Priyank Kharge 🇮🇳
February 13, 2025 at 05:39 AM
ಬೆಂಗಳೂರಿನ ಉತ್ತರಕ್ಕೆ ಬರಲಿರುವ 5,800 ಎಕರೆ KWIN ಸಿಟಿ ಯೋಜನೆಯ ಪ್ರಮುಖ ಆಧಾರಸ್ತಂಭಗಳಲ್ಲಿ ಒಂದಾದ #investkarnataka2025 ಸಭೆಯಲ್ಲಿ ಹೆಲ್ತ್ಕೇರ್ ಇನ್ನೋವೇಷನ್ ಕುರಿತಾದ ದುಂಡುಮೇಜಿನ ಸಭೆಯಲ್ಲಿ ಭಾಗವಹಿಸಿದೆ.
ಕರ್ನಾಟಕವು ಭಾರತದ ಜೈವಿಕ ತಂತ್ರಜ್ಞಾನ ರಾಜಧಾನಿಯಾಗಿದ್ದು, ದೇಶದ ಜೈವಿಕ ಆರ್ಥಿಕತೆಗೆ ಶೇಕಡ 21ಕ್ಕಿಂತ ಹೆಚ್ಚು ಕೊಡುಗೆ ನೀಡುತ್ತಿದೆ ಮತ್ತು 2030ಕ್ಕೆ $70 ಬಿಲಿಯನ್ ಜೈವಿಕ ಆರ್ಥಿಕತೆ ಸಾಧಿಸುವ ಆಶಾವಾದಿ ಅನ್ವೇಷಣೆಯಲ್ಲಿದ್ದೇವೆ.
ಬಯೋಫಾರ್ಮಾ, ಜೈವಿಕ ಉದ್ಯಮ, ಜೈವಿಕ ಕೃಷಿ ಮತ್ತು ಜೈವಿಕ ಸೇವೆಗಳಲ್ಲಿ ಬಲವಾದ ಅಡಿಪಾಯದೊಂದಿಗೆ, ಕರ್ನಾಟಕವು ಜೈವಿಕ ತಂತ್ರಜ್ಞಾನದ ನಾಯಕನಾಗಿ ದೃಢವಾಗಿ ನಿಂತಿದೆ. ನಮ್ಮ ಸಮರ್ಪಿತ ಜೈವಿಕ ತಂತ್ರಜ್ಞಾನ ನೀತಿ 2024 - 2029, ಈ ವಲಯಕ್ಕೆ ಭಾರಿ ಉತ್ತೇಜನ ನೀಡಿದೆ. ಈ ಮೂಲಕ ತ್ವರಿತ ಬೆಳವಣಿಗೆಗೆ ವೇದಿಕೆಯನ್ನು ಸಿದ್ಧಪಡಿಸಿದೆ.
ಮುಂಬರುವ ಮೆಡ್ಟೆಕ್ ಮತ್ತು ಹೆಲ್ತ್ಟೆಕ್ ಸೆಂಟರ್ ಆಫ್ ಎಕ್ಸಲೆನ್ಸ್ ಉದ್ಯಮಿಗಳು, ಸಣ್ಣ ಉತ್ಪಾದಕರನ್ನು ಬೆಂಬಲಿಸುವಲ್ಲಿ ಮತ್ತು ವೈದ್ಯಕೀಯ ಮತ್ತು ಕೈಗಾರಿಕಾ ಎಲೆಕ್ಟ್ರಾನಿಕ್ಸ್ನಲ್ಲಿ ನಾವೀನ್ಯತೆ ತರುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ.
ಉದ್ಯಮ ಪಾಲುದಾರರು ಮತ್ತು ಪ್ರತಿನಿಧಿಗಳು ಬಯೋಟೆಕ್ ಕೌಶಲ್ಯ ಅಭಿವೃದ್ಧಿಯಲ್ಲಿ ಸಕ್ರಿಯವಾಗಿ ಸಹಕರಿಸಲು, ಇನ್ಕ್ಯುಬೇಟರ್ಗಳನ್ನು ನಿರ್ಮಿಸಲು ಮತ್ತು ಇಕೋ ಸಿಸ್ಟಂ ಅನ್ನು ಬಲಪಡಿಸಲು ಸಂಶೋಧನೆ ಹಾಗೂ ಅಭಿವೃದ್ಧಿಯಲ್ಲಿ ಹೂಡಿಕೆ ಮಾಡಲು ಮತ್ತು KWIN ನಗರದ ದೃಷ್ಟಿಕೋನವನ್ನು ವಾಸ್ತವಕ್ಕೆ ತರಲು ನಮಗೆ ಸೂಕ್ತ ಸನ್ನಿವೇಶ ಸೃಷ್ಟಿಸುವಂತೆ ಚರ್ಚೆ ವೇಳೆ ನಾನು ಸಲಹೆ ನೀಡಿದೆ.
ಬೆಂಗಳೂರು ಬಯೋಟೆಕ್ನಲ್ಲಿ ಮುಂಚೂಣಿಯಲ್ಲಿದ್ದು, ವಿಶ್ವ ದರ್ಜೆಯ ಇನ್ನೋವೇಷನ್ ಹಬ್ಅನ್ನು ಸೃಷ್ಟಿಸುವ ಕರ್ನಾಟಕದ ಬದ್ಧತೆಯೊಂದಿಗೆ, KWIN ಸಿಟಿಯು ನೈಜ ಜಾಗತಿಕ ಮಾದರಿಯಾಗುವ ಸಾಮರ್ಥ್ಯವನ್ನು ಹೊಂದಿದೆ.
👍
🙏
❤️
12