ದಿನಕ್ಕೊಂದು ಪೌರಾಣಿಕ ಕಥೆ • 𝗙𝗼𝗹𝗹𝗼𝘄
3.5K subscribers
About ದಿನಕ್ಕೊಂದು ಪೌರಾಣಿಕ ಕಥೆ • 𝗙𝗼𝗹𝗹𝗼𝘄
ಪ್ರತಿದಿನ ಕಥೆ ಓದಲು channel follow ಮಾಡಿ..... 👇👇👇👇👇
Similar Channels
Swipe to see more
Posts
ಕುಂತಿ ಮತ್ತು ಕೃಷ್ಣನ ಕಥೆ ಕುಂತಿ ಕೃಷ್ಣನ ಕುರಿತು ಮಾಡಿದ ಸಿಂಹಾವಲೋಕನ.. ಕುರುಕ್ಷೇತ್ರದ ಯುದ್ಧ ಮುಗಿದಿದೆ. ಕೃಷ್ಣನು ಹಸ್ತಿನಾಪುರಕ್ಕೆ ಬಂದು ಸಾಕಷ್ಟು ಕಾಲ ಇದ್ದನು. ಬಂದ ಕಾರ್ಯಗಳನ್ನು ಮುಗಿಸಿ ದ್ವಾರಕಾಕ್ಕೆ ಹೊರಟು ನಿಂತಿದ್ದಾನೆ. ಆಗಿನ್ನೂ ಕೃಷ್ಣ ರಥ ಹತ್ತಿ ಕುಳಿತಿದ್ದಾನೆ. ಪಾಂಡವರು ಋಷಿ ಮುನಿಗಳೆಲ್ಲರೂ ಕೃಷ್ಣನ ರಥದ ಜೊತೆ ಬರುತ್ತಿದ್ದಾರೆ. ತೊಡೆ ಮುರಿದು ಮಲಗಿದ್ದ ದುರ್ಯೋಧನನಿಗೆ ಮಾತು ಕೊಟ್ಟಂತೆ, ಪಾಂಡವರ ವಂಶದ ಕುಡಿಯನ್ನು ಹೊತ್ತಿದ್ದ ಅಭಿಮನ್ಯುವಿನ ಪತ್ನಿ ಉತ್ತರೆಯ ಗರ್ಭವನ್ನು ನಾಶ ಪಡಿಸಲು ಬ್ರಹ್ಮಾಸ್ತ್ರವನ್ನು ಮಂತ್ರಿಸಿ ಉತ್ತರೆ ಗರ್ಭದ ಮೇಲೆ ಅಶ್ವತ್ಥಾಮ ಪ್ರಯೋಗ ಮಾಡಿದ್ದಾನೆ. ನೋವು ತಾಳಲಾರದೆ ಉತ್ತರೆ ಭಯಭೀತಳಾಗಿ ಕೃಷ್ಣನ ಹತ್ತಿರ ಓಡಿ ಬರುತ್ತಿದ್ದಾಳೆ. “ದೇವರ ದೇವರಾದ ಶ್ರೀ ಕೃಷ್ಣ, ಪರಮಾತ್ಮ ನನ್ನನ್ನು ಕಾಪಾಡು ತಂದೆ, ಮೃತ್ಯು ನನ್ನ ಮುಂದೆ ಕಾಣುತ್ತಿದೆ. ನಿನ್ನ ವಿನಹ ಬೇರಾರೂ ನನ್ನನ್ನು ರಕ್ಷಿಸಲು ಸಾಧ್ಯವಿಲ್ಲ. ಕೃಷ್ಣ ನನಗೋಸ್ಕರ ಅಲ್ಲ, ನಮ್ಮ ವಂಶೋದ್ಧಾರಕ ಕಂದನನ್ನು ಬದುಕಿಸು” ಎಂದು ಅಳುತ್ತಾ ಬಂದಳು. ಕೃಷ್ಣ ರಥದಲ್ಲಿ ಕುಳಿತಿದ್ದಾನೆ. ಕ್ಷಣಮಾತ್ರದಲ್ಲಿ ಅವನಿಗೆ ಎಲ್ಲವೂ ತಿಳಿಯಿತು. “ಯೋಗಕ್ಷೇಮಂ ವಹಾಮ್ಯಹಂ” ಭಗವಂತನೇ ನುಡಿದಂತೆ, ಯಾರು ನನ್ನಲ್ಲಿ ಅನನ್ಯ ಭಕ್ತಿ ಇಟ್ಟಿರುತ್ತಾರೋ, ಅವರನ್ನು ಸ್ವಯಂ ನಾನೇ ರಕ್ಷಣೆ ಮಾಡುತ್ತೇನೆ ಎಂದಿದ್ದಾನೆ. ಅದೇ ರೀತಿ ಚಕ್ರಧರನಾಗಿ ಸ್ವಯಂ ಉತ್ತರೆ ಗರ್ಭದಲ್ಲಿ ಪ್ರವೇಶಮಾಡಿ ಗರ್ಭವನ್ನು ಸುತ್ತುವರಿಯುತ್ತಾನೆ. ಕೃಷ್ಣನ ತೇಜಸ್ಸಿನಿಂದ ಬ್ರಹ್ಮಾಸ್ತ್ರವು ನಾಶವಾಯಿತು. ಗರ್ಭದೊಳಗಿದ್ದ ಮಗು ತನ್ನ ಸುತ್ತ ಸುತ್ತುತ್ತಿರುವ ಬೆಳಕನ್ನು ತನ್ನ ಕುತ್ತಿಗೆ ತಿರುಗಿಸುತ್ತಾ ಆಶ್ಚರ್ಯದಿಂದ ವೀಕ್ಷಿಸುತ್ತಿತ್ತು. ಆದ್ದರಿಂದ ಮಗುವಿಗೆ ‘ಪರೀಕ್ಷಿತ್’ ಅಂತ ಹೆಸರು ಬಂದಿತು. ‘ಪರಿ ಅಂದ್ರೆ ತನ್ನ ಸುತ್ತ’ ‘ಈಕ್ಷಿಸು ಅಂದರೆ ವೀಕ್ಷಿಸು’ ಪರೀಕ್ಷಿಸು ಅಂತ. ಕೆಲವೇ ದಿನಗಳಲ್ಲಿ ಪ್ರಸವ ವೇದನೆ ಸಮಯಕ್ಕೆ ಕೃಷ್ಣನು ತನ್ನ ರೂಪವನ್ನು ಹಿಂತೆಗೆದುಕೊಂಡನು. ಆದರೆ ಮಗು ಹುಟ್ಟುತ್ತಿದ್ದಂತೆಯೇ ಬ್ರಹ್ಮಹತ್ಯೆಯ ಕಾವಿನಿಂದ ಸತ್ತು ಹೋಯಿತು. ಸತ್ತ ಮಗುವಿಗೆ ಕೃಷ್ಣನು ಹೊರಗಿನಿಂದ ಉಸಿರು ಕೊಟ್ಟು ಬದುಕಿಸಿದ. ಹೀಗೆ ಭಗವಂತನಿಂದ ರಕ್ಷಣೆ ಪಡೆದು ಹುಟ್ಟಿದ್ದರಿಂದ ‘ದೇವರಾತ’ ಎಂದು ಹೆಸರು ಬಂದಿತು. ಕೃಷ್ಣನು ಉತ್ತರೆಯ ಗರ್ಭರಕ್ಷಣೆ ಮಾಡಿ, ಪಾಂಡವರನ್ನು ಸಂರಕ್ಷಣೆ ಮಾಡಿ, ದ್ವಾರಕಾಗೆ ಹೊರಟು ನಿಂತಿದ್ದಾನೆ. ಆಗ ಕುಂತಿಯ ಬಂದು, ಓಂ ಕೃಷ್ಣಾ ಮೂಲಪುರುಷನೆ, ಅರ್ಜುನನ ಮಿತ್ರನೆ, ವೃಷ್ಣಿ ಸಂತತಿಯವರಲಿ ಪ್ರಮುಖನೇ, ನೀನು ದಿವ್ಯ ನಾಮದ ಒಡೆಯನಾಗಿದ್ದೀ, ಗೋವುಗಳ ಹಾಗೂ ಬ್ರಾಹ್ಮಣರ ಕಷ್ಟ ನಿವಾರಣೆಗಾಗಿ ಅವತರಿಸಿದ್ದೀ, ನೀನು ಸಕಲ ಯೋಗ ಶಕ್ತಿಗಳನ್ನು ಹೊಂದಿರುವೆ, ನೀನೇ ಸರ್ವಶಕ್ತ ಭಗವಂತನು. ಲೌಕಿಕ ಜಗತ್ತಿನ ಗುಣಗಳಿಂದ ಆಭಾದಿತನಾದ ನಿನಗೆ ನನ್ನ ಗೌರವಯುತ ಪ್ರಣಾಮವನ್ನು ಸಲ್ಲಿಸುತ್ತೇನೆ. ನೀನು ಎಲ್ಲದರ ಒಳಗೂ ಹೊರಗೂ ಅಡಗಿದ್ದೀ, ಹಾಗೆ ಎಲ್ಲರಿಗೂ ಅದೃಶ್ಯನಾಗಿದ್ದೀಯಾ, ಭ್ರಾಮಕ ಶಕ್ತಿಯ ತೆರೆಯಿಂದ ಆವೃತವಾಗಿರುವ ನೀನು ಶಾಶ್ವತ. ನಿರ್ದಿಷ್ಟವಾದ ವಾಸ್ತವಾಂಶ ನೀನಾಗಿದ್ದಿ. ನಟನ ವೇಷದಲ್ಲಿರುವ ನಟನನ್ನು ಹೇಗೆ ಗುರುತಿಸಲಾಗುವುದಿಲ್ಲವೋ, ಹಾಗೆ ಮೂರ್ಖ ಪ್ರೇಕ್ಷಕನ ಪಾಲಿಗೆ ನೀನು ಅದೃಶ್ಯನಾಗಿದ್ದೀ, ಎಂದು ಹೇಳಿ, ಕೃಷ್ಣನನ್ನು ಈ ರೀತಿ ಪ್ರಾರ್ಥಿಸುತ್ತಾಳೆ. “ವಸುದೇವ ಸುತನಾದ ದೇವಕಿ ನಂದನ ನಾದ, ಯಶೋಧ ನಂದಾ ಮತ್ತು ವೃಂದಾವನದ ಇತರ ಗೋವಳಿಗರ ಕುಮಾರನಾದ, ಗೋವುಗಳು ಮತ್ತು ಇಂದ್ರಿಯಗಳ ಚೇತೋಹಾರಿಯಾದ ಭಗವಂತನಿಗೆ ನನ್ನ ಗೌರವಪೂರ್ವಕ ಪ್ರಣಾಮಗಳನ್ನು ಅರ್ಪಿಸುತ್ತೇನೆ. ನನ್ನ ಪ್ರೀತಿಯ ಕೃಷ್ಣನೇ, ನಮ್ಮ ವಂಶದವರ ಮೇಲೆ ನಿನಗೆ ಎಷ್ಟೊಂದು ಅಕ್ಕರೆ, ಕರುಣೆ, ಒಂದೇ ಸಮನಾಗಿ ಮೇಲಿಂದ ಮೇಲೆ ನಮಗೆ ಒದಗಿದ ಅಪಾಯಗಳಿಂದ, ಭಗವಂತನಾದ ನೀನು ನಮ್ಮನ್ನು ವಿಷಪೂರಿತ ಆಹಾರ, ಭಯಂಕರ ಅಗ್ನಿ, ರಾಕ್ಷಸರು, ದುಷ್ಟರ ಸಭೆ , ಹಾಗೂ ದೇಶಭ್ರಷ್ಟರಾಗಿ ವನವಾಸದಲ್ಲಿದ್ದಾಗೀನ ಕಷ್ಟಗಳು, ಅತಿರಥ, ಮಹಾರಥರೊಂದಿಗಿನ ಯುದ್ಧ, ಇಂಥ ಎಷ್ಟೆಷ್ಟೋ ಕಷ್ಟಗಳಿಂದ ನಮ್ಮನ್ನು ರಕ್ಷಿಸಿದೆ. ಈಗ ನೀನು ನಮ್ಮನ್ನು ಅಶ್ವತ್ಥಾಮನ ಅಸ್ತ್ರದಿಂದ ರಕ್ಷಿಸಿದ್ದಿಯಾ, ಹೀಗೆ ತನ್ನ ಕುಟುಂಬಕ್ಕೆ ಬಂದ ವಿಪತ್ತುಗಳನ್ನು ನೆನಪಿಸಿಕೊಳ್ಳುವುದರ ಮೂಲಕ, ಕೃಷ್ಣನ ಸ್ಮರಣೆ ಮಾಡುತ್ತಾ ನೆನೆಸಿಕೊಳ್ಳುತ್ತಿದ್ದಾಳೆ. ಕೃಷ್ಣ ನನಗನ್ನಿಸಿದೆ, ನಿನ್ನ ದರ್ಶನ, ಅನುಗ್ರಹ, ನಮಗೆ ಆಗುವುದಾದರೆ, ನನಗೆ ಯಾವಾಗಲೂ ಕಷ್ಟ ,ವಿಪತ್ತುಗಳೇ ಬರಲಿ, ನಿನ್ನಿಂದ ದೂರವಾಗುವ, ನಶ್ವರ ಸಂಪತ್ತು, ಸುಖಗಳೆಲ್ಲ, ನನ್ನ ಪಾಲಿಗೆ ವಿಪತ್ತುಗಳಾಗಲಿ, ನಿನ್ನನ್ನು ನೆನೆಪಿಸುವ, ನಿನ್ನ ದರ್ಶನವಾಗುವ, ನಿನ್ನ ಸ್ಮರಣೆ ಮಾಡುವ, ಕಷ್ಟಗಳೇ ನನಗೆ ಬರಲಿ. ಭಗವಂತ ಮೇಲಿಂದ ಮೇಲೆ ನನಗೆ ವಿಪತ್ತುಗಳನ್ನು ಕೊಡು ಎಂದು ಕುಂತಿ ಕೃಷ್ಣನನ್ನು ಬೇಡಿದಳು. ಮಧು ಪತಿಯೆ, ಹೇಗೆ ಗಂಗೆಯು ಸಾಗರದೆಡೆಗೆ ಯಾವ ತಡೆಯೂ ಇಲ್ಲದೆ ಪ್ರವಹಿಸುತ್ತೋ, ಹಾಗೆ ನನ್ನ ಗಮನವು, ನಿರಂತರವಾಗಿ ನಿನ್ನನ್ನು ಬಿಟ್ಟು ಬೇರಾವುದರೆಡೆಗೂ ಚಲಿಸದಂತೆ ಇರಲಿ. ಕಷ್ಟಗಳನ್ನೆ ಕೊಡು ಎಂದು ಕೇಳುವ ಕುಂತಿ, ಸುಖದಸುಪ್ಪತಿಗೆಯಲ್ಲಿ ಬೆಳೆದವಳಲ್ಲ . ತನ್ನ 13ನೇ ವರ್ಷದಿಂದಲೇ ಕಷ್ಟಪಟ್ಟಿದ್ದಾಳೆ. ಹೆಸರಳ್ಳ ರಾಜಮನೆತನ ಸೇರಿ ಮಹಾರಾಜನ ಪತ್ನಿಯಾದ ಕುಂತಿ, ಗಂಡನಿಗೆ ಒದಗಿದ ಶಾಪದ ಪ್ರಯುಕ್ತ ಯೌವನದಲ್ಲಿ ಗಂಡನ ಬಳಿಗೆ ಹೋಗುವಂತಿಲ್ಲ. ಗಂಡನ ಪ್ರಾಣ ರಕ್ಷಣೆ ಮಾಡುವುದೇ ಅವಳಿಗೆ ಸವಾಲಾಗಿತ್ತು. ದೇವತೆಗಳ ಅನುಗ್ರಹದಿಂದ ಹುಟ್ಟಿದ ಮಕ್ಕಳು ಯಾರಿಗೆ ಹುಟ್ಟಿದ ಮಕ್ಕಳು ಎಂದು ದೂಷಿಸುವ ದುರ್ಯೋಧನ ದುಶ್ಯಾಸನಾದಿಗಳು. ಮಕ್ಕಳನ್ನೆ ನಾಶಮಾಡ ಹೊರಟಿರುವ ಕೌರವರು. ಹೀಗಿರುವಾಗಲೂ ದಿಟ್ಟತನದಿಂದ ಕಷ್ಟಗಳನ್ನೆ ಸವಾಲಾಗಿ ಸ್ವೀಕರಿಸಿ ಎದುರಿಸಿ, ಕೃಷ್ಣನ ಅನುಗ್ರಹಕ್ಕೆ ಪಾತ್ರಳಾದವಳು. ಮುಂದುವರೆಸಿದ ಕುಂತಿ, ಕೃಷ್ಣಾ ನಿನ್ನ ದಿವ್ಯ ಲೀಲೆಗಳನ್ನು ಯಾರೂ ಅರಿಯಲಾರರು. ನೀನು ಯಾವ ವಸ್ತುವನ್ನು, ಪ್ರೀತಿಸುವುದೂ ಇಲ್ಲ, ದ್ವೇಷಿಸುವುದೂ ಇಲ್ಲ, ಜನರು ನಿನ್ನನ್ನು ಪಕ್ಷಪಾತಿಯೆಂದು, ಕಲ್ಪಿಸಿಕೊಳ್ಳುತ್ತಾರೆ ಅಷ್ಟೇ. ಕೃಷ್ಣ ನೀನು ಬಾಲ್ಯದಲ್ಲಿ ತಪ್ಪು ಮಾಡಿದೆ ಎಂದು ಯಶೋದೆ ಕಟ್ಟಿಹಾಕಲು ಪ್ರಯತ್ನಿಸಿದಳು. ನಿನ್ನ ಕಣ್ಣುಗಳಲ್ಲಿ ಅಶ್ರು ಪ್ರವಾಹ ತುಂಬಿತ್ತು . ಭಯಂಕರ ರಾಕ್ಷಸರನ್ನು ಕಾಡಿಸಿ ಭಯಗೊಳಿಸುವ, ನೀನು ಭಯಗೊಂಡ ಈ ದೃಶ್ಯವು ನನ್ನನ್ನು ಆಶ್ಚರ್ಯ ಚಕಿತಗೊಳಿಸಿತ್ತು. (ಆ ದಿನಗಳಲ್ಲಿ ಕುಂತಿ ಗೋಕುಲಕ್ಕೆ ಬಂದಿದ್ದಳು) ಓ ನನ್ನ ಪ್ರಭುವೇ ಎಲ್ಲಾ ಕರ್ತವ್ಯಗಳನ್ನು ನೀನೆ ನಿರ್ವಹಿಸಿರುವ ನಿನ್ನ ಕರುಣೆಯನ್ನು ನಾವು ಸಂಪೂರ್ಣವಾಗಿ ಅವಲಂಬಿಸಿರುವಾಗ ನಮ್ಮನ್ನು ರಕ್ಷಿಸಲು ಬೇರೆ ಯಾರೂ ಇಲ್ಲದಿರುವಾಗ ಎಲ್ಲ ರಾಜರುಗಳು ನಮ್ಮನ್ನು ದ್ವೇಷಿಸುತ್ತಿರುವಾಗ ನೀನು ನಮ್ಮನ್ನು ಕೈ ಬಿಡುವೆಯಾ? ನೀನು ಹೊರಟುಬಿಟ್ಟರೆ ನನಗೆ ನನ್ನ ಮಕ್ಕಳಿಗೆ, ನಿನ್ನ ದರ್ಶನಭಾಗ್ಯ ಇಲ್ಲವಾಗುತ್ತದೆ, ಇಲ್ಲೇ ಇರು ಅಂದರೆ, ನಮ್ಮ ಯಾದವರಿಗೆ ನಿನ್ನ ದರ್ಶನ ತಪ್ಪಿಸಿದಂತಾಗುತ್ತದೆ. ನಾನು ಏನು ಮಾಡಲಿ? ಎಂದು ಹೇಳುತ್ತಿದ್ದವಳಿಗೆ ತಕ್ಷಣ ನೆನಪಾಗಿ, ಕೃಷ್ಣ ನಾನೆಂತ ಮೂರ್ಖಳು, ನಮ್ಮ ಯಾದವರು, ನನ್ನ ಮಕ್ಕಳು, ಈ, ನನ್ನ, ನಮ್ಮ, ನನ್ನಲ್ಲಿ ಯಾಕೆ ಬಂತು. ಕೃಷ್ಣ ಇದು ನನ್ನದು, ಅದು ನನ್ನದು ಅನ್ನುವ ನನ್ನೊಳಗಿರುವ ಪಾಶವನ್ನು ಕಿತ್ತುಹಾಕು ಎಂದು ಬೇಡಿದಳು. ಆದರೂ ಓ ಗದಾಧರನೇ ನಮ್ಮ ಸಾಮ್ರಾಜ್ಯವು ನಿನ್ನ ಹೆಜ್ಜೆ ಗುರುತುಗಳಿಂದ ವಿನ್ಯಾಸ Follow ಮಾಡಿ 👇👇 https://whatsapp.com/channel/0029VaHu7GBAYlUExDLX4F1z
ಅಪಾರ ಏಕಾದಶಿಯ ಧರ್ಮಗುಪ್ತನ ಪೂರ್ಣ ಕಥೆ 👇👇 ಪದ್ಮ ಪುರಾಣದ ಪ್ರಕಾರ, ಬಹುಕಾಲಗಳ ಹಿಂದೆ ಮಹಿಷ್ಮತಿ ಎಂಬ ಪ್ರಖ್ಯಾತ ನಗರವೊಂದಿತ್ತು. ಅಲ್ಲಿ ಮಹಾರಾಜ ಯಶಃಕೀರ್ತಿ ಎಂಬ ಧರ್ಮಪರಾಯಣ ರಾಜನು ಆಳುತ್ತಿದ್ದ. ಆ ರಾಜ್ಯದಲ್ಲಿ ಒಂದು ದಿನ, ಧರ್ಮಗುಪ್ತ ಎಂಬ ಒಬ್ಬ ಯುವ ಬ್ರಾಹ್ಮಣನು ವಾಸಿಸುತ್ತಿದ್ದನು. ಧರ್ಮಗುಪ್ತನು ಬಾಲ್ಯದಲ್ಲೇ ತನ್ನ ತಂದೆ-ತಾಯಿಯನ್ನು ಕಳೆದುಕೊಂಡಿದ್ದನು. ಅವರಿಲ್ಲದ ಕಾರಣ ಅವನು ನಿರ್ಗತಿಕನಾಗಿ ಜೀವನ ಸಾಗಿಸುತ್ತಿದ್ದ. ಅವನ ಬಳಿ ಧನ, ಬಂಧುಗಳು, ಆಶ್ರಯ—ಯಾವುದೂ ಇರಲಿಲ್ಲ. ದುಃಖಭರಿತ ಜೀವನವನ್ನು ಕಂಡುಕೊಂಡಿದ್ದನು. ಆ ಸಮಯದಲ್ಲಿ ಮಹಾರಾಜನ ಅರಮನೆಗೆ ಹೋಗಿ ಅವನು ಸೇವೆಯನ್ನು ಮಾಡುತ್ತಿದ್ದ. ಅವನು ಶ್ರದ್ಧೆಯುತ, ನಿಷ್ಠಾವಂತ ಮತ್ತು ಶಾಂತನಾಗಿ ಬದುಕುತ್ತಿದ್ದ. ಅವನ ದುಃಖವನ್ನು ಗಮನಿಸಿದ ಮಹಾರಾಜನು ಅವನಿಗೆ ಆಶ್ರಯ ನೀಡಿದನು. ಒಂದು ದಿನ, ಧರ್ಮಗುಪ್ತನಿಗೆ ದೇವದತ್ತ ಎಂಬ ದೇವದೂತನು ದರ್ಶನ ನೀಡಿ ಹೇಳಿದನು: "ಹೇ ಧರ್ಮಗುಪ್ತ, ನೀನು ಧರ್ಮನಿಷ್ಠವಂತನಾಗಿದ್ದರೂ, ಪಾಪದ ಭೋಗವನ್ನು ಅನುಭವಿಸುತ್ತಿದ್ದೀಯೆ. ಅದರಿಂದ ಮುಕ್ತಿಯಾಗಬೇಕಾದರೆ, ನೀನು ವೈಶಾಖ ಮಾಸದ ಕೃಷ್ಣಪಕ್ಷದ ಏಕಾದಶಿಯಂದು ‘ಅಪಾರ ಏಕಾದಶಿ ವ್ರತ’ವನ್ನು ಆಚರಿಸಬೇಕು." ಧರ್ಮಗುಪ್ತನು ಆ ವ್ರತವನ್ನು ಭಕ್ತಿಯಿಂದ ಆಚರಿಸಿದನು. ಅವನು ದಿನವಿಡೀ ಉಪವಾಸವಿದ್ದು, ಶ್ರೀವಿಷ್ಣುವಿನ ನಾಮಸ್ಮರಣೆ ಮಾಡಿದನು. ರಾತ್ರಿಯ ಪಾರಾಯಣ, ಜಾಗರಣೆ, ಪೂಜೆ ಇತ್ಯಾದಿಗಳನ್ನು ನಿಷ್ಠೆಯಿಂದ ಕೈಗೊಂಡನು. ಅದರಿಂದ ಅವನ ಹಿಂದಿನ ಜನ್ಮದ ಪಾಪಗಳು ಹಾರಿಹೋಗಿ, ಅವನು ಶುದ್ಧಚಿತ್ತನಾದನು. ಅವನ ಬದುಕಿನಲ್ಲಿ ಚಮತ್ಕಾರಗಳು ಸಂಭವಿಸಿದವು. ಅವನು ಧನಿಕನಾದನು, ಆಲಂಕಾರಿಕ ವಿದ್ಯೆಗಳನ್ನು ಕಲಿತನು, ರಾಜನು ಅವನ ಮದುವೆ ಮಾಡಿಸಿದನು, ಧರ್ಮಗುಪ್ತನು ಶ್ರೇಷ್ಠರಾಜನಾಗಿ ತನ್ನ ಪ್ರಜೆಗಳಿಗೆ ಧರ್ಮಬೋಧನೆ ಮಾಡಿದನು. ಈ ಕಥೆಯ ಸಾರಾಂಶ: ಅಪಾರ ಏಕಾದಶಿಯು ಅತೀವ ಪವಿತ್ರವಾದ ದಿನ. ಈ ದಿನದ ವ್ರತವು ಪಾಪಕ್ಷಯವನ್ನು ನೀಡುತ್ತದೆ. ಭಕ್ತಿಯಿಂದ ಈ ವ್ರತ ಆಚರಿಸಿದರೆ ಜೀವನದಲ್ಲಿ ಶ್ರೇಯಸ್ಸು, ಸಂತೋಷ ಮತ್ತು ಮೋಕ್ಷ ಲಭ್ಯವಾಗುತ್ತದೆ. ಪುನ್ಯಲಾಭ: ಈ ಕಥೆಯನ್ನು ಕೇಳಿದ ಅಥವಾ ಓದಿದವರಿಗೂ ಪುಣ್ಯ ಸಿಗುತ್ತದೆ ಎನ್ನುವುದು ಪುರಾಣಗಳ ನಂಬಿಕೆ. ಪ್ರತಿ ದಿನ ಕಥೆಗಳಿಗಾಗಿ follow ಮಾಡಿ 👇👇👇 https://whatsapp.com/channel/0029VaHu7GBAYlUExDLX4F1z
https://yutube.openinapp.co/0z9s0
https://ytube.openinapp.co/pouranika-kathegalu
https://yutube.openinapp.co/4koo6

https://youtube.com/channel/UC5SdIARQGrSizhQlAbciMTg?si=YF0ot0Mu_oLnwvgL