Dinesh Gundu Rao
June 11, 2025 at 11:02 AM
ನ್ಯಾಮತಿಯ ಮಾದಾಪುರದಲ್ಲಿ ಕಟ್ಟಡ ಕಾರ್ಮಿಕರಾಗಿದ್ದ ಸಿ.ಮಂಜುನಾಥ್ ಅವರು ಆಕಸ್ಮಿಕ ಸಾವಿಗಿಡಾದ ಸಂದರ್ಭದಲ್ಲಿ, ಅವರ ಕುಟುಂಬ ವರ್ಗ ಮಗನ ಅಂಗಾಂಗ ದಾನ ಮಾಡುವ ನಿರ್ಧಾರ ಕೈಗೊಂಡಿದ್ದು ನಿಜಕ್ಕೂ ಶ್ಲಾಘನೀಯ. ಸಾಮಾನ್ಯ ಕುಟುಂಬ ವರ್ಗದವರು ಇಂದು ಅಂಗಾಂಗ ದಾನದ ಮಹತ್ವ ತಿಳಿದು ಅಂಗಾಂಗ ದಾನಕ್ಕೆ ಮುಂದಾಗುತ್ತಿರುವುದು ಉತ್ತಮ ಬೆಳವಣಿಗೆ.
ಕಟ್ಟಡ ಕಾಮಗಾರಿ ವೇಳೆ ಮೇಲಿಂದ ಆಕಸ್ಮಿಕವಾಗಿ ಬಿದ್ದು ಮಂಜುನಾಥ್ ಗಂಭೀರವಾಗಿ ಗಾಯಗೊಂಡಿದ್ದರು. ಅವರ ಮಿದುಳು ನಿಷ್ಕ್ರಿಯಗೊಂಡ ಹಿನ್ನೆಲೆಯಲ್ಲಿ ಅವರ ಮೃತದೇಹದಿಂದ ಹೃದಯ, ಮೂತ್ರಪಿಂಡ, ಲಿವರ್, ಕಾರ್ನಿಯಾಗಳನ್ನು ಪಡೆಯಲಾಗಿದೆ. ನೋವಿನಲ್ಲೂ ಮಗನ ಅಂಗಾಂಗಗಳನ್ನು ದಾನ ಮಾಡುವಂತ ಶ್ರೇಷ್ಠ ನಿರ್ಧಾರವನ್ನು ಕೈಗೊಂಡ ಚಂದ್ರಪ್ಪ ಹಾಗೂ ಸಾಕಮ್ಮ ಅವರ ಕಾರ್ಯ ಇತರರಿಗೆ ಮಾದರಿಯಾಗಲಿ.
#organdonationawareness
#giftoflife
#inspirationingrief

🙏
❤️
5