Hariಹರಿ Sarvottamaಸರ್ವೋತ್ತಮ Vayujottamaವಾಯುಜೋತ್ತಮ
Hariಹರಿ Sarvottamaಸರ್ವೋತ್ತಮ Vayujottamaವಾಯುಜೋತ್ತಮ
February 26, 2025 at 07:44 AM
ಶಿವರಾತ್ರಿ ಹಬ್ಬದ ಶುಭಾಶಯಗಳು 🙏🙏 ಕೈಲಾಸವಾಸ ಗೌರೀಶ ಈಶಾ || ಪ || ತೈಲಧಾರೆಯಂತೆ ಮನಸು ಕೊಡು ಹರಿಯಲಿ || ಅ.ಪ || ಅಹೋರಾತ್ರಿಯಲಿ ನಾನು ಅನುಚರಾಗ್ರಣಿಯಾಗಿ ಮಹಿಯೊಳಗೆ ಚರಿಸಿದೆನೊ ಮಹದೇವನೇ ಅಹಿ ಭೂಷಣನೆಯೆನ್ನ ಅವಗುಣಗಳೆಣಿಸದಲೆ ವಿಹಿತ ಧರ್ಮದಲಿ ವಿಷ್ಣು ಭಕುತಿಯ ಕೊಡು ಶಂಭೋ || ೧ || ಮನಸು ಕಾರಣವಲ್ಲ ಪಾಪ ಪುಣ್ಯಕ್ಕೆಲ್ಲ ಅನಲಾಕ್ಷ ನಿನ್ನ ಪ್ರೇರಣೆಯಿಲ್ಲದೇ ದನುಜಗಜ ಮದಹಾರಿ ದಂಡಪ್ರಣಾಮವಮಾಳ್ಪೆ ಮನಸೋ ಈ ಶಿರವ ಸಜ್ಜನರ ಸಿರಿ ಚರಣದಲಿ || ೨ || ಭಾಗೀರಥೀಧರನೇ ಭಯವ ಪರಿಹರಿಸಯ್ಯ ಲೇ ಸಾಗಿ ಒಲಿದು ಸಂತತ ಶರ್ವ ದೇವಾ ಭಾಗವತ ಜನಪ್ರೀಯ ವಿಜಯ ವಿಟ್ಠಲನಂಘ್ರಿ ಜಾಗುಮಾಡದೆ ಭಜಿಪ ಭಾಗ್ಯವನೆ ಕೊಡು ಶಂಭೋ || ೩ || Kailaasa vaasa goureesha eesha || pa || Taila dhaareyante manasu kodu hariyalli shambho || a.pa. || Aho raatriyali naanu anucharaagraniyaagi | Mahiyolage charisideno mahadevane | Ahibhooshanane ennavagunagalenisadale | Vihita dharmadi vishnu bhakutiyanu kodu shambho || 1 || Manasu kaaranavalla paapa punyakkella | Analaaksha ninna preraneyillade | Danuja mada gaja haari damda pranaamava maalpe | Maniso ee shirava sajjana carana kamaladali shambho || 2 || Bhaageerathi dharane bhayava pariharisayyaa | Lesaagi nee salaho santata sarva devaa | Bhaagavata jana preeya vijayaviththalanamgri | Jaagu maadade bhajipa bhaagyavanu kodu shambho || 3 ||
🙏 4

Comments