ಸ್ಪರ್ಧಾತ್ಮಕ ಪರೀಕ್ಷಾ ತಯಾರಿ
February 3, 2025 at 11:05 AM
🔰 *ಭಾರತ ಮೂಲದ ಅಮೆರಿಕನ್ ಗಾಯಕಿ ಚಂದ್ರಿಕಾ ಟಂಡನ್ಗೆ ಗ್ರ್ಯಾಮಿ ಗರಿ. / Indian-origin banking whiz Chandrika Tandon wins at the 67th Grammys*
👉🏻 *ಭಾರತ ಮೂಲದ ಅಮೆರಿಕನ್ ಗಾಯಕಿ ಮತ್ತು ಉದ್ಯಮಿ ಚಂದ್ರಿಕಾ ಟಂಡನ್ ಅವರಿಗೆ ಗ್ರ್ಯಾಮಿ ಪ್ರಶಸ್ತಿ ಲಭಿಸಿದೆ. ಭಾರತೀಯ ಶಾಸ್ತ್ರೀಯ ಸಂಗೀತ, ವೈದಿಕ ಪಠಣ ಮತ್ತು ಅಂತರರಾಷ್ಟ್ರೀಯ ಸಂಪ್ರದಾಯಗಳನ್ನು ಒಳಗೊಂಡ ಈ ಆಲ್ಬಮ್ 'ಬೆಸ್ಟ್ ನ್ಯೂ ಏಜ್' ಆಲ್ಬಂ ವಿಭಾಗದಲ್ಲಿ ಟಂಡನ್ ಅವರ 'ತ್ರಿವೇಣಿ' ಆಲ್ಬಂಗಾಗಿ ಗ್ರ್ಯಾಮಿ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಸ್ಪರ್ಧೆಯಲ್ಲಿ ಇದ್ದ ಭಾರತದ ರಿಕ್ಕಿ ಕೇಜ್ ಮೊದಲಾದವರನ್ನು ಅವರು ಹಿಂದಿಕ್ಕಿದ್ದಾರೆ.*
👉🏻 *ಲಾಸ್ ಏಂಜಲೀಸ್ನಲ್ಲಿ 67ನೇ ಅತಿ ದೊಡ್ಡ ಸಂಗೀತ ಪ್ರಶಸ್ತಿ ಕಾರ್ಯಕ್ರಮ ನಡೆಯುತ್ತಿದೆ. ಈ ಹಿಂದೆ ಟಂಡನ್ ಅವರು 2009ರಲ್ಲಿ 'ಸೋಲ್ ಕಾಲ್' ಎನ್ನುವ ಆಲ್ಬಂಗೆ ಮೊದಲನೇ ಬಾರಿ ಗ್ರ್ಯಾಮಿ ಪ್ರಶಸ್ತಿ ಗೆದ್ದಿದ್ದರು. 2024ರ ಆಗಸ್ಟ್ 30ರಂದು ತ್ರಿವೇಣಿ ಆಲ್ಬಂ ಬಿಡುಗಡೆಯಾಗಿದೆ. ಒಟ್ಟು ಏಳು ಹಾಡುಗಳ ಈ ಆಲ್ಬಂನಲ್ಲಿ, ಪ್ರತಿಯೊಂದು ಹಾಡು ಬೇರೆ ಬೇರೆ ಕಥೆಯನ್ನು ಹೇಳುತ್ತದೆ ಎಂದು ಟಂಡನ್ ಅವರ ತಂಡ ಹೇಳಿದೆ.*