Priyank Kharge 🇮🇳
February 4, 2025 at 12:33 PM
ಕಲಬುರಗಿ ನಗರದ ಖಾಸಗಿ ಶಾಲೆಗೆ ಬಾಂಬ್ ಬೆದರಿಕೆಯ ಇ ಮೇಲ್ ಬಂದಿರುವ ಹಿನ್ನೆಲೆಯಲ್ಲಿ, ನಗರ ಪೊಲೀಸರು ತಕ್ಷಣ ಶ್ವಾನ ದಳ ಹಾಗೂ ಬಾಂಬ್ ನಿಷ್ಕ್ರಿಯ ದಳದೊಂದಿಗೆ ಶಾಲೆಗೆ ಧಾವಿಸಿ ಎಲ್ಲ ಮಕ್ಕಳನ್ನು ಶಾಲೆಯಿಂದ ಹೊರತಂದು, ಇಡೀ ಕಟ್ಟಡದ ಕೂಲಂಕಷ ಪರಿಶೀಲನೆ ನಡೆಸಿದ್ದಾರೆ. ಪರಿಶೀಲನೆ ವೇಳೆ ಯಾವುದೇ ಬಾಂಬ್ ಅಥವಾ ಸ್ಫೋಟಕ ವಸ್ತು ಕಂಡುಬಂದಿರುವುದಿಲ್ಲ.
ಆ ನಂತರ ಪೋಲೀಸರು ಇದೊಂದು “ಹುಸಿ ಬಾಂಬ್ ಬೆದರಿಕೆ ಮೇಲ್” ಎಂದು ಪರಿಗಣಿಸಿದ್ದು, ನಗರದ ಸಾರ್ವಜನಿಕರು, ಪಾಲಕರು ಹಾಗೂ ವಿದ್ಯಾರ್ಥಿಗಳು ಆತಂಕಪಡುವ ಅಗತ್ಯವಿಲ್ಲ.
ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸಮಗ್ರ ತನಿಖೆ ನಡೆಸುತ್ತಿದ್ದಾರೆ.
🙏
👍
❤️
22