ಕಂಪದಕೋಡಿ ವೆದರ್ ರಿಪೋರ್ಟ್ - (ಕರ್ನಾಟಕ ರಾಜ್ಯದ ಹವಾಮಾನ ವರದಿ)
February 12, 2025 at 10:13 AM
12-2-2025 ರ ಹವಾಮಾನ ಮುನ್ಸೂಚನೆ
ರಾಜ್ಯಾದ್ಯoತ ಕಳೆದ ಒಂದು ವಾರದಲ್ಲಿ ಹಗಲು ಮೋಡರಹಿತ ಬಿಸಿಲು ಮತ್ತು ರಾತ್ರಿ ಚಳಿಯ ವಾತಾವರಣ ಇತ್ತು..
ಕರಾವಳಿ ಜಿಲ್ಲೆಗಳಲ್ಲಿ ಇವತ್ತು ದಟ್ಟವಾಗಿ ಮಂಜು ಕವಿದ ವಾತಾವರಣ ಇತ್ತು. ಹಗಲಿನ ಉಷ್ಣಾಂಶ ಏರಿಕೆಯಾಗಲು ಆರಂಭವಾಗಿದೆ. ಮುಂದಿನ ಒಂದೆರಡುದಿನದಲ್ಲಿ ಚಳಿ ಸ್ವಲ್ಪ ಕಡಿಮೆ ಆಗಲಿದ್ದು ಕನಿಷ್ಠ ಉಷ್ಣಾಂಶ 2-3 ಡಿಗ್ರಿ ಏರಿಕೆ ಆಗಬಹುದು.
ಮಲೆನಾಡು ಒಳನಾಡು ಜಿಲ್ಲೆಗಳಲ್ಲಿಯೂ ಚಳಿ ಕಡಿಮೆ ಆಗಿ ಬೇಸಿಗೆಯ ಬಿಸಿಲು ಆರಂಭವಾಗಲಿದೆ. ಸದ್ಯಕ್ಕೆ ರಾಜ್ಯಾದ್ಯoತ ಒಣಹವೆ ಮುಂದುವರಿಯಲಿದೆ. ಮಳೆ ಮುನ್ಸೂಚನೆ ಇಲ್ಲ.
👍
🙏
32