SDPI Karnataka
                                
                            
                            
                    
                                
                                
                                June 6, 2025 at 05:13 PM
                               
                            
                        
                            ಎಲ್ಲರಿಗೂ ಬಕ್ರೀದ್ ಹಬ್ಬದ ಹೃದಯಪೂರ್ವಕ ಶುಭಾಶಯಗಳು! ಈ ಪವಿತ್ರ ತ್ಯಾಗದ ಹಬ್ಬವು ನಮಗೆ ಪ್ರವಾದಿ ಇಬ್ರಾಹಿಂ (ಅ:ಸ) ಇವರ ತ್ಯಾಗ ಮತ್ತು ಪರಿಶ್ರಮದ ಮಹತ್ವವನ್ನು ನೆನಪಿಸುತ್ತದೆ. ತ್ಯಾಗದ ಪ್ರತಿಬಿಂಬವಾದ ಬಕ್ರೀದ್ ನ ಸಂದೇಶ ಕೇವಲ ಧಾರ್ಮಿಕವಾಗಿ ಮಾತ್ರವಲ್ಲ, ಸಾಮಾಜಿಕ ನ್ಯಾಯ ಮತ್ತು ಪ್ರಜಾಪ್ರಭುತ್ವದ ಹೋರಾಟದಲ್ಲೂ ಪ್ರತಿಧ್ವನಿಸುವಂತಾಗಬೇಕು.
ನಾವು ಈ ಸಂದರ್ಭದಲ್ಲಿ, ದೇಶದಲ್ಲಿ ಯಾರು ನ್ಯಾಯ, ಸತ್ಯ ಮತ್ತು ಪ್ರಜಾಪ್ರಭುತ್ವದ ರಕ್ಷಣೆಗಾಗಿ ತಮ್ಮ ಧ್ವನಿಯನ್ನು ಎತ್ತಿ, ಆರಾಜಕತೆ ಮತ್ತು ಬೂಟಾಟಿಕೆಯ ಆಡಳಿತದ ವಿರುದ್ಧ ಹೋರಾಡಿ, ಜೈಲಿನ ಗೋಡೆಗಳ ಹಿಂದೆ ತಮ್ಮ ಸ್ವಾತಂತ್ರ್ಯವನ್ನು ತ್ಯಾಗ ಮಾಡಿದ್ದಾರೆ. ಅವರ ತ್ಯಾಗವು ನಮಗೆ ಒಂದು ಸ್ಫೂರ್ತಿಯಾಗಲಿ ಮತ್ತು ಅವರನ್ನು ಸ್ಮರಿಸೋಣ. ಫ್ಯಾಶಿಸ್ಟ್ ಶಕ್ತಿಗಳ ವಿರುದ್ಧ ನಿಲ್ಲಲು, ಸತ್ಯವನ್ನು ಎತ್ತಿಹಿಡಿಯಲು ಮತ್ತು ಎಲ್ಲರಿಗೂ ಸಮಾನತೆಯಿರುವ ಸಮಾಜಕ್ಕಾಗಿ ಶ್ರಮಿಸಲು ಈ ಬಕ್ರೀದ್ ನೀಡುವ ಸಂದೇಶ ನಮಗೆ ಪ್ರೇರಣೆಯಾಗಲಿ.
ಬಕ್ರೀದ್‌ನ ಈ ಸಂದರ್ಭದಲ್ಲಿ, ಸರ್ವಾಧಿಕಾರಿ, ದಮನಕಾರಿ ಆಡಳಿತ ಮತ್ತು ಅನ್ಯಾಯದ ವಿರುದ್ಧ ಒಗ್ಗಟ್ಟಿನಿಂದ ಹೋರಾಡಲು ಕರೆ ನೀಡೋಣ. ನಮ್ಮ ಧ್ವನಿಯನ್ನು ದಮನಿಸಲಾಗದು, ನಮ್ಮ ತ್ಯಾಗವು ವ್ಯರ್ಥವಾಗದು. ಒಟ್ಟಾಗಿ, ಸತ್ಯ ಮತ್ತು ನ್ಯಾಯದ ಮಾರ್ಗದಲ್ಲಿ ಮುನ್ನಡೆಯೋಣ!
                        
                    
                    
                    
                    
                    
                                    
                                        
                                            👍
                                        
                                    
                                        
                                            ❤️
                                        
                                    
                                    
                                        5