
Bengaluru City Police
21.7K subscribers
Verified ChannelAbout Bengaluru City Police
Official WhatsApp Channel of Bengaluru City Police | In case of emergency #dialnamma112 | Help us to serve you better!
Similar Channels
Swipe to see more
Posts

ಬೇಗೂರು ಠಾಣೆ ಪೊಲೀಸರು ಮನೆ ಕಳವು ಆರೋಪಿಯನ್ನು ಬಂಧಿಸಿ ₹6.5 ಲಕ್ಷ ಮೌಲ್ಯದ 53 ಗ್ರಾಂ ಚಿನ್ನಾಭರಣಗಳು ಹಾಗೂ 3 ದ್ವಿಚಕ್ರ ವಾಹನಗಳನ್ನು ವಶಪಡಿಸಿದ್ದಾರೆ. #stayvigilant #theft

ಅಮೃತಹಳ್ಳಿ ಠಾಣೆ ಪೊಲೀಸರಿಂದ ಕಾರ್ಯಾಚರಣೆ: ₹3 ಕೋಟಿ ಮೌಲ್ಯದ 3 ಕೆ.ಜಿ ಎಂಡಿಎಂಎ ಕ್ರಿಸ್ಟಲ್ ಮದುಮಾಡುತ್ತಿದ್ದ ವಿದೇಶಿ ಪ್ರಜೆ ಬಂಧನ.

ಇಂದು ನಡೆದ ಮಾಧ್ಯಮಗೋಷ್ಠಿಯಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಬಿ. ದಯಾನಂದ ಅವರು, ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮನೆ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ಆರೋಪಿಯನ್ನು ಬಂಧಿಸಿದ ಬಗ್ಗೆ ಮಾಹಿತಿ ನೀಡಿದರು, ಆರೋಪಿಯಿಂದ 188 ಗ್ರಾಂ ಚಿನ್ನಾಭರಣ, 550 ಗ್ರಾಂ ಬೆಳ್ಳಿಯ ವಸ್ತುಗಳು, ₹1,500 ನಗದು ಹಾಗೂ ಕೃತ್ಯಕ್ಕೆ ಬಳಸಿದ ಒಂದು ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದು, ಅವುಗಳ ಒಟ್ಟು ಮೌಲ್ಯ ₹16,50,000/- ಆಗಿದೆ. ಈ ಬಂಧನದೊಂದಿಗೆ ಬೆಂಗಳೂರು ನಗರದ ವಿವಿಧ ಠಾಣೆಗಳಲ್ಲಿ ದಾಖಲಾಗಿದ್ದ ಒಟ್ಟು 9 ಮನೆ ಕಳ್ಳತನ ಪ್ರಕರಣಗಳನ್ನು ಬೇಧಿಸಲಾಗಿದೆ. ಸಾರ್ವಜನಿಕರು ತಮ್ಮ ಮನೆಯಿಂದ ಹೊರಗೆ ಹೋದ ಸಂದರ್ಭದಲ್ಲಿ ಬಾಗಿಲು, ಕಿಟಕಿ, ಗೇಟ್ಗಳಿಗೆ ಬಿಗಿಯಾದ ಲಾಕ್ ವ್ಯವಸ್ಥೆ, ಸಿಸಿಟಿವಿ ಅಳವಡಿಕೆ ಮತ್ತು ನೆರೆಹೊರೆಯವರ ಗಮನಕ್ಕೆ ತರುವುದು ಸೇರಿದಂತೆ ಸೂಕ್ತ ಭದ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಬೆಂಗಳೂರು ನಗರ ಪೊಲೀಸರು ಮನವಿ ಮಾಡಿದರು. ಯಾವುದೇ ಅನುಮಾನಾಸ್ಪದ ಚಟುವಟಿಕೆ ಕಂಡುಬಂದರೆ, ತಕ್ಷಣವೇ Namma 112 ಗೆ ಕರೆ ಮಾಡಿರಿ. ಸಂಪೂರ್ಣ ಮಾಹಿತಿಗಾಗಿ ವಿಡಿಯೋ ವೀಕ್ಷಿಸಿ: ://https://youtube.com/live/-MkBN5tuOzc?feature=share During today’s weekly press briefing, the Commissioner of Police, Bengaluru spoke about various cases solved by the city police. Electronic City Police have arrested one individual in connection with a house theft case. Stolen property worth ₹16.5 lakh has been recovered, including 188 grams of gold ornaments, 550 grams of silver articles, ₹1,500 in cash, and a two-wheeler used in the crime. With this arrest, nine house burglary cases reported across various police stations in Bengaluru have been solved. Bengaluru City Police urge citizens to take proper security measures—such as securing doors, windows, and gates with strong locks, installing CCTV cameras, and informing trusted neighbours—especially when leaving home. Watch the full video for complete details: https://https://youtube.com/live/-MkBN5tuOzc?feature=share #house #theft

https://drive.google.com/drive/folders/1iHXf68oo3dGbb7U63FTDTv0YR-GcZa1Z?usp=drive_link
