ಕಂಪದಕೋಡಿ ವೆದರ್ ರಿಪೋರ್ಟ್ - (ಕರ್ನಾಟಕ ರಾಜ್ಯದ ಹವಾಮಾನ ವರದಿ)
February 21, 2025 at 08:43 AM
21-2-2025 ರ ಹವಾಮಾನ ಮುನ್ಸೂಚನೆ. ಕರಾವಳಿ ಜಿಲ್ಲೆಗಳಲ್ಲಿ ರಾತ್ರಿ ಮೋಡದ ವಾತಾವರಣ ಇತ್ತು. ಮಳೆ ಬರಲಿಲ್ಲ.ಕೊಡಗಿನ ನಾಪೋಕ್ಲು ಸುತ್ತಮುತ್ತ ಸಾಧಾರಣ ಮಳೆಯಾಗಿದೆ. ಉತ್ತರ ಒಳನಾಡಿನ ಧಾರವಾಡ ಹಾವೇರಿ ಗದಗ ಜಿಲ್ಲೆಗಳ ಕೆಲವೆಡೆ ಅನಿರೀಕ್ಷಿತ ಮಳೆಯಾಗಿದೆ. ಇವತ್ತಿನ ಮುನ್ಸೂಚನೆ ಪ್ರಕಾರ ಕರಾವಳಿಯ ದ.ಕ. ಉಡುಪಿ ಉ.ಕ ಜಿಲ್ಲೆಗಳಲ್ಲಿ ಭಾಗಷಃ ಮೋಡದ ವಾತಾವರಣ ಮುಂದುವರಿಯಲಿದೆ. ರಾತ್ರಿಯೂ ಮೋಡ ಮುಂದುವರಿಯಲಿದ್ದು ಕಾರ್ಕಳ ಬೆಳ್ತಂಗಡಿ ಸುಳ್ಯ ತಾಲ್ಲೂಕುಗಳ ಘಟ್ಟಪ್ರದೇಶಗಳ ಸಮೀಪ ಕೆಲವೆಡೆ ಸಣ್ಣ ಪ್ರಮಾಣದಲ್ಲಿ ತುಂತುರು ಮಳೆಯಾಗುವ ಸಾಧ್ಯತೆ ಇದೆ. ದೊಡ್ಡ ಮಳೆ ಬರುವ ಮುನ್ಸೂಚನೆ ಇಲ್ಲ. ನಾಳೆ ಅಥವಾ ನಾಡಿದ್ದು ಕೆಲವೆಡೆ ಸಾಮಾನ್ಯ ಮಳೆಯಾಗುವ ಸಾಧ್ಯತೆ ಇದೆ. ಮಲೆನಾಡಿನ ಜಿಲ್ಲೆಗಳಲ್ಲಿಯೂ ಸಂಜೆಯ ನಂತರ ಮೋಡದ ವಾತಾವರಣ ಇರಲಿದ್ದು ಕೊಡಗು ಮತ್ತು ಚಿಕ್ಕಮಗಳೂರು ಶಿವಮೊಗ್ಗ ಜಿಲ್ಲೆಗಳ ಕರಾವಳಿಗೆ ಹೊಂದಿಕೊಂಡಿರುವ ಪ್ರದೇಶಗಳ (ಆಗುಂಬೆ - ಚಾರ್ಮಾಡಿಯ) ಒಂದೆರಡು ಕಡೆಗಳಲ್ಲಿ ಸಾಮಾನ್ಯ ಮಳೆಯಾಗುವ ಸಾಧ್ಯತೆ ಇದೆ. ಮುಂದಿನ 3 ದಿನ ಇದೇ ವಾತಾವರಣ ಮುಂದುವರಿಯಲಿದ್ದು ನಂತರ ಒಣಹವೆ ಮುಂದುವರಿಯಬಹುದು. ದಕ್ಷಿಣ ಒಳನಾಡಿನಲ್ಲಿ ಮೋಡ- ಬಿಸಿಲಿನ ವಾತಾವರಣ ಇರಲಿದ್ದು ಒಣಹವೆ ಮುಂದುವರಿಯಲಿದೆ. ಉತ್ತರ ಒಳನಾಡಿನಲ್ಲಿಯೂ ಒಣಹವೆ ಇರಲಿದ್ದು ಮಳೆ ಮುನ್ಸೂಚನೆ ಇಲ್ಲ. ಆದರೇ ಗಾಳಿಯ ಕಾರಣದಿಂದ ಮೋಡ ಉತ್ತರಕ್ಕೆ ಚಲಿಸಿದರೆ ಮಾತ್ರ ಮಲೆನಾಡಿನ ಮೋಡ ಉತ್ತರ ದಿಕ್ಕಿನತ್ತ ಚಲಿಸಿ ಮಧ್ಯ ಕರ್ನಾಟಕದ ಕೆಲವೆಡೆ ಅನಿರೀಕ್ಷಿತ ಮಳೆಯಾಗಬಹುದು. ಕರಾವಳಿ ಮಲೆನಾಡು ಜಿಲ್ಲೆಗಳ ಅಲ್ಲಲ್ಲಿ ನಾಳೆ ಮತ್ತು ನಾಡಿದ್ದು ಮೋಡ - ತುಂತುರು ಮಳೆಯಾಗುವ ಮುನ್ಸೂಚನೆ ಇದೆ. ಬಂಗಾಳ ಕೊಲ್ಲಿಯ ಸಂಭಾವ್ಯ ವಾಯುಭಾರಕುಸಿತವು ಶ್ರೀಲಂಕಾದ ದಕ್ಷಿಣದಲ್ಲಿ ಚಲಿಸಿದರೂ ಇದರ ಪರಿಣಾಮ ಮಾರ್ಚ್ ಮೊದಲ ವಾರ ಮತ್ತೆ ಮೋಡ ಬರಲಿದ್ದು ಅಲ್ಲಲ್ಲಿ ತುಂತುರು ಮಳೆಯಾಗುವ ಸಾಧ್ಯತೆ ಇದೆ.
👍 🙏 24

Comments