Chief Minister Of Karnataka

Chief Minister Of Karnataka

412.6K subscribers

Verified Channel
Chief Minister Of Karnataka
Chief Minister Of Karnataka
February 26, 2025 at 10:43 AM
ಶಕ್ತಿ ಯೋಜನೆಯಡಿ ನಾಡಿನ ಹೆಣ್ಣುಮಕ್ಕಳು ಸಾರಿಗೆ ಬಸ್‌ಗಳಲ್ಲಿ 400 ಕೋಟಿ ಬಾರಿ ಉಚಿತ ಪ್ರಯಾಣ ಬೆಳೆಸಿದ್ದಾರೆ. ಶಿಕ್ಷಣ, ಉದ್ಯೋಗ ಮುಂತಾದ ಉದ್ದೇಶಗಳಿಗಾಗಿ ನಿತ್ಯ ಪ್ರಯಾಣ ಬೆಳೆಸುವ ಹೆಣ್ಣುಮಕ್ಕಳಿಗೆ ಈ ಯೋಜನೆ ವರದಾನವಾಗಿದೆ. ಯೋಜನೆ ಜಾರಿಯಾದ ನಂತರದ ಅವಧಿಯಲ್ಲಿ ಉಜ್ವಲ ಭವಿಷ್ಯದ ಕನಸು ಕಟ್ಟಿಕೊಂಡು ಶಾಲಾ ಕಾಲೇಜಿಗೆ ಹೋಗುವ ಹೆಣ್ಣುಮಕ್ಕಳು, ಕುಟುಂಬ ನಿರ್ವಹಣೆಗಾಗಿ ದುಡಿಮೆಗೆ ತೆರಳುವ ಮಹಿಳೆಯರು, ತನ್ನ ಮತ್ತು ತನ್ನವರ ವೈದ್ಯಕೀಯ ಚಿಕಿತ್ಸೆಯ ಉದ್ದೇಶಕ್ಕಾಗಿ ದೂರದ ಊರಿಗೆ ಪ್ರಯಾಣ ಬೆಳೆಸುವ ತಾಯಂದಿರ ಮುಖದಲ್ಲಿ ಮಂದಹಾಸ ಕಂಡಿದ್ದೇನೆ. ಯೋಜನೆಯೊಂದು ನಮ್ಮ ನಿರೀಕ್ಷೆಗೂ ಮೀರಿ ಅರ್ಹರನ್ನು ತಲುಪಿದಾಗ ಮೂಡುವ ಸಾರ್ಥಕ್ಯದ ಭಾವ ಈಗ ನನ್ನದಾಗಿದೆ. - ಮುಖ್ಯಮಂತ್ರಿ ಸಿದ್ದರಾಮಯ್ಯ #shakti I #shaktischeme I #ಶಕ್ತಿಸಂಚಾರ I #ಶಕ್ತಿ
Image from Chief Minister Of Karnataka: ಶಕ್ತಿ ಯೋಜನೆಯಡಿ ನಾಡಿನ ಹೆಣ್ಣುಮಕ್ಕಳು ಸಾರಿಗೆ ಬಸ್‌ಗಳಲ್ಲಿ 400 ಕೋಟಿ ಬಾರಿ ಉಚಿತ...
❤️ 👍 🙏 😂 😢 😮 60

Comments