𝗦𝗮𝗻𝗮𝘁𝗮𝗻𝗮 Hindu 𝗗𝗛𝗔𝗥𝗠𝗔 ಸನಾತನ ಹಿಂದೂ 🙏
February 15, 2025 at 01:04 AM
*|| ಶ್ರೀರಾಮ ಸಮರ್ಥ ||* *💐 ಸಮರ್ಥ ಸದ್ಗುರು ಶ್ರೀ ಬ್ರಹ್ಮ ಚೈತನ್ಯ ಮಹಾರಾಜರ ನಿತ್ಯ ಪ್ರವಚನ 💐* *📿 ೧೫ ಫೆಬ್ರುವರಿ 📿* *🚩ಎಲ್ಲಿ ನಾಮವೋ , ಅಲ್ಲಿ ನಾನು ಇದ್ದೇ ಇರುತ್ತೇನೆ🚩* *ನನ್ನನ್ನು ನಾಮದಲ್ಲಿ ನೋಡಿರಿ ಅನ್ನುವದರ ಅರ್ಥವೇನೆಂದರೆ ನಾನು ದೇಹದಲ್ಲಿರದೇ ನಾಮದಲ್ಲಿಯೇ ಇರುತ್ತೇನೆ . ಮನುಷ್ಯನು ಸಾಮಾನ್ಯವಾಗಿ ಅವನ ಮನಸ್ಸು ಎಲ್ಲಿ ಇರುತ್ತದೆಯೋ ಅಲ್ಲಿಯೇ ಇರುತ್ತಾನೆ ಎಂದು ತಿಳಿಯಬೇಕು . ಉದಾಹರಣೆಗೆ ನೀವು ಯಾತ್ರೆಗೆ ಹೋದಾಗ ನಿಮ್ಮ ಮನಸ್ಸು ಮನೆಯನ್ನು ಕುರಿತು ಚಿಂತೆ ಮಾಡುತ್ತಿದ್ದರೆ , ದೇಹದಿಂದ ಕ್ಷೇತ್ರದಲ್ಲಿದ್ದರೂ ವಾಸ್ತವಿಕವಾಗಿ ನೀವು ಮನೆಯಲ್ಲಿದ್ದಂತೆ . ಇದರಂತೆ ಯಾರಾದರೂ ನಿಮ್ಮನ್ನು ನೀವು ವಿಶೇಷವಾಗಿ ಎಲ್ಲಿ ಇರುತ್ತೀರಿ ? ಎಂದು ಕೇಳಿದರೆ ,"ನಾವು ವಿಷಯದಲ್ಲಿರುತ್ತೇವೆ" ಎಂದು ಉತ್ತರ ಕೊಡಬೇಕಾಗುತ್ತದೆ . ಯಾರಿಗೆ ಏನು ಸೇರುತ್ತದೆಯೋ ಅವರು ಅದರಲ್ಲಿಯೆ ಇರುತ್ತಾರೆ ಎಂಬುದೇ ನಿಜವಲ್ಲವೆ ? ಅಂದಮೇಲೆ “ನಿಮ್ಮ ಗುರುಗಳು ಎಲ್ಲಿ ಇರುತ್ತಾರೆ ?” ಎಂದು ನಿಮ್ಮನ್ನು ಯಾರಾದರೂ ಕೇಳಿದರೆ ಅವರು ನಾಮದಲ್ಲಿರುತ್ತಾರೆ, ಎಂದು ಹೇಳುವಿರಲ್ಲವೆ ? ಅಂದಮೇಲೆ ಎಲ್ಲಿ ನಾಮ ನಡೆದಿರುತ್ತದೆಯೋ ಅಲ್ಲಿ ನಾನು ಇದ್ದೇ ಇರುತ್ತೇನೆ . ಯಾರು ನಾಮಸ್ಮರಣೆ ಮಾಡುತ್ತಾರೋ ಅವರ ಹಿಂದೆ ಮುಂದೆ ನಾನು ನಿಂತೇ ಇರುತ್ತೇನೆ . ಶಾಸ್ತ್ರಿಗಳು , ಪಂಡಿತರು ಅನ್ನುವದೇನೆಂದರೆ, "ನಮಗಾಗಿ ಜ್ಞಾನಮಾರ್ಗವಿರುತ್ತದೆ" ಆದರೆ ಅದು ಅತ್ಯಂತ ಕಠಿಣವಿರುತ್ತದೆ ಎಂಬುದು ಅವರ ಗಮನಕ್ಕೆ ಬರುವದಿಲ್ಲ . ಅದರಲ್ಲಿ ಅಭಿಮಾನ ನಷ್ಟವಾಗುವ ಬದಲು ಬೆಳೆಯುವ ಸಂಭವವೇ ಹೆಚ್ಚಿಗೆ ಇರುತ್ತದೆ .* *"ಬ್ರಹ್ಮ ಸತ್ಯಂ,ಜಗನ್ಮಿಥ್ಯ" ಎಂಬ ತತ್ವವು ಅವರ ಬುದ್ದಿಗೆ ಖಚಿತವೆನಿಸುತ್ತದೆ . ಆದರೆ ಅವರ ಅನುಭವಕ್ಕೆ ಮಾತ್ರ ಬರುವದಿಲ್ಲ . ಅವರು ಜಗತ್ತನ್ನು ಮಿಥ್ಯಾ ಅನ್ನುತ್ತಾರೆ , ಆದರೆ ತಮ್ಮ ದೇಹವನ್ನು ಮಾತ್ರ ಸತ್ಯವೆಂದು ತಿಳಿಯುತ್ತಾರೆ . ಕೇವಲ ವಿಚಾರದಿಂದ ದೇಹದ ಮಿಥ್ಯತ್ವವು ಅನುಭವಕ್ಕೆ ಬರುವದು ಬಹಳ ಕಠಿಣವಿರುತ್ತದೆ . ಕರ್ಮಮಾರ್ಗದ ಜನರು ಅನ್ನುವದೇನಂದರೆ ನಾವು ನಮ್ಮ ಕರ್ಮಮಾರ್ಗದಿಂದಲೇ ಹೋಗುತ್ತೇವೆ . ನಮ್ಮದು ನಾಮದ ಮೇಲೆ ವಿಶ್ವಾಸವಿಲ್ಲ . ನಾವು ವೇದಗಳು ಹಾಕಿಕೊಟ್ಟ , ಬಂಧನ ಹಾಗೂ ನಿಯಮಗಳನ್ನು ಪಾಲಿಸತಕ್ಕವರು "ಈ ರೀತಿ ಅನ್ನುವ ಅವರು ಬಂಧನ ಹಾಗೂ ನಿಯಮಗಳನ್ನು ಎಷ್ಟರಮಟ್ಟಿಗೆ ಪಾಲಿಸುತ್ತಾರೆ ಎಂದರೆ , ಆ ಬಂಧನಗಳನ್ನೇ ಸರ್ವಸ್ವ ಎಂದು ತಿಳಿಯುತ್ತಾರೆ . ಈಶ್ವರಪ್ರಾಪ್ತಿಯು ನಮ್ಮ ಸಾಧ್ಯವಾಗಿದ್ದು , ಬಂಧನ ಹಾಗೂ ನಿಯಮಗಳು ಅದಕ್ಕೆ ಸಾಧನವಾಗಿರುತ್ತವೆ ಎಂಬುದು ಅವರ ಗಮನದಲ್ಲಿ ಬರುವದೇ ಇಲ್ಲ . ಸಾಧ್ಯವನ್ನು ಸಾಧಿಸುವದಕ್ಕಾಗಿಯೆ ಬಂಧನಗಳನ್ನು ಪಾಲಿಸಬೇಕು . ಹೂವಿನ ತೋಟವನ್ನು ಸಂರಕ್ಷಣೆ ಮಾಡುವದಕ್ಕಾಗಿ ಅದಕ್ಕೆ ಬೇಲಿಯನ್ನು ಹಾಕುವ ಅವಶ್ಯಕತೆ ಇರುತ್ತದೆ . ಆದರೆ ಈ ಜನರು ಬೇಲಿಯನ್ನೇ ಸರ್ವಸ್ವ ಎಂದು ತಿಳಿಯುತ್ತಾರೆ . ಅದನ್ನೇ ನೀರು , ಗೊಬ್ಬರ ಹಾಕಿ ಬೆಳೆಸುತ್ತಾರೆ . ಒಳಗಿನ ತೋಟದ ಕಡೆಗೆ ಗಮನವನ್ನೇ ಕೊಡುವದಿಲ್ಲ . “ವೈದಿಕಕರ್ಮದಿಂದ* *ಚಿತ್ತಶುದ್ದಿಯಾಗುತ್ತದೆ" ಎಂಬುದನ್ನು ನಾನು ಒಪ್ಪುತ್ತೇನೆ . ಆದರೆ ಯಾವ ಭಗವತ್ಪ್ರಾಪ್ತಿಗಾಗಿ ಚಿತ್ತ ಶುದ್ಧಿಯಾಗಬೇಕೂ ಆ ಭಗವಂತನ ಅಧಿಷ್ಠಾನವು ಆ ವೈದಿಕಕರ್ಮಗಳಲ್ಲಿ ಇಲ್ಲದಿದ್ದರೆ ಕರ್ಮಮಾರ್ಗಗಳ ಪರ್ಯವಸಾನವು ಕರ್ಮಠ ತನದಲ್ಲಿ ಆಗುತ್ತದೆ . ಅವರು ನಾಮದ ಮೇಲೆ ವಿಶ್ವಾಸವಿಲ್ಲವೆಂದು ಅನ್ನುತ್ತಾರೆ . ಆದರೆ ಸಂಧ್ಯಾವಂದನೆಯಲ್ಲಿ ಅಥವಾ ಯಾವುದೇ ವೈದಿಕಕರ್ಮದ ಪ್ರಾರಂಭದಲ್ಲಿ ಕೇಶವಾಯ ನಮಃ ' ಎಂದು ಅನ್ನುತ್ತಾರೆ . ಅದು ನಾಮವಲ್ಲವೆ ? ವೇದವೆಂದರೆ ಭಗವಂತನ ಸ್ತುತಿ . ಅದನ್ನು ಮಾಡುತ್ತಿರುವಾಗ ನಮ್ಮ ಲಕ್ಷ್ಯವು ಶಬ್ದದ ಕಡಗೆ ಇರಬಾರದು . ಅದರ ಅರ್ಥದ ಕಡಗೆ ಇರಬೇಕು . ಅರ್ಥ ತಿಳಿಯದಿದ್ದರೆ ಭಗವಂತನ ಕಡೆಗೆ ಇರಬೇಕು .* ಸನಾತನ ಹಿಂದೂ ಧರ್ಮ https://whatsapp.com/channel/0029Va9eH0M3bbUz1vZGVU0V *🌹ಇಂದಿನ ಮುಖ್ಯ ವಿಚಾರ🌹* *🌺 ರಾಮನಾಮವು ಓಂಕಾರ ಸ್ವರೂಪ ಇರುತ್ತದೆ , ಅದು ಎಲ್ಲ ಕರ್ಮಗಳ ಹಾಗೂ ಸಾಧನೆಗಳ ಪ್ರಾಣವಾಗಿರುತ್ತದೆ .🌺* *ಜೈ ಜೈ ರಘುವೀರ ಸಮರ್ಥ*
🙏 3

Comments