ಕರ್ನಾಟಕ ರಾಜ್ಯ(6-8) ಪದವೀಧರ ಪ್ರಾಥಮಿಕ ಶಿಕ್ಷಕರ ಸಂಘ(ರಿ), ಬೆಂಗಳೂರು
February 15, 2025 at 03:07 PM
*ಕರ್ನಾಟಕ ರಾಜ್ಯ (6-8) ಪದವೀಧರ ಪ್ರಾಥಮಿಕ ಶಿಕ್ಷಕರ ಸಂಘ (ರಿ.) ಬೆಂಗಳೂರು* 🌟🌟🌟🌟🌟🌟🌟🌟 *ಆತ್ಮೀಯ ಪದಾಧಿಕಾರಿಗಳೇ ಹಾಗೂ ರಾಜ್ಯದ ಸಮಸ್ತ GPT ಶಿಕ್ಷಕ ಬಂಧುಗಳೇ........* *👉ನೂತನ ಶಿಕ್ಷಕರ ಹಿಂಬಾಕಿ ವೇತನ ವಿಚಾರವಾಗಿ ಮಾನ್ಯ ಆಯುಕ್ತರ ಕಾರ್ಯಾಲಯದ ಪತ್ರ ಸಂಖ್ಯೆ DPI0C3-1(oth)/22/2024/1587898 ದಿನಾಂಕ 29/01/2025 ರ ಜ್ಞಾಪನದನ್ವಯ ಜಿ.ಪಿ.ಟಿ ಶಿಕ್ಷಕರ ಅಕ್ಟೋಬರ್ 2023 ರಿಂದ ಪೆಬ್ರವರಿ 2024 ಮಾಹೆಯ ವರೆಗಿನ ಹಿಂಬಾಕಿ ವೇತನ ಪಾವತಿಸಲು ಕೊರತೆ ಇರುವ ಅನುದಾನ ಬಿಡುಗಡೆ ಮಾಡುವ ಬಗ್ಗೆ ತಾಲ್ಲೂಕುವಾರು ಅನುದಾನ ವಿವರಗಳನ್ನು ಜಿಲ್ಲಾ ಹಂತದಿಂದ ಪಡೆದು ಕ್ರೂಡಿಕರಿಸಿ 02 ದಿನದೊಳಗೆ ಮಾಹಿತಿ ನೀಡಲು ಆದೇಶವಾಗಿರುತ್ತದೆ ಅದರಂತೆ ರಾಜ್ಯದ 21 ಶೈಕ್ಷಣಿಕ ಜಿಲ್ಲೆಗಳಿಂದ ಕೊರತೆ ಅನುದಾನ ಸಂಬಂಧಿತ ಕಡತವು 5656. 59 ಲಕ್ಷಗಳ ಅನುದಾನ ಬಿಡುಗಡೆ ಪ್ರಸ್ತಾಪಿಸಿ ಸದರಿ ಅನುದಾನವನ್ನು ನೇರವಾಗಿ ಸಂಬಂಧ ಪಟ್ಟ ತಾಲ್ಲೂಕು ಪಂಚಾಯ್ತಿಗೆ ನೇರವಾಗಿ ಅನುದಾನ ಬಿಡುಗಡೆ ಗೊಳಿಸಲು ಅತೀ ಶೀಘ್ರದಲ್ಲಿ ಆದೇಶ ಕೋರಿ ಮಾನ್ಯ ಇಲಾಖಾ ಪ್ರಧಾನ ಕಾರ್ಯದರ್ಶಿಗಳ ಕಾರ್ಯಾಲಯಕ್ಕೆ ದಿನಾಂಕ 10.02.2025 ರಂದು ಸಲ್ಲಿಕೆಯಾಗಿದ್ದು ಸದರಿ ಕಡತವು ಮಾನ್ಯ ಇಲಾಖಾ ಪ್ರಧಾನ ಕಾರ್ಯದರ್ಶಿಗಳ(ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ) ಕಾರ್ಯಾಲಯದಿಂದ ಆರ್ಥಿಕ ಇಲಾಖೆಗೆ ಸೋಮವಾರ ಸಲ್ಲಿಕೆಯಾಗುವ ಸಾಧ್ಯತೆ ಇರುತ್ತದೆ ಎಂಬ ವಿಚಾರವನ್ನು ತಮ್ಮ ಗಮನಕ್ಕೆ ತರಬಯಸುತ್ತೇವೆ* *ಇನ್ನುಳಿದ 14 ಶೈಕ್ಷಣಿಕ ಜಿಲ್ಲೆಗಳಲ್ಲಿ ಅನುದಾನ ಲಭ್ಯವಿರುವ ಬಗ್ಗೆ ಮಾಹಿತಿ ಇದ್ದು ಆರ್ಥಿಕ ಇಲಾಖೆಯ ಸಹಮತಿಯ ನಿರೀಕ್ಷೆಯಲ್ಲಿ ಇರುತ್ತದೆ ಮುಂದುವರೆದು ಮುಂದಿನ ವಾರದಲ್ಲಿ ಆರ್ಥಿಕ ಇಲಾಖೆಯಿಂದ ಸಹಮತಿ ದೊರೆಯುವ ನಿರೀಕ್ಷೆ ಇದ್ದು ಈ ಕುರಿತಾಗಿ ರಾಜ್ಯ ಸಂಘಟನೆ ಅಗತ್ಯ ಕ್ರಮ ವಹಿಸಲಿದೆ* *👉ವೇತನ ಸಂರಕ್ಷಣೆ ಕಡತವೂ ಸಹ ಪ್ರಗತಿಯಲ್ಲಿದ್ದು ಅದನ್ನು ರಾಜ್ಯ ಸಂಘ ಫಾಲೋ ಆಫ್ ಮಾಡುತ್ತಿದ್ದು ಈ ವಿಚಾರ ಶೀಘ್ರದಲ್ಲಿ ತಾರ್ಕಿಕ ಅಂತ್ಯ ಕಾಣುವ ನಿರೀಕ್ಷೆಯಿದೆ ಎಂಬ ವಿಚಾರವನ್ನು ತಮ್ಮೆಲ್ಲರ ಗಮನಕ್ಕೆ ತರುತ್ತೇವೆ* 🙏🙏🙏🙏🙏🙏🙏🙏 *✊GPT ಶಿಕ್ಷಕರ ಹಿತರಕ್ಷಣೆಯೇ ನಮ್ಮ ಸಂಘದ ಪರಮೋಚ್ಚ ಗುರಿ✊* 💫💫💫💫💫💫💫💫 *ಮುರಳೀಧರ್.ಪಿ.* *ರಾಜ್ಯಾಧ್ಯಕ್ಷರು* *ನರಸಿಂಹಮೂರ್ತಿ.ಕೆ.ಆರ್* *ರಾಜ್ಯ ಪ್ರಧಾನ ಕಾರ್ಯದರ್ಶಿ* *ಕರ್ನಾಟಕ ರಾಜ್ಯ (6-8) ಪದವೀಧರ ಪ್ರಾಥಮಿಕ ಶಿಕ್ಷಕರ ಸಂಘ (ರಿ.)* *ಬೆಂಗಳೂರು.* 💚🧡💚🧡💚💛💚🧡
❤️ 2

Comments