𝗦𝗮𝗻𝗮𝘁𝗮𝗻𝗮 Hindu 𝗗𝗛𝗔𝗥𝗠𝗔 ಸನಾತನ ಹಿಂದೂ 🙏
February 13, 2025 at 01:57 PM
ಭರತ ಚಕ್ರವರ್ತಿ ನಾಡು ಭಾರತ
ವಿವಿಶ್ವಾಮಿತ್ರನ ತಪಸ್ಸು ಮಿತಿ ಮೀರಿತು. ಯಾರಾದರೂ ನಮಗಿಂತ ಮೇಲೆ ಹೋಗುವವರನ್ನು ದೇವತೆಗಳು ಸಹಿಸುವುದಿಲ್ಲ. ಅದಕ್ಕಾಗಿ ವಿಶ್ವಾಮಿತ್ರನ ತಪಸ್ಸನ್ನು ಭಂಗ ಮಾಡಲು ಮೇನಕೆ ದೇವಲೋಕದ ಅಪ್ಸರೆಯನ್ನು ಕಳಿಸಿದರು. ಆಕೆಯ ಹಾವಭಾವಕ್ಕೆ ವಿಶ್ವಾಮಿತ್ರನ ತಪಸ್ಸು ಭಂಗವಾಯಿತು. ಇಬ್ಬರೂ ಲಗ್ನವಾದರು. ಸಂಸಾರದಿಂದ ಆದ ಪ್ರಯೋಜನ ಒಂದು ಹೆಣ್ಣು ಮಗು. ಕೂಡಲೇ ಮೇನಕೆ ಆ ಮಗುವನ್ನು ವಿಶ್ವಾಮಿತ್ರನಿಗೆ ಕೊಟ್ಟು ದೇವಲೋಕಕ್ಕೆ ಹೋದಳು. ಆ ಮಗುವನ್ನು ಎಲೆಯ ಮೇಲೆ ಮಲಗಿಸಿ ವಿಶ್ವಾಮಿತ್ರನೂ ಬೇರೆ ಕಡೆ ತಪಸ್ಸಿಗೆ ಹೋದನು. ಆ ಮಗು ಮತ್ತೊಬ್ಬ ಋಷಿಯ ಕೈಗೆ ಸಿಕ್ಕಿತು. ಅವರೇ ಕಣ್ವ ಋಷಿ. ಆ ಕಣ್ವ ಋಷಿಯೇ ಮಗುವನ್ನು ಸಾಕಿದರು. ದೊಡ್ಡವಳಾಗಿ ವಯಸ್ಸಿಗೆ ಬಂದಳು. ಒಂದು ಸಾರಿ ಆ ದೇಶದ ರಾಜ ದುಷ್ಯಂತ ಮಹಾರಾಜ ಆ ತಪೋವನಕ್ಕೆ ಬಂದ. ಈ ಶಕುಂತಲೆಯನ್ನು ನೋಡಿ ಮೋಹಿಸಿ ಗಂಧರ್ವ ವಿವಾಹವಾದ. ಅವಳಿಗೆ ಗುರುತಿಗಾಗಿ ಮುದ್ರೆ ಉಂಗುರ ಕೊಟ್ಟು. ತನ್ನ ರಾಜ್ಯಕ್ಕೆ ಹೋದ.
ಶಕುಂತಲೆ ಗರ್ಭಿಣಿ ಆಗಿದ್ದಾಳೆ. ಕಣ್ವ ಋಷಿ ಗರ್ಭಿಣಿಯಾದ ಶಕುಂತಲೆಯನ್ನು ಅವಳ ಪತಿಯ ಗೃಹಕ್ಕೆ ಕಳಿಸಬೇಕು. ಶಕುಂತಲೆ ಸದಾ ತನ್ನ ರಾಜ ದುಷ್ಯಂತ ಕರೆ ಕಳುಹಿಸುತ್ತಾನೆಂದು ಕಾಯುತ್ತಿದ್ದಳು. ಒಂದು ಸಾರಿ ದೂರ್ವಾಸ ಮುನಿ ಬಂದು ಆಶ್ರಮದಲ್ಲಿ ನಿಂತಿದ್ದಾರೆ. ಇವಳಿಗೆ ದುಷ್ಯಂತನ ಚಿಂತೆಯೇ ಆಗಿದೆ. ಆಗ ದೂರ್ವಾಸರು ‘ನೀನು ಯಾರನ್ನು ಚಿಂತಿಸುತ್ತಿರುವೆಯೋ ಅವರು ನಿನ್ನನ್ನು ಮರೆಯಲಿ’ ಎಂದು ಶಾಪ ಕೊಡುತ್ತಾರೆ. ಆಗ ಶಕುಂತಲೆಯ ಸ್ನೇಹಿತರು ಅವಳ ವೃತ್ತಾಂತವನ್ನೆಲ್ಲಾ ದುರ್ವಾಸಮುನಿಗೆ ಹೇಳಿ ಶಾಪವಿಮೋಚನೆಗೆ ದಾರಿ ಕೇಳಿದಾಗ, ಯಾವುದಾದರೂ ಗುರುತಿನ ವಸ್ತುವನ್ನು ತೋರಿಸಿದರೆ ನೆನಪು ಬರುವುದು ಎಂದರು. ಕಣ್ವ ಋಷಿಗಳು ಶಕುಂತಲೆಯನ್ನು ದುಶ್ಯಂತನ ಹತ್ತಿರ ಬಿಡುವುದಕ್ಕೆ ತಮ್ಮ ಶಿಷ್ಯಂದಿರನ್ನು ಕಳುಹಿಸಿಕೊಟ್ಟು ದಾರಿಯಲ್ಲಿ ನದಿಯನ್ನು ದೋಣಿಯಲ್ಲಿ ದಾಟುತ್ತಿರುವಾಗ ಶಕುಂತಲೆಯ ಕೈಯಲ್ಲಿದ್ದ ಉಂಗುರ ಅಕಸ್ಮಾತ್ತಾಗಿ ನೀರಿನಲ್ಲಿ ಬಿತ್ತು. ಅದನ್ನು ಒಂದು ಮೀನು ಅದನ್ನು ನುಂಗಿತು. ದುಶ್ಯಂತನ ಅರಮನೆಗೆ ಹೋದಾಗ ಋಷಿಯ ಶಾಪದಿಂದಾಗಿ ಶಕುಂತಲೆಯನ್ನು ಪತ್ನಿಯನ್ನಾಗಿ ಸ್ವೀಕರಿಸಲು ನಿರಾಕರಿಸಿದಾಗ, ಅವಳು ತನ್ನ ಅಮ್ಮನನ್ನು ನೆನೆಯಿಸಿ, ಅವಳ ಜೊತೆಗೆ ಹೋದಳು. ಸ್ವಲ್ಪ ದಿನ ತರುವಾಯ ಒಬ್ಬ ಬೆಸ್ತ ರಾಜ ಉಂಗುರವನ್ನು ತಂದುಕೊಟ್ಟಾಗ ದುಶ್ಯಂತನಿಗೆ ಹಳೆಯದೆಲ್ಲಾ ನೆನಪು ಬಂದು ಗೋಳಾಡಿದ.
ಹೀಗೆ ಒಂದು ಸಾರಿ ಬೇಟೆಗೆಂದು ಕಾಡಿಗೆ ಹೋದಾಗ ದುಷ್ಯಂತನು ವಿಶ್ರಾಂತಿಗಾಗಿ ಕುಳಿತಿರುತ್ತಾರೆ. ಆಗ ಅಲ್ಲಿಗೆ ಒಬ್ಬ ಸ್ಫುರದ್ರೂಪಿ ಹುಡುಗ ಬಂದು ಸಿಂಹದ ಜೊತೆಯಲ್ಲಿ ಆಟ ಆಡುತ್ತಿರುತ್ತಾನೆ. ಆಟವನ್ನು ದುಷ್ಯಂತ ನೋಡುತ್ತಾನೆ. ಆ ಮಗುವಿನ ಮೇಲೆ ಬಹಳ ಪ್ರೇಮ ಬರುತ್ತದೆ.
ಸನಾತನ ಹಿಂದೂ ಧರ್ಮ
https://whatsapp.com/channel/0029Va9eH0M3bbUz1vZGVU0V
ಆಟ ಆಡುವಾಗ ಆ ಮಗುವಿನ ಕೊರಳಲ್ಲಿರುವ ತಾಯತ ಅಕಸ್ಮಾತ್ ಕೆಳಗೆ ಬಿದ್ದಿತು. ತಕ್ಷಣ ದುಷ್ಯಂತ ಅದನ್ನು ಕಟ್ಟುತ್ತಾನೆ. ತಂದೆ ಅಲ್ಲದೆ ಯಾರೂ ಆ ತಾಯತ ಕಟ್ಟುವಂತಿಲ್ಲ. ಆ ತಾಯತ ಹಾವಾಗಿ ಕಡಿಯುತ್ತದೆ. ಕೂಡಲೇ ಶಕುಂತಲೆ ಒಳಗಿನಿಂದ ಬರುತ್ತಾಳೆ. ಆಗ ಶಕುಂತಲೆ ಆಶ್ಚರ್ಯಪಟ್ಟು ನೋಡುತ್ತಾಳೆ. ದುಷ್ಯಂತನನ್ನು ಶಕುಂತಲೆ ನೋಡುತ್ತಾಳೆ. ಶಕುಂತಲೆಯನ್ನು ದುಷ್ಯಂತ ನೋಡುತ್ತಾನೆ. ಆಗ ಆ ಮಗುವೇ ತನ್ನ ಮಗ ಭರತ ಎಂದು ತಿಳಿದು ದುಷ್ಯಂತ ಕರೆದುಕೊಂಡು ಹೋಗುತ್ತಾನೆ. ಆ ಭರತನು ಆಳಿದ ನಾಡೇ ಭಾರತ ಎಂದು. ಈ ನಾಡಿಗೆ ಭಾರತ ಎಂಬ ಹೆಸರು ಬಂದದ್ದು ಹೀಗೆ. ಇದನ್ನು ಕವಿರತ್ನ ಕಾಳಿದಾಸ ತನ್ನ ಸುಂದರವಾದ ಅಭಿಜ್ಞಾನ ಶಾಕುಂತಲೆ ಎಂಬ ಕಾವ್ಯದಲ್ಲಿ ರಸವತ್ತಾಗಿ ವರ್ಣಿಸಿದ್ದಾನೆ.
🙏
💐
4