Priyank Kharge 🇮🇳

17.6K subscribers

Verified Channel
Priyank Kharge 🇮🇳
February 25, 2025 at 08:03 AM
ಕರ್ನಾಟಕದ ಮಾಹಿತಿ ತಂತ್ರಜ್ಞಾನ ಇಲಾಖೆ ಆಯೋಜಿಸಿರುವ ಭಾರತದ ಪ್ರಧಾನ ಎವಿಜಿಸಿ-ಎಕ್ಸ್‌ಆರ್‌ (AVGC-XR) GAFX ಸಮ್ಮೇಳನವು (Animation, Visual Effects, Gaming, Comics, and Extended Reality- ಅನಿಮೇಶನ್, ದೃಶ್ಯಪರಿಣಾಮಗಳು, ಗೇಮಿಂಗ್, ಕಾಮಿಕ್ಸ್ ಮತ್ತು ವಿಸ್ತ್ರತ ನೈಜತೆ) 2025ರ ಫೆಬ್ರವರಿ 27ರಿಂದ ಮಾರ್ಚ್ 1ರವರೆಗೆ ಬೆಂಗಳೂರಿನ ಲಲಿತ್ ಅಶೋಕ ಹೋಟೆಲ್‌ನಲ್ಲಿ ನಡೆಯಲಿದ್ದು, ಈ ಕುರಿತು ಇಂದು ಪತ್ರಿಕಾಗೋಷ್ಠಿ ನಡೆಸಲಾಯಿತು. ನಾವೀನ್ಯತೆಯನ್ನು ಪೋಷಿಸುವಲ್ಲಿ, ಜ್ಞಾನದ ಹಂಚಿಕೆಯನ್ನು ಸಾಧ್ಯವಾಗಿಸುವಲ್ಲಿ ಮತ್ತು ಕಾರ್ಯತಂತ್ರದ ಸಹಯೋಗಗಳನ್ನು ಪ್ರೋತ್ಸಾಹಿಸುವತ್ತ ಗಮನಹರಿಸುವತ್ತ ಫೆಬ್ರವರಿ 27ರಿಂದ ಬೆಂಗಳೂರಿನಲ್ಲಿ ಮೂರು ದಿನಗಳ ಕಾಲ ನಡೆಯಲಿರುವ GAFX 2025 ಸಮ್ಮೇಳನ ಬೆಳಕು ಚೆಲ್ಲಲಿದೆ. ವಿಶ್ವದ ನಂ#1 ಎವಿಜಿಸಿ ಕೇಂದ್ರವಾಗಿ ಹಾಗೂ ಮಾಧ್ಯಮ ಮತ್ತು ಮನರಂಜನೆಯ ಕ್ಷೇತ್ರದಲ್ಲಿ ಭಾರತದ ಜಾಗತಿಕ ನಾಯಕತ್ವದ ಹಿಂದಿನ ಚಾಲಕಶಕ್ತಿಯಾಗಿ ಬೆಂಗಳೂರಿನ ಸ್ಥಾನವನ್ನು ಭದ್ರವಾಗಿಸುತ್ತ ಇದು ಮಹತ್ವದ ಹೆಜ್ಜೆಯಾಗಿದೆ. 20,000ಕ್ಕೂ ಹೆಚ್ಚು ಮಂದಿಯ ಇದರಲ್ಲಿ ಭಾಗವಹಿಸುವ ನಿರೀಕ್ಷೆಯಿದ್ದು, ಇದು ಹಿಂದಿನ ಸಮ್ಮೇಳನದ ಎರಡುಪಟ್ಟು ಅಧಿಕವಾಗಿದೆ. ಈ ವರ್ಷದ ಸಮ್ಮಿಟ್'ನಲ್ಲಿ ಎವಿಜಿಸಿ-ಎಕ್ಸ್‌ಆರ್‌ (AVGC-XR) ಇಕೋ ಸಿಸ್ಟಂನಲ್ಲಿನ ಸೃಷ್ಟಿಕರ್ತರು, ಸ್ಟುಡಿಯೋಗಳು ಮತ್ತು ಉತ್ಸಾಹಿಗಳು ಪಾಲ್ಗೊಳ್ಳಲಿದ್ದು, ಇದು ಅತ್ಯಂತ ಪ್ರಭಾವಶಾಲಿಯಾದ ಮೇಳವಾಗಲಿದೆ. "Future of Immersion: EXPERIENCE. EXPLORE. DISRUPT"- GAFX 2025ರ ವಸ್ತುವಾಗಿದ್ದು (ಥೀಮ್), ಕ್ರಿಯಾಶೀಲತೆ ಮತ್ತು ತಂತ್ರಜ್ಞಾನದ ಎಲ್ಲೆಗಳನ್ನು ವಿಸ್ತರಿಸುವಲ್ಲಿನ ಸಮ್ಮೇಳನದ ಬದ್ಧತೆಯನ್ನು ಎತ್ತಿಹಿಡಿಯುತ್ತದೆ. ಸಮ್ಮೇಳನದಲ್ಲಿ ಭಾಗವಹಿಸುವವರು ನೈಜಾವಧಿಯ ನಿರೂಪಣೆಯಲ್ಲಿನ ಪ್ರಗತಿಯಿಂದ ಭ್ರಾಮಕವಾದ ಹಾಗೂ ವೃದ್ಧಿಸಲಾದ ವಾಸ್ತವದ ಪರಿವರ್ತನೆಯ ಸಾಮರ್ಥ್ಯದವರೆಗೆ ಮಂತ್ರಮುಗ್ಧಗೊಳಿಸುವ ತಂತ್ರಜ್ಞಾನಗಳ ಶಕ್ತಿಯನ್ನು ಅನುಭವಿಸಲಿದ್ದಾರೆ. GAFX 2025 ಕಥಾನಿರೂಪಣೆ ಮತ್ತು ಪ್ರತಿಕ್ರಿಯಾತ್ಮಕ ಅನುಭವದ ಭವಿಷ್ಯದ ಅನ್ವೇಷಣೆಗೆ ವೇದಿಕೆಯಾಗಲಿದೆ.
Image from Priyank Kharge 🇮🇳: ಕರ್ನಾಟಕದ ಮಾಹಿತಿ ತಂತ್ರಜ್ಞಾನ ಇಲಾಖೆ ಆಯೋಜಿಸಿರುವ ಭಾರತದ ಪ್ರಧಾನ ಎವಿಜಿಸಿ-ಎಕ್ಸ್...
🙏 ❤️ 👍 12

Comments