ್ಲಿ ಪಾಲಕರು ಇಲ್ಲದೆ ವಿದ್ಯಾರ್ಥಿಗಳು ಬೇರೆಡೆಗೆ ತಿರುಗುವಂತಿಲ್ಲ.. ನಿಮ್ಮ ಮಕ್ಕಳಿಗೆ ನೀವೇ ಜವಾಬ್ದಾರರಾಗಿರುತ್ತಿರಿ.. * ಆಳ್ವಾಸ್ ನ ಆಯ್ಕೆ ಪ್ರಕ್ರಿಯೆಗೆ ಆಗಮಿಸುವ ವಾಹನ ಚಾಲಕರು/ ಮಾಲಕರು ಸರಿಯಾದ ವಾಹನ ನಿಯಮ /ದಾಖಲೆ ಇಲ್ಲದೆ ಯಾವುದೇ ವಿಧದ ಸಮಸ್ಯೆ ಆದಲ್ಲಿ ಸಂಸ್ಥೆ ಹೊಣೆಗಾರ ಆಗಿರುವುದಿಲ್ಲ.. ನೀವುಗಳೇ ನೇರವಾಗಿ ಜವಾಬ್ದಾರಿ ಆಗಿರುತ್ತಿರಿ.. * ಪರೀಕ್ಷೆಗೆ ಸಂಬಂಧ ಪಟ್ಟಂತೆ ಯಾವುದೇ ದೂರು /ಸಲಹೆಗಳಿದ್ದಲ್ಲಿ ನಿಮ್ಮ ಮಗು ಪರೀಕ್ಷೆ ಬರೆಯುವ ಕೇಂದ್ರದಲ್ಲಿ ಲಿಖಿತ ರೂಪದಲ್ಲಿ ನೀಡುವುದು. ಹೆಸರು ವಿಳಾಸ ದೂರವಾಣಿ ಸಂಖ್ಯೆ ಕಡ್ಡಾಯವಾಗಿ ನಮೂದಿಸಿರಿ.. ಈ ಮಾಹಿತಿ ಇಲ್ಲದಿದ್ದಲ್ಲಿ ನಿಮ್ಮ ಪತ್ರವನ್ನು ತಿರಸ್ಕರಿಸಲಾಗುತ್ತದೆ. * ಅಪ್ಲಿಕೇಶನ್ ಹಾಕದೆ ನೇರವಾಗಿ ಯಾರಿಗೂ ಅವಕಾಶ ಇರುವುದಿಲ್ಲ ಅವರಿಗೆ ಪರೀಕ್ಷೆಯನ್ನೂ ನೀಡಲಾಗುವುದಿಲ್ಲ. * ಪ್ರವೇಶ ಪತ್ರವನ್ನು ನೀವೇ ಖುದ್ದು ಡೌನ್ಲೋಡ್ ಮಾಡಿಕೊಂಡು ತರುವುದು.. ಇಲ್ಲಿ ಯಾವುದೇ ವ್ಯವಸ್ಥೆ ಇರುವುದಿಲ್ಲ.. * ಆಯ್ಕೆ ಪ್ರಕ್ರಿಯೆಗೆ ಪಾಲಕರೇ ಬರಬೇಕು ಎಂಬ ಕಡ್ಡಾಯ ನಿಯಮ ಇರುವುದಿಲ್ಲ.. ಎಲ್ಲಾ ಅಭ್ಯರ್ಥಿಗಳಿಗೆ ಮನದಾಳದ ಶುಭಾಶಯಗಳು....
👍 🙏 ❤️ 54

Comments