Ayushya Mandalam
Ayushya Mandalam
February 19, 2025 at 10:32 AM
ಸುಮಾರು ದಿನಗಳ ಹಿಂದೆ (2 ತಿಂಗಳ) ನಮ್ಮ ಒಬ್ಬ ಕೆರ್ವಶೇಯ ಮಹಿಳಾ ವೀಕ್ಷಕರು ರಸ್ತೆ ಅಪಘಾತದಲ್ಲಿ ಗಾಯಗೊಂಡಾಗ, ನನ್ನ ಕೋರಿಕೆ ಮೇರೆಗೆ ಸಾಕಷ್ಟು ಜನ 6 ಗಂಟೆಯಲ್ಲಿ 1.5 ಲಕ್ಷ ಹಣ ಸಂದಾಯ ಮಾಡಿರುತ್ತಿರ, ಆದರೆ ಅದೃಷ್ಟ ಕೈ ಕೊಟ್ಟ ಕಾರಣ ನಾವು ಅವರನ್ನು ಬದುಕಿಸಿಕೊಳ್ಳಲು ಅಗಲಿಲ್ಲ... ನನಗೆ ವೈಯಕ್ತಿಕವಾಗಿ ಬೇಜಾರ ಆದ ಕಾರಣ ನಿಮ್ಮಲ್ಲಿ ಮಾಹಿತಿ ಹಂಚಿಕೊಳ್ಳಲು ಆಗಿರಲಿಲ್ಲ, ಹಾಗಾಗಿ ನನ್ನಲ್ಲಿ ಸರಿಸುಮಾರು 75 ಸಾವಿರ ಹಣ ಹಾಗೆ ಇದೆ, ಮೊನ್ನೆ ಒಬ್ಬ ಹುಬ್ಬಳ್ಳಿಯ ಸನ್ಯಾಸಿಗೆ ಆರೋಗ್ಯದ ಸಮಸ್ಯೆಗೆ ಯಾರ ಹತ್ತಿರ ಹಣ ಕೇಳದ ಹಾಗೆ ಕೊರಗುತ್ತಿದ್ದರು, ಅದನ್ನು ಮನಗಂಡು ನೀವು ಕೊಟ್ಟ ಹಣವನ್ನು ಅವರ 1 ವರುಷದ ಸಂಪೂರ್ಣ ಆಹಾರದ ಹಾಗೂ ಆರೋಗ್ಯದ ಖರ್ಚು 50 ಸಾವಿರ ಕೊಟ್ಟಿದ್ದೇನೆ ಹಾಗೂ ಉಳಿದ ಹಣವನ್ನು 500 ಹಸುಗಳಿಗೆ ಕುತ್ತಿಗೆಯಲ್ಲಿ ಪಟ್ಟಿ (ರೇಡಿಯಂ ಬೆಲ್ಟ್) ಗಳನ್ನು ಕೊಳ್ಳಲು ಕೊಟ್ಟಿದ್ದೇನೆ.. ಮುಂದಿನ ದಿನಗಳಲ್ಲಿ ನಮ್ಮ ಕೆರ್ವಶೆಯ ಸುತ್ತಮುತ್ತಲಿನ ಹೊರಗಡೆ ಓಡಾಡುತ್ತಿರುವ ಹಸುಗಳಿಗೆ ಕಟ್ಟುವ ವಿಡಿಯೋ ಮಾಡಿ ಬಿಡುತ್ತೇನೆ ಕಾರಣ ಈ ಹಸುಗಳಿಂದ ರಸ್ತೆಯಲ್ಲಿ ಅಮಾಯಕ ಜನರು ಪ್ರಾಣ ಬಿಡುತ್ತಿದ್ದಾರೆ ... ( ಮೊನ್ನೆ ಪ್ರಾಣ ಬಿಟ್ಟ ಮಹಿಳೆಗೆ ಇದೆ ರೀತಿ ಹಸು ಬಂದ ಕಾರಣ ಅಪಘಾತ ಆಗಿತ್ತು) ಹಾಗಾಗಿ ಮುಂದಿನ 6 ತಿಂಗಳಲ್ಲಿ 5000 ಹಸು ಹಾಗೂ ನಾಯಿಗಳಿಗೆ ಬೆಲ್ಟ್ಗಾಳನ್ನು , ಪುಸ್ತಕದಲ್ಲಿ ಬಂದ ಲಾಭದ ಹಣದಲ್ಲಿ ಖರೀದಿ ಮಾಡಲಾಗುತ್ತದೆ... ಎಲ್ಲಾ ನೀವುಗಳು ಕೊಟ್ಟ ದೇಣಿಗೆಯ ಪ್ರತಿಫಲ...🙏 ದಯಾನಂದ✍️
Image from Ayushya Mandalam: ಸುಮಾರು ದಿನಗಳ ಹಿಂದೆ (2 ತಿಂಗಳ) ನಮ್ಮ ಒಬ್ಬ ಕೆರ್ವಶೇಯ ಮಹಿಳಾ ವೀಕ್ಷಕರು ರಸ್ತೆ ಅ...
🙏 ❤️ 👍 👌 👏 😂 😢 291

Comments