Priyank Kharge 🇮🇳
January 24, 2025 at 11:42 AM
ಒಬ್ಬ ಹೆಣ್ಣು ಶಿಕ್ಷಿತಳಾದರೆ ಒಂದಿಡೀ ಸಮಾಜ ಶಿಕ್ಷಿತವಾದಂತೆ ಎನ್ನುವ ಮಾತು ಅಕ್ಷರಶಃ ಸತ್ಯ.
ಇಂದು ಹೆಣ್ಣು ಮಕ್ಕಳು ಎಲ್ಲಾ ಕ್ಷೇತ್ರಗಳಲ್ಲೂ ತಮ್ಮ ವಿಶಿಷ್ಟ ಹೆಜ್ಜೆ ಗುರುತುಗಳನ್ನು ಮೂಡಿಸಿದ್ದಾರೆ. ದೊಡ್ಡ ದೊಡ್ಡ ಉದ್ದಿಮೆಗಳನ್ನು, ಅಧಿಕಾರಗಳನ್ನು ಸಮರ್ಥವಾಗಿ ಮುನ್ನಡೆಸಿದ್ದಾರೆ.
ಹೆಣ್ಣು ಮಕ್ಕಳಲ್ಲಿ ಸಹಜವಾಗಿ ಬಂದಿರುವ ತಾಳ್ಮೆ, ಏಕಾಗ್ರತೆ, ಗುರಿ ಸಾಧಿಸುವ ಛಲವು ಅವರನ್ನು ಸಾಧಕರನ್ನಾಗಿ ಮಾಡುತ್ತದೆ. ರಾಷ್ಟ್ರೀಯ ಹೆಣ್ಣು ಮಕ್ಕಳ ದಿನವಾದ ಈ ದಿನದಂದು ಹೆಣ್ಣು ಮಕ್ಕಳಿಗೆ ಶಿಕ್ಷಣ, ಸಮಾನ ಅವಕಾಶಗಳನ್ನು ಕಲ್ಪಿಸಿಕೊಡುವ ಹಾಗೂ ನಿರ್ಭೀತ ವಾತಾವರಣವನ್ನು ನಿರ್ಮಿಸಿಕೊಡುವ ಸಂಕಲ್ಪ ಮಾಡೋಣ.
#nationalgirlchildday
🙏
❤️
👍
25