ಕಂಪದಕೋಡಿ ವೆದರ್ ರಿಪೋರ್ಟ್ - (ಕರ್ನಾಟಕ ರಾಜ್ಯದ ಹವಾಮಾನ ವರದಿ)
February 20, 2025 at 05:50 AM
20-2-2025 ರ ಹವಾಮಾನ ಮುನ್ಸೂಚನೆ.
ರಾಜ್ಯದಲ್ಲಿ ಚಳಿ ಕಡಿಮೆ ಆಗಿ ಸೆಕೆ - ಮೋಡದ ವಾತಾವರಣ ಆರಂಭವಾಗಿದೆ.
ಕರಾವಳಿ ಜಿಲ್ಲೆಗಳಲ್ಲಿ ಇವತ್ತು ಬೆಳಿಗ್ಗೆ ಮಂಜು ಮತ್ತು ಮೋಡ ಕವಿದಿದ್ದು ಸಂಜೆಯ ನಂತರ ಮೋಡದ ವಾತಾವರಣ ಮುಂದುವರಿಯಲಿದೆ. ಇವತ್ತು ಸುಳ್ಯ ಬೆಳ್ತಂಗಡಿ ಕಾರ್ಕಳ ತಾ. ಗಳ ಅಲ್ಲಲ್ಲಿ ಸಣ್ಣ ಪ್ರಮಾಣದಲ್ಲಿ ತುಂತುರು ಮಳೆ ಬರುವ ಸಾಧ್ಯತೆ ಇದೆ. 24 ತನಕ ಮೋಡ - ಬಿಸಿಲು ಮುಂದುವರಿಯಲಿದ್ದು ಪ್ರತಿದಿನ ಅಲ್ಲಲ್ಲಿ ತುಂತುರು ಮಳೆಯಾಗುವ ಸಾಧ್ಯತೆ ಇದೆ. ಆದರೇ ದೊಡ್ಡ ಪ್ರಮಾಣದಲ್ಲಿ ಮಳೆಯಾಗುವ ಮುನ್ಸೂಚನೆ ಇಲ್ಲ.
ಕೊಡಗು ಹಾಸನ ಚಿಕ್ಕಮಗಳೂರು ಶಿವಮೊಗ್ಗ ಜಿಲ್ಲೆಗಳಲ್ಲಿಯೂ ಸಂಜೆಯ ನಂತರ ಮೋಡ ಬರಬಹುದು. ಕೊಡಗು ಚಿಕ್ಕಮಗಳೂರು ಜಿಲ್ಲೆಗಳ ಕರಾವಳಿಗೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಕೆಲವೆಡೆ ಸಂಜೆ ತುಂತುರು ಮಳೆಯಾಗುವ ಸಾಧ್ಯತೆ ಇದೆ. ಫೆಬ್ರವರಿ 22-23 ಮಲೆನಾಡಿನ ಅಲ್ಲಲ್ಲಿ ಸಣ್ಣ ಮಳೆಯಾಗುವ ಮುನ್ಸೂಚನೆ ಇದೆ.
ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿಯೂ ಇವತ್ತು ಸಂಜೆಯ ನಂತರ ಭಾಗಷಃ ಮೋಡ ಬರುವ ಸಾಧ್ಯತೆ ಇದೆ. ಮೋಡ ಬಿಸಿಲಿನ ವಾತಾವರಣ ಮುಂದಿನ ಕೆಲವು ದಿನ ಇದ್ದರೂ ಒಣಹವೆ ಮುಂದುವರಿಯಲಿದೆ.
ಉತ್ತರ ಒಳನಾಡಿನಲ್ಲಿ ಒಣಹವೆ ಮುಂದುವರಿಯಲಿದೆ. ಸಂಜೆ ಧಾರವಾಡ ಗದಗ್ ಕೊಪ್ಪಳ ಜಿಲ್ಲೆಯ ಅಲ್ಲಲ್ಲಿ ಸಣ್ಣ ಪ್ರಮಾಣದಲ್ಲಿ ಮಳೆಯ ಮುನ್ಸೂಚನೆ ಇದೆ.
ಬಂಗಾಳ ಕೊಲ್ಲಿಯಲ್ಲಿ ಅಂಡಮಾನ್ ದಕ್ಷಿಣ ಭಾಗದಲ್ಲಿ ಫೆಬ್ರವರಿ 22 ರಿಂದ ಸಣ್ಣ ಪ್ರಮಾಣದಲ್ಲಿ ವಾಯುಭಾರಕುಸಿತವಾಗುವ ಮುನ್ಸೂಚನೆ ಇರಲಿದ್ದು ಇದು ಫೆಬ್ರವರಿ 28 ಕ್ಕೆ ಶ್ರೀಲಂಕಾ ಸಮೀಪ ಬಂದು ನಂತರ ಉತ್ತರಕ್ಕೆ ಚಲಿಸಿ ಮಾರ್ಚ್ 2 ಕ್ಕೆ ತಮಿಳುನಾಡು ಕರಾವಳಿ ಸಮೀಪ ಬರುವ ಸಾಧ್ಯತೆ ಇರುವ ಕಾರಣ ರಾಜ್ಯದಲ್ಲಿ ಮೋಡದ ವಾತಾವರಣ ಇರಬಹುದು. ವಾತಾವರಣದ ತೇವಾಂಶ ಜಾಸ್ತಿಯಾಗಿ ಫೆಬ್ರವರಿ 25 ತನಕ ಮತ್ತು ಮಾರ್ಚ್ 1 ರಿಂದ ಮಾರ್ಚ್ 5 ತನಕ ಸೆಕೆ- ಮೋಡದ ವಾತಾವರಣ ಮುಂದುವರಿಯಬಹುದು.
👍
🙏
❤️
😮
36