Priyank Kharge 🇮🇳
February 10, 2025 at 11:23 AM
ಆಧುನಿಕ ತಂತ್ರಜ್ಞಾನಗಳು, ಅತ್ಯಾಧುನಿಕ ಸೌಲಭ್ಯಗಳು ತುರ್ತು ಸಂದರ್ಭಗಳಲ್ಲಿ ಕಲಬುರಗಿ ಹಾಗು ಕಲ್ಯಾಣ ಕರ್ನಾಟಕದ ಜನತೆಯ ಆರೋಗ್ಯ ಕಾಪಾಡುವಲ್ಲಿ ನೆರವಾಗುತ್ತಿವೆ. ಇದಕ್ಕೆ ಕಾರಣ ಕಳೆದ ವರ್ಷ ಕಲಬುರಗಿಯಲ್ಲಿ ಉದ್ಘಾಟಿಸಲಾದ ಅತ್ಯಾಧುನಿಕ 'ಟ್ರಾಮಾ ಕೇರ್ ಸೆಂಟರ್'
ಕಲಬುರಗಿ ಜಿಮ್ಸ್ ಆವರಣದಲ್ಲಿರುವ 110 ಬೆಡ್ ಸಾಮರ್ಥ್ಯದ ಈ ಅತ್ಯಾಧುನಿಕ ಆಸ್ಪತ್ರೆಗೆ ಈಗ ಒಂದು ವರ್ಷದ ಸಂಭ್ರಮ. ಈ ಅವಧಿಯಲ್ಲಿ 9 ಸಾವಿರಕ್ಕೂ ಹೆಚ್ಚು ರೋಗಿಗಳಿಗೆ ತುರ್ತು ಚಿಕಿತ್ಸಾ ಸೇವೆಗಳು, 3 ಸಾವಿರಕ್ಕೂ ಹೆಚ್ಚು ರೋಗಿಗಳಿಗೆ ಶಸ್ತ್ರ ಚಿಕಿತ್ಸೆಗಳನ್ನು ನಡೆಸಲಾಗಿದೆ.
ಕೇವಲ ಕಲಬುರಗಿ ಮಾತ್ರವಲ್ಲದೆ ಸುತ್ತಲಿನ 200 ಕಿ.ಮೀ ವ್ಯಾಪ್ತಿಯಲ್ಲಿ ಕಲ್ಯಾಣ ಕರ್ನಾಟಕದ ಜನತೆಯ ತುರ್ತು ಅಗತ್ಯದ ಸಂದರ್ಭಗಳಲ್ಲಿ ಈ ಟ್ರಾಮಾ ಕೇರ್ ಸೆಂಟರ್ ಗುಣಮಟ್ಟದ ವೈದ್ಯಕೀಯ ಸೇವೆಯನ್ನು ಒದಗಿಸುತ್ತಿರುವುದು ಸಂತಸದ ವಿಚಾರವಾಗಿದೆ. ಇಎಸ್‌ಐಸಿ, ಕಿದ್ವಾಯಿ, ಜಯದೇವ, ಜಿಮ್ಸ್'ನಂತಹ ಸಂಸ್ಥೆಗಳೊಂದಿಗೆ ಈ ಟ್ರಾಮಾ ಕೇರ್ ಸೆಂಟರ್ ಕೂಡ ಇಲ್ಲಿನ ಜನರ ಜೀವನಾಡಿಯಾಗಿ ಕಾರ್ಯನಿರ್ವಹಿಸುತ್ತಿದೆ.
🙏
❤️
👍
23