ದಿನಕ್ಕೊಂದು ಪೌರಾಣಿಕ ಕಥೆ • 𝗙𝗼𝗹𝗹𝗼𝘄
June 20, 2025 at 04:58 AM
ಅಜ್ಞಾನದಿಂದ ಅಮೃತವನ್ನು ಕಳೆದುಕೊಂಡ ಉತ್ತಂಕ👇
👉ಕುರುಕ್ಷೇತ್ರ ಯುದ್ಧ ಸಂಗ್ರಾಮವು ಮುಗಿಯಿತು. ಪಾಂಡವರಿಗೆ ವಿಜಯವು ಲಭಿಸಿದ ಮೇಲೆ ಹಸ್ತಿನಾಪುರಕ್ಕೆ ಧರ್ಮರಾಯನು ರಾಜನಾದನು. ಆ ಸಮಯದಲ್ಲಿ ಉತ್ತಂಕನೆನ್ನುವವನು ಶ್ರೀಕೃಷ್ಣನನ್ನು ಭೇಟಿಯಾದನು. ಅವನು ಕೃಷ್ಣನೊಂದಿಗೆ, "ದೇವಾ! ನಾನು ಯಾವಾಗಲೂ ಕಾಲು ನಡಿಗೆಯಲ್ಲಿ ಪಯಣಿಸುತ್ತಿರುತ್ತೇನೆ. ಮಾರ್ಗಮಧ್ಯದಲ್ಲಿ ದಾಹವುಂಟಾದಾಗ ಅದು ದಟ್ಟ ಕಾಡಾಗಿರಲಿ ಅಥವಾ ಮರುಭೂಮಿಯಾಗಿರಲಿ ನನಗೆ ನೀರು ಸಿಗುವಂತೆ ಮಾಡು" ಎಂದು ಬೇಡಿಕೊಂಡನು. ಶ್ರೀಕೃಷ್ಣನು ಅದಕ್ಕೆ ತಥಾಸ್ತು ಅಂದನು.
ಉತ್ತಂಕನು ಒಂದು ದಿನ ದೊಡ್ಡ ಮರುಭೂಮಿಯೊಂದರ ಮೂಲಕ ನಡೆದುಕೊಂಡು ಹೋಗುತ್ತಿದ್ದ. ಸ್ವಲ್ಪ ಸಮಯಕ್ಕೆ ಅವನಿಗೆ ದಾಹವುಂಟಾಯಿತು. ಅವನು ನೀರಿಗಾಗಿ ಹುಡುಕಾಡಿ ಕಂಗಾಲಾದ. ಕಡೆಗೆ ಕೃಷ್ಣನು ತನಗಿತ್ತ ವರವನ್ನು ಅವನು ಜ್ಞಾಪಿಸಿಕೊಂಡ.
ಆಗ ಅವನ ಎದುರಿಗೆ ನಿಮ್ನ ಕುಲಕ್ಕೆ ಸೇರಿದ್ದ ಒಬ್ಬ ಭೇಟೆಗಾರ ಬಂದನು. ಅವನ ಬಟ್ಟೆಬರೆಗಳು ಅಲ್ಲಲ್ಲಿ ಹರಿದು ಹೋಗಿ, ಮಾಸಿ ದೂಳುದೂಳಾಗಿದ್ದವು. "ನಿಮಗೆ ನೀರಡಿಕೆಯಾದಂತೆ ತೋರುತ್ತದೆ. ಈ ಬೊಂಬಿನ ಕೊಳವೆಯಲ್ಲಿ ನೀರಿದೆ ಅದನ್ನು ಕುಡಿಯಿರಿ" ಎಂದು ಹೇಳಿದನು. ಉತ್ತಂಕನು ಆ ಭೇಟೆಗಾರನೆಡೆಗೆ ಸಂದೇಹದಿಂದ ನೋಡಿದನು. "ನಿಮ್ನ ಕುಲದವನ ಬಳಿಯಲ್ಲಿ ಅದು ಹೇಗೆ ತಾನೇ ನೀರು ಕುಡಿಯಬಲ್ಲೆ?" ಎಂದು ಅವನು ಭಾವಿಸಿ, "ನನಗೆ ದಾಹವೇನೂ ಆಗಿಲ್ಲ" ಎಂದು ಹೇಳಿದ. ಆ ಭೇಟೆಗಾರನು ನಾನಾ ವಿಧವಾಗಿ ಬೇಡಿಕೊಂಡರೂ ಉತ್ತಂಕನು ಅವನ ಕೈಯಿಂದ ನೀರನ್ನು ಸ್ವೀಕರಿಸಲು ಒಪ್ಪಿಕೊಳ್ಳಲಿಲ್ಲ. ಆಗ ಆ ಬೇಟೆಗಾರ ಅಲ್ಲಿಂದ ಅದೃಶ್ಯವಾದನು. ಆಗ ಉತ್ತಂಕನಿಗೆ ತಾನು ಮಾಡಿದ ಅಚಾತುರ್ಯದ ಅರಿವಾಯಿತು.
"ಕೃಷ್ಣಾ! ನೀನು ಕೊಟ್ಟ ನೀರನ್ನು ಕುಡಿಯಲು ನಿರಾಕರಿಸಿ ಎಂತಹ ಅಪರಾಧ ಮಾಡಿದೆ" ಎಂದು ಉತ್ತಂಕನು ಪರಿಪರಿಯಾಗಿ ದುಃಖಿಸಿದ. ಆಗ ಕೃಷ್ಣನು ಅವನ ಮುಂದೆ ಪ್ರತ್ಯಕ್ಷನಾದನು. ಉತ್ತಂಕನು ಅವನ ಪಾದಗಳಿಗೆ ಸಾಷ್ಟಾಂಗವೆರಗಿ, "ದೇವಾ! ನೀನು ಈ ವಿಧವಾಗಿ ನನ್ನನ್ನು ಪರೀಕ್ಷಿಸುವುದು ನಿನಗೆ ತರವೇ?" ಎಂದು ಪ್ರಶ್ನಿಸಿದನು.
ಅದಕ್ಕೆ ಕೃಷ್ಣನು ನಗುತ್ತಾ "ನಿನಗೆ ಅಮೃತವನ್ನು ಕೊಡು ಎಂದು ಇಂದ್ರನಿಗೆ ಹೇಳಿದ್ದೆ. ಅವನು ಒಬ್ಬ ಮಾನವನಿಗೆ ಅಮೃತವನ್ನು ಕೊಡಲಾರೆನೆಂದ. ಆದರೆ ನಿನಗೆ ಅಮೃತವನ್ನು ಕೊಡಲು ಅವನನ್ನು ಒಪ್ಪಿಸಿದ್ದೆ. ಅದಕ್ಕೆ ಇಂದ್ರನು ಒಬ್ಬ ನಿಮ್ನ ಕುಲದವನೊಡನೆ ಅಮೃತವನ್ನು ಕಳುಹಿಸುತ್ತೇನೆಂದೂ, ಮಾನವರೆಲ್ಲರೂ ಒಂದೇ ಎಂದು ಭಾವಿಸಿ ಅವನು ಕೊಟ್ಟ ಅಮೃತವನ್ನು ಉತ್ತಂಕನು ಕುಡಿದರೆ ಸರಿ ಇಲ್ಲದೇ ಹೋದರೆ ಆ ಅಮೃತವನ್ನು ಹಿಂದಕ್ಕೆ ತರಿಸಿಕೊಳ್ಳುತ್ತೇನೆ ಎನ್ನುವ ನಿಬಂಧನೆಯನ್ನು ವಿಧಿಸಿದ. ನೀನು ಅಜ್ಞಾನದಿಂದ ಅಮೃತವನ್ನು ಕುಡಿಯುವ ಅವಕಾಶವನ್ನು ಕಳೆದುಕೊಂಡೆ" ಎಂದು ಹೇಳಿದನು. ಉತ್ತಂಕನು ತನ್ನ ದಾಹವನ್ನು ಇಂಗಿಸಿಕೊಳ್ಳದೇ ಆ ಮರುಭೂಮಿಯಲ್ಲಿ ತನ್ನ ಪಯಣವನ್ನು ಮುಂದುವರೆಸಿದ.
ಪೌರಾಣಿಕ ಕಥೆಗಳಿಗಾಗಿ subcribe ಆಗಿ ..
👇👇👇link 👇👇
https://ytube.openinapp.co/pouranika-kathegalu
🙏
😮
8