Priyank Kharge 🇮🇳
February 25, 2025 at 06:25 AM
ಕಲಬುರಗಿ ನಗರದ ಶ್ರೀ ಶರಣಬಸವೇಶ್ವರರ ಜಾತ್ರಾ ಮೈದಾನದಲ್ಲಿ ಕರ್ನಾಟಕ ರಾಜ್ಯ ಜೀವನೋಪಾಯ ಅಭಿಯಾನ, ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ಅಡಿಯಲ್ಲಿ, ಕಲಬುರಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಸಹಯೋಗದಲ್ಲಿ ಆಯೋಜಿಸಲಾದ 'ನಮ್ಮ ಸರಸ್' -2025 ಮೇಳ'ವನ್ನು ಉದ್ಘಾಟಿಸಲಾಯಿತು.
ರಾಜ್ಯ ಸರ್ಕಾರದ ಜನೋಪಯೋಗಿ ಯೋಜನೆಗಳ ಪ್ರಯೋಜನ ಪಡೆದ ಮಹಿಳಾ ಸ್ವಸಹಾಯ ಸಂಘಗಳು ಇಂದು ಸ್ಪರ್ಧಾತ್ಮಕ ಉದ್ಯಮ ಮಾರುಕಟ್ಟೆಯಲ್ಲಿ ಪೈಪೋಟಿ ನೀಡುವಂತೆ ಬೆಳೆಯುತ್ತಿರುವುದು ಹೆಮ್ಮೆಯ ಸಂಗತಿ. ಸರ್ಕಾರ ನೀಡುತ್ತಿರುವ ತರಬೇತಿ, ಕೌಶಲ್ಯ, ಮಾರುಕಟ್ಟೆ ಅವಕಾಶಗಳು ಮತ್ತು ಸಹಾಯ ಧನದಂತಹ ಪ್ರೋತ್ಸಾಹಗಳು ಉದ್ಯಮಶೀಲ ಮಹಿಳಾ ಗುಂಪುಗಳಿಗೆ ಬೆನ್ನೆಲುಬಾಗಿವೆ.
ಮಹಿಳಾ ಸ್ವಸಹಾಯ ಗುಂಪುಗಳು ಉತ್ಪಾದಿಸುವ ವಸ್ತುಗಳಿಗೆ ಉತ್ತಮ ಪ್ರಚಾರ ಹಾಗೂ ಮಾರುಕಟ್ಟೆ ಸೃಷ್ಟಿಸುವುದು ನಮ್ಮ ಉದ್ದೇಶವಾಗಿದೆ. ಇದರ ಭಾಗವಾಗಿ ಆಯೋಜಿಸಿರುವ ನಮ್ಮ ಸರಸ್ ಮೇಳವು ಪರಿಣಾಮಕಾರಿಯಾಗಿದೆ.

🙏
❤️
👍
8