ಕಂಪದಕೋಡಿ ವೆದರ್ ರಿಪೋರ್ಟ್ - (ಕರ್ನಾಟಕ ರಾಜ್ಯದ ಹವಾಮಾನ ವರದಿ)
February 3, 2025 at 02:50 PM
3-2-2025 ರ ಹವಾಮಾನ ಮುನ್ಸೂಚನೆ ಕರಾವಳಿ ಜಿಲ್ಲೆಗಳಲ್ಲಿ ಕಳೆದ 2 ದಿನಗಳಲ್ಲಿ ಚಳಿ ಕಡಿಮೆ ಆಗಿ ಸೆಖೆ ಅಧಿಕವಾಗಿತ್ತು... ಮುಂಜಾನೆ ಮೋಡ ಮತ್ತು ಮಂಜು ಕವಿದ ವಾತಾವರಣ ಇತ್ತು. ಮುಂದಿನ 3-4 ದಿನ ಇದೇ ವಾತಾವರಣ ಮುಂದುವರಿಯಲಿದೆ... ಹಗಲಿನ ಉಷ್ಣಾಂಶ ಏರಿಕೆಯಾಗಲು ಪ್ರಾರಂಭವಾಗಿದ್ದರೂ ಸದ್ಯ ಮಳೆ ಮುನ್ಸೂಚನೆ ಇಲ್ಲ. ಮಲೆನಾಡು ಒಳನಾಡು ಜಿಲ್ಲೆಗಳಲ್ಲಿಯೂ ಚಳಿ ಕಡಿಮೆ ಆಗುತ್ತಿದೆ. ಫೆಬ್ರವರಿ ಮೊದಲ ಎರಡು ವಾರ ಒಣಹವೆ ಮುಂದುವರಿಯಲಿದೆ. ಮಳೆ ಮುನ್ಸೂಚನೆ ಇಲ್ಲ. ಬಂಗಾಳ ಕೊಲ್ಲಿಯಲ್ಲಿ ನವೆಂಬರ್ ತಿಂಗಳಿಂದ ಬೀಸುತ್ತಿದ್ದ ಏರ್ ಸರ್ಕ್ಯುಲೇಷನ್ ಗಳು ಕಡಿಮೆ ಆಗಿದ್ದು ತಮಿಳುನಾಡಿನಲ್ಲಿಯೂ ಮಳೆ ಕಡಿಮೆ ಆಗಲಿದೆ. ಬೇಸಿಗೆ ಆರಂಭಗೊಳ್ಳುತ್ತಿದೆ.
👍 🙏 ❤️ 🤔 32

Comments