CHO Channel Karnataka✅️
CHO Channel Karnataka✅️
January 31, 2025 at 10:26 AM
- *ಭರವಸೆಯ ಹಸ್ತ* ನಮ್ಮ ಆರೋಗ್ಯ ಕೇಂದ್ರದಲ್ಲಿ ರಾಷ್ಟ್ರೀಯ ಆರೋಗ್ಯ ಸೇವೆಗಳು ಬಡಜನರ ಹಾಗೂ ತಳಮಟ್ಟ ಸಮುದಾಯಗಳ ಬಾಗಿಲು ಮುಟ್ಟಿವೆ||1|| ನಮ್ಮ ಕೇಂದ್ರದಲ್ಲಿ ತಾಯಿ ಮಗುವಿನ ಮೂಲ ಸೇವೆಗಳ ಮರಣದರ ತಗ್ಗಿಸುವುದರಲ್ಲಿ CHOಗಳು ಜಾಗೃತರಾಗಿದ್ದಾರೆ ||2|| ನಮ್ಮ ಸಮುದಾಯದಲ್ಲಿ ಸಾಂಕ್ರಾಮಿಕ ರೋಗಗಳಿಗೆ ಹೆದರದೆ ಮುನ್ನುಗ್ಗಿ ಮಹಾಮಾರಿಯಾದ ಕೊರೋನಾ ಜೊತೆಗೂ ಹೋರಾಡಿ ಸಹೋದ್ಯೋಗಿಗಳ ಜೀವ ಹೋದರೂ ಲೆಕ್ಕಿಸದೆ ಸೇವೆಯಲ್ಲೇ ನಿರತರಾಗಿದ್ದಾರೆ ||3|| ನಮ್ಮ ಕೇಂದ್ರದಲ್ಲಿ ಅಸಾಂಕ್ರಾಮಿಕ ರೋಗಗಳಾದ ಮಧುಮೇಹ, ರಕ್ತದೊತ್ತಡ, ಕ್ಯಾನ್ಸರ್ ನಂತಹ ಖಾಯಿಲೆಗಳನ್ನು ಪತ್ತೆ ಹಚ್ಚಿ ಜನರಲ್ಲಿ ಅರಿವು ಮೂಡಿಸಿ ನಿಯಂತ್ರಿಸುವ ನಿಟ್ಟಿನಲ್ಲಿ CHOಗಳು ನಿರಂತವಾಗಿದ್ದಾರೆ ||4|| ನಮ್ಮ ಸಮುದಾಯದ ಸಂವಹನ ಸಭೆಗಳ ಸಹಕಾರದೊಂದಿಗೆ ಹದಿಹರೆಯದ ಮಕ್ಕಳು ಹಾಗೂ ಯುವಕರು ದುಶ್ಚಾಟಗಳಿಗೆ ಬಲಿಯಾಗದಂತೆ ಜಾಗೃತ ಕಾರ್ಯಕ್ರಮಗಳ ನೀಡುವಲ್ಲಿ CHOಗಳು ನಿರತರಾಗಿದ್ದಾರೆ ||5|| ನಮ್ಮ ಗ್ರಾಮೀಣ ಬಡ ಜನರ ನೇತ್ರ, ಕಿವಿ, ಮೂಗು ಗಂಟಲು ಮತ್ತು ದಂತ ಹಾಗೂ ವೃದ್ಧರ ಮೂಲ ಆರೋಗ್ಯ ಸೇವೆ ಒದಗಿಸುವುದರಲ್ಲಿ CHOಗಳು ನಿರಂತರವಾಗಿದ್ದಾರೆ ||6|| ಹೀಗೆ ಹಲವಾರು ಗುಣಮಟ್ಟ ಸೇವೆಗಳು ನಮ್ಮ AAM ಕೇಂದ್ರಗಳಲ್ಲಿ ನಿರಂತರವಾಗಿ ರಾಜ್ಯದ ಎಲ್ಲಾCHOಗಳು ಸೇವೆ ನೀಡುವುದರಲ್ಲಿ ಬದ್ಧರಾಗಿದ್ದಾರೆ ||7|| ರಚನೆ - *ಪೆನ್ನೋಬಳಿ ಬಿ ಬಸಪ್ಪ* ಸಮುದಾಯ ಆರೋಗ್ಯ ಅಧಿಕಾರಿಗಳು ಆಮ್ - ಬನ್ನೂರು ಡಿ, ಮೈಸೂರು.
👍 👌 👏 🥰 7

Comments