ಆಳ್ವಾಸ್ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ
ಆಳ್ವಾಸ್ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ
February 25, 2025 at 02:01 PM
ಆತ್ಮೀಯರೇ ನಮಸ್ಕಾರ ದಿನಾಂಕ 02/03/2025 ರ ಭಾನುವಾರ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ತಾಲ್ಲೂಕಿನ ಆಳ್ವಾಸ್ ಕ್ಯಾಂಪಸ್ ಇಲ್ಲಿ ಕನ್ನಡ ಮಾಧ್ಯಮ ಶಾಲೆಯ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, ಇದರಲ್ಲಿ ಭಾಗವಹಿಸುವ ಪಾಲಕರ/ ಪೋಷಕರ ವಾಹನಗಳನ್ನು ನಮ್ಮ ಸೆಕ್ಯೂರಿಟಿ ವಿಭಾಗದವರು ಸೂಚಿಸಿದ ಸ್ಥಳದಲ್ಲಿಯೇ ಕಡ್ಡಾಯವಾಗಿ ಪಾರ್ಕ್ ಮಾಡುವುದು. *ಈ ದಿನದಂದು ಊರಿನ ದೇವರ ಬ್ರಹ್ಮಕಳಶ ಕಾರ್ಯಕ್ರಮ ನಡೆಯುವ ಹಿನ್ನಲೆಯಲ್ಲಿ . ಯಾವುದೇ ಪ್ರಮುಖ ರಸ್ತೆಯ ಎಡ / ಬಲ ಭಾಗದಲ್ಲಿ ಪಾರ್ಕಿಂಗ್ ಮಾಡಲು ಅವಕಾಶ ಇಲ್ಲ*.. ಪಾರ್ಕಿಂಗ್ ವ್ಯವಸ್ಥೆ ಕ್ಯಾಂಪಸ್ ಒಳಗೆ ಇರುತ್ತದೆ. ನಿಮ್ಮ ಚಾಲಕರಿಗೆ /ಮಾಲಕರಿಗೆ ದಯವಿಟ್ಟು ಮಾಹಿತಿ ನೀಡಿ..ಊರಿನ ದೊಡ್ಡ ಕಾರ್ಯಕ್ರಮ ಅದದ್ದರಿಂದ ತಾವೆಲ್ಲರೂ ನಮ್ಮ ಮೇಲಿನ ಅಭಿಮಾನ ಮತ್ತು ಪ್ರಿತಿಯ ಕಾರಣಕ್ಕೆ ಆಗಮಿಸಿ ತೊಂದರೆಗೆ ಒಳಗಾಗದಿರಿ 🙏 *ವಸತಿ ವ್ಯವಸ್ಥೆ* ಆತ್ಮೀಯರೇ, ನಮ್ಮ ವಿದ್ಯಾಸಂಸ್ಥೆಯ 3 ಕೇಂದ್ರಗಳಲ್ಲಿ ವಸತಿ ವ್ಯವಸ್ಥೆ ಲಭ್ಯವಿದೆ.. ಇದು ಓಪನ್ ಹಾಲ್ ಆಗಿದ್ದು ಪಕ್ಕದಲ್ಲಿ ಸ್ನಾನ / ಶುಚಿತ್ವ ವ್ಯವಸ್ಥೆ ಇರುತ್ತದೆ.. ಆಳ್ವಾಸ್ ಶಿಸ್ತು ಹಾಗೂ ಶುಚಿತ್ವಕ್ಕೆ ಮಹತ್ವ ಕೊಡುವ ಹಿನ್ನಲೆಯಲ್ಲಿ ಕಸ ಮಾಡುವುದು / ಗಲೀಜು ಮಾಡುವುದನ್ನು ನಿಷೇಧಿಸಿದೆ.. ಸಂಜೆ 5 ರ ನಂತರದಲ್ಲಿ ಕೃಷಿ ಸಿರಿ ವೇದಿಕೆಯಲ್ಲಿ ಕೌಂಟರ್ ಹಾಕಲಿದ್ದು ನಮ್ಮ ಅಧಿಕಾರಿಗಳು ಅಲ್ಲಿ ಉಪಸ್ಥಿತರಿರುತ್ತಾರೆ.. ಅಲ್ಲಿ ನೀವು ಮಾಹಿತಿಯನ್ನು ಪಡೆದುಕೊಳ್ಳಬಹುದು.. ಈ ಆಯ್ಕೆ ಪ್ರಕ್ರಿಯೆ ವ್ಯವಸ್ಥೆಗೆ ವಸತಿ ಶುಚಿಗೆ ಬೇಕಾದ ವ್ಯವಸ್ಥೆ ಇದ್ದು ಉಟೋಪಚಾರ ಇರುವುದಿಲ್ಲ.. ನಮ್ಮ ಕ್ಯಾಂಪಸ್ ಒಳಗೆ ಕ್ಯಾಂಟೀನ್ ವ್ಯವಸ್ಥೆ ಇದ್ದು ಇದರ ಉಪಯೋಗ ಮಾಡಿಕೊಳ್ಳಬಹುದು..
👍 🙏 ❤️ 31

Comments