ಆಳ್ವಾಸ್ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ
ಆಳ್ವಾಸ್ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ
February 26, 2025 at 06:11 AM
*ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಬಗ್ಗೆ ಮಾಹಿತಿ* ಪರೀಕ್ಷೆಯು 150 ಮಾರ್ಕಿನಲ್ಲಿ ನಡೆಯಲಿದ್ದು 2.30 ನಿಮಿಷ ಸಮಯ ಇರುತ್ತದೆ. 10.00-12.30 ರ ವರೆಗೆ ಪರೀಕ್ಷೆಯ ಸಮಯ ಇರುತ್ತದೆ. ಎಲ್ಲ ಪ್ರಶ್ನೆಯು ಬಹು ಆಯ್ಕೆ ಮಾದರಿಯಾಗಿದ್ದು ಎಲ್ಲ ತರಗತಿಯ ಪ್ರಶ್ನೆಪತ್ರಿಕೆಯು ABCDE ಸಿರೀಸ್ ಹೊಂದಿರುತ್ತದೆ. ಪ್ರಶ್ನೆಪತ್ರಿಕೆಯು ಪ್ರಸ್ತುತ ನಿಮ್ಮ ಮಗು ಯಾವ ತರಗತಿ ಓದುತ್ತಿದಿಯೋ ಅದೇ ತರಗತಿಯ ಪಠ್ಯಪುಸ್ತಕದಿಂದಲೇ ಪ್ರಶ್ನೆ ಪತ್ರಿಕೆ ತಯಾರಿಸಲಾಗಿದೆ.. ಯಾವುದೇ ಗೈಡ್ / ಇನ್ನಿತರ ನೋಟ್ಸ್ ಗಳನ್ನು ಗಮನಿಸಲಾಗಿಲ್ಲ ಪಠ್ಯ ಪುಸ್ತಕ ಅಧರಿಸಿಯೇ ಪ್ರಶ್ನೆಗಳು ಇರುತ್ತದೆ. ಜೊತೆಗೆ ಮಾನಸಿಕ ಸಾಮರ್ಥ್ಯ ಆಧಾರಿತ 15 ಪ್ರಶ್ನೆಗಳು ಇರುತ್ತದೆ. OMR ಬಗ್ಗೆ ಈಗಾಗಲೇ ಈ ಗುಂಪಿನಲ್ಲಿ ಮಾಹಿತಿ ನೀಡಿದ್ದು, ಎಡಭಾಗದಲ್ಲಿ ನಿಮ್ಮ ವೈಯಕ್ತಿಕ ಮಾಹಿತಿ ಇದ್ದು ಸರಿಯಾಗಿ ಮಾಹಿತಿಯನ್ನು ತುಂಬಲು ಮಕ್ಕಳಿಗೆ ತಿಳಿಸಿ ಆ ಎಲ್ಲ ವೈಯಕ್ತಿಕ ಮಾಹಿತಿ ನಿಮ್ಮ ಪ್ರವೇಶಪತ್ರದಲ್ಲಿ ನಮೂದಾಗಿರುತ್ತದೆ. ಪ್ರವೇಶ ಪತ್ರ ಅತ್ಯಂತ ಪ್ರಮುಖವಾಗಿ ಪರೀಕ್ಷೆಗೆ ಹಾಜರಾಗಲು ಬೇಕಿದ್ದು ಡೌನ್ಲೋಡ್ ಮಾಡಿಕೊಂಡು ತನ್ನಿರಿ. ಯಾವುದೇ ಕಾರಣಕ್ಕೂ ತಾವು ತರಗತಿ ತಪ್ಪಾಗಿ ನಮೂದಿಸಿ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿ ವಿನಂತಿ ಮಾಡಿದರೂ ತಾಂತ್ರಿಕ ಕಾರಣಕ್ಕೆ ಬದಲಾವಣೆ ಮಾಡಲು ಸಾಧ್ಯವಾಗುವುದಿಲ್ಲ ಕ್ಷಮಿಸಿ. ಪರೀಕ್ಷೆಯ ಫಲಿತಾಂಶ ಪ್ರಕಟವಾಗುವ ವರೆಗೂ ಪ್ರವೇಶಪತ್ರ ಮತ್ತು ಅರ್ಜಿ ಅತ್ಯಂತ ಮುಖ್ಯವಾಗಿರುತ್ತದೆ. *ಪರೀಕ್ಷೆಯಲ್ಲಿ ಪ್ರವೇಶಪತ್ರಕ್ಕೆ ಕಡ್ಡಾಯವಾಗಿ ಕೊಠಡಿ ಮೇಲ್ವಿಚಾರಕರ ಸಹಿ ಅಗತ್ಯವಿದ್ದು ಅವರಿಗೆ ತಪ್ಪಿ / ಮರೆತುಹೋದಲ್ಲಿ ಸಹಿ ಹಾಕದೆ ಇದ್ದಲ್ಲಿ ದಯವಿಟ್ಟು ಆ ಬ್ಲಾಕ್ ನ ಪರೀಕ್ಷಾ ಮುಖ್ಯಸ್ಥರಿಗೆ ಮಾಹಿತಿ ನೀಡಿ ಅವರು ಸಹಿ ಮಾಡುತ್ತಾರೆ ನಿಮ್ಮ ಮಗು ಪರೀಕ್ಷೆಗೆ ಹಾಜರಾಗಿದ್ದಕ್ಕೆ ಅದು ತುಂಬಾ ಮುಖ್ಯ ಮಾಹಿತಿ ಆಗಿರುತ್ತದೆ* ಪ್ರವೇಶಪತ್ರದಲ್ಲಿ ಹೆಸರು, ಜನುಮ ದಿನಾಂಕ, ಇನ್ನಿತರ ಯಾವುದೇ ತಿದ್ದುಪಡಿ ಇದ್ದಲ್ಲಿ ಗಾಬರಿ ಭಯ ಬೇಡ ಫಲಿತಾಂಶ ಪ್ರಕಟ ಅದ ಬಳಿಕ ಆಯ್ಕೆ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದಲ್ಲಿ ತಿದ್ದುಪಡಿ ಮಾಡಲಾಗುತ್ತದೆ.. ತರಗತಿ ತಿದ್ದುಪಡಿ ಮಾತ್ರ ಸಾಧ್ಯವಿಲ್ಲ. ಪರೀಕ್ಷೆಯ ಬಗ್ಗೆ ಯಾವುದೇ ಗೊಂದಲ, ಗಲಿಬಿಲಿ ಅಗಬೇಡಿ ಮಗುವಿಗೆ ಊಟ ತಿಂಡಿಯನ್ನು ಕ್ಲಪ್ತ ಸಮಯದಲ್ಲಿ ನೀಡಿ ಪರೀಕ್ಷಾ ಕೇಂದ್ರಕ್ಕೆ ಕಳುಹಿಸಿ.. ಯಾವುದೇ ಕಾರಣಕ್ಕೂ ಉಪವಾಸ ಮಾಡಿ ಪರೀಕ್ಷೆಗೆ ಮಕ್ಕಳನ್ನು ಕಳುಹಿಸಬೇಡಿ. ಪರೀಕ್ಷೆ ಬರೆಯಲು ಎರಡು ಕಪ್ಪು / ನೀಲಿ ಶಾಯಿ ಪೆನ್ನು, ರಬ್ಬರ್, ಪೆನ್ಸಿಲ್ ಮಾತ್ರ ಅವಶ್ಯಕತೆ ಇದೆ ಫೋಟೋ ಆಧಾರ್ ಕಾರ್ಡ್ ಇನ್ನಿತರ ಯಾವುದೇ ದಾಖಲೆ ಅಗತ್ಯವಿಲ್ಲ
👍 🙏 ❤️ 😂 😮 61

Comments