Priyank Kharge 🇮🇳
January 23, 2025 at 06:13 AM
ಕರ್ನಾಟಕದ ಜೈವಿಕ ತಂತ್ರಜ್ಞಾನದ ಪಯಣ ದಶಕಗಳ ಹಿಂದೆ ಪ್ರಾರಂಭವಾಯಿತು. ಇಂದು ನಾವು, ಭಾರತದ ಜೈವಿಕ ಆರ್ಥಿಕತೆಯ 1/3 ನೇ ಭಾಗವನ್ನು ಮುನ್ನಡೆಸುತ್ತಿದ್ದೇವೆ. ಆದರೆ ಇದು ನಾವು ಸಾಧಿಸಬಹುದಾದ ಮೈಲುಗಲ್ಲಿನ ಆರಂಭವಷ್ಟೆ.
ನಮ್ಮ ಜೈವಿಕ ತಂತ್ರಜ್ಞಾನ ನೀತಿ 2024-29ರ ಉದ್ದೇಶವು, 2030ರ ವೇಳೆಗೆ 100 ಬಿಲಿಯನ್ ಡಾಲರ್ಗಳನ್ನು ತಲುಪುವುದು ಮಾತ್ರವಲ್ಲದೆ, ಜಾಗತಿಕ ಪರಿಣಾಮ ಬೀರುವ ಪ್ರಗತಿಪರ ವಿಜ್ಞಾನದಲ್ಲಿ ಕರ್ನಾಟಕವನ್ನು ಪ್ರಭಾವಶಾಲಿ ತಾಣವನ್ನಾಗಿ ಮಾಡುವುದರ ಕುರಿತಾಗಿದೆ. 27 ಶ್ರೇಷ್ಠತಾ ಕೇಂದ್ರಗಳು, ಮುಂದುವರಿದ ಜೈವಿಕ ಉತ್ಪಾದನಾ ಕೇಂದ್ರಗಳು, ಅತ್ಯಾಧುನಿಕ ಸಂಶೋಧನಾ ಸೌಲಭ್ಯಗಳು- ನಾವೀನ್ಯತೆಗೆ ಶಕ್ತಿ ತುಂಬುವ ಮೂಲಸೌಕರ್ಯವನ್ನು ನಾವು ನಿರ್ಮಿಸುತ್ತಿದ್ದೇವೆ.
ಇದು ಪ್ರಯೋಗಾಲಯಗಳು ಮತ್ತು ಸಂಶೋಧನಾ ಕೇಂದ್ರಗಳಿಗೆ ಸೀಮಿತವಾಗಿಲ್ಲ. ಶೇಕಡ 50ರಷ್ಟು ಮಹಿಳಾ ವೃತ್ತಿಪರರನ್ನು ಹೊಂದಿರುವ 40,000 ತಜ್ಞರು ಈ ರೂಪಾಂತರವನ್ನು ಮುನ್ನಡೆಸಲಿದ್ದಾರೆ. ಅಪರೂಪದ ರೋಗ ಚಿಕಿತ್ಸೆಗಳಿಂದ ಬಾಹ್ಯಾಕಾಶ ಜೈವಿಕ ತಂತ್ರಜ್ಞಾನದವರೆಗೆ, ಸಾಗರ ಸಂಶೋಧನೆಯಿಂದ ಸುಸ್ಥಿರ ಪರಿಹಾರಗಳವರೆಗೆ - ಕರ್ನಾಟಕದ ವಿಜ್ಞಾನಿಗಳು ಮುಖ್ಯವಾದ ಸವಾಲುಗಳನ್ನು ಪರಿಹರಿಸುತ್ತಿದ್ದಾರೆ.
ಸ್ಟಾರ್ಟ್ಅಪ್ಗಳಿಂದ ಹಿಡಿದು ದೊಡ್ಡ ಕೈಗಾರಿಕೆಗಳವರೆಗೆ, ನಾವು ಈ ವಿಷನ್ ಅನ್ನು ಪ್ರಬಲ ಆರ್ಥಿಕ ನೆರವಿನೊಂದಿಗೆ ಬೆಂಬಲಿಸುತ್ತಿದ್ದೇವೆ - ಬೆಂಗಳೂರಿನ ಹೊರಗಿನ ಸ್ಟಾರ್ಟ್ಅಪ್ಗಳಿಗೆ ಶೇಕಡ 100 ಎಸ್ಜಿಎಸ್ಟಿ ಮರುಪಾವತಿ, ಜೈವಿಕ ಉತ್ಪಾದನೆಗೆ ₹1 ಕೋಟಿಯವರೆಗೆ ಬಂಡವಾಳ ಸಬ್ಸಿಡಿ ಮತ್ತು ಪೇಟೆಂಟ್ಗಳು, ಮೂಲಮಾದರಿ ಹಾಗೂ ಮಾರುಕಟ್ಟೆ ಪ್ರವೇಶಕ್ಕೆ ಸಮಗ್ರ ಬೆಂಬಲ ನೀಡುತ್ತಿದ್ದೇವೆ.
ಕರ್ನಾಟಕದ ಪ್ರತಿಯೊಂದು ಜಿಲ್ಲೆಯೂ ಈ ಬೆಳವಣಿಗೆಯ ಕಥೆಯ ಭಾಗವಾಗಲಿದೆ. ಪ್ರಾದೇಶಿಕ ಆವಿಷ್ಕಾರಿ ಕೇಂದ್ರಗಳು ಮತ್ತು ಸಂಶೋಧನಾ ಕೇಂದ್ರಗಳ ಮೂಲಕ, ಪ್ರತಿಭೆ ಮತ್ತು ತಂತ್ರಜ್ಞಾನದ ಸಮಾಗಮದ ಅವಕಾಶಗಳನ್ನು ನಾವು ಸೃಷ್ಟಿಸುತ್ತಿದ್ದೇವೆ.
ಕರ್ನಾಟಕವು ಭಾರತದ ಐಟಿ ಕ್ರಾಂತಿಯನ್ನು ಮುನ್ನಡೆಸಿತ್ತು. ಈಗ, ನಾವು ಭಾರತದ ಬಯೋಟೆಕ್ ರೂಪಾಂತರವನ್ನು ಮುನ್ನಡೆಸುತ್ತೇವೆ.
#biotechvision2030
🙏
👍
❤️
15