Chief Minister Of Karnataka
January 26, 2025 at 03:43 AM
76ನೇ ಗಣರಾಜ್ಯೋತ್ಸವವನ್ನು
ನಾವೆಲ್ಲರೂ ಒಂದಾಗಿ ಸಂಭ್ರಮಿಸುವ ಜೊತೆಯಲ್ಲಿ,
ಪ್ರಜಾಸತ್ತಾತ್ಮಕ ಗಣರಾಜ್ಯವಾಗಿ ಘೋಷಿಸಿಕೊಂಡ 75 ವರ್ಷಗಳ ನಂತರವೂ ದೇಶದಲ್ಲಿ ಅಸಮಾನತೆ, ಅಸ್ಪೃಶ್ಯತೆ,
ತಾರತಮ್ಯ, ಬಡತನ ಯಾಕೆ ಜೀವಂತವಾಗಿದೆ
ಎನ್ನುವ ಬಗ್ಗೆಯೂ ಆತ್ಮಾವಲೋಕನ ಮಾಡೋಣ.
ತಾರತಮ್ಯ ಹಾಗೂ ಅಸಮಾನತೆ ಹೆಚ್ಚಾದಂತೆಲ್ಲ ದೇಶದ ಸಂವಿಧಾನ ಹಾಗೂ ಪ್ರಜಾಪ್ರಭುತ್ವ ದುರ್ಬಲಗೊಂಡು,
ಅಧಿಕಾರ ಹಾಗೂ ಅವಕಾಶಗಳು
ಉಳ್ಳವರ ಪಾಲಾಗುತ್ತದೆ ಎನ್ನುವ ವಾಸ್ತವವನ್ನು ಅರ್ಥಮಾಡಿಕೊಳ್ಳೋಣ.
ಗಣರಾಜ್ಯೋತ್ಸವ ಎಂದರೆ ಸಂಭ್ರಮದಲ್ಲಿ ಮೈಮರೆಯುವ ದಿನವಲ್ಲ,
ಸಂವಿಧಾನದ ಆಶಯಗಳು ಎಷ್ಟರ ಮಟ್ಟಿಗೆ ಈಡೇರಿವೆ ಎನ್ನುವುದನ್ನು ಮೌಲ್ಯಮಾಪನ ಮಾಡಬೇಕಾದ, ಜನರು ತಮ್ಮ ಹಕ್ಕು ಮತ್ತು ಕರ್ತವ್ಯಗಳ ಕಡೆಗೆ ಜಾಗೃತರಾಗಬೇಕಾದ ದಿನ.
ದೇಶದ ಪ್ರತಿಯೊಬ್ಬ ಪ್ರಜೆಯೂ ಸ್ವಾತಂತ್ರ್ಯ, ಸಮಾನತೆ ಹಾಗೂ ಘನತೆಯ ಬದುಕನ್ನು ಸಂಭ್ರಮಿಸುವಂತಹ ಕಲ್ಯಾಣ ರಾಜ್ಯವನ್ನು ಕಟ್ಟಲು ನಾವೆಲ್ಲ ಕೂಡಿ ಪ್ರಯತ್ನಿಸೋಣ.
ನಾಡಬಾಂಧವರಿಗೆ 76ನೇ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.
- ಮುಖ್ಯಮಂತ್ರಿ ಸಿದ್ದರಾಮಯ್ಯ
#republicday
❤️
👍
🙏
😂
😢
103