ಕಂಪದಕೋಡಿ ವೆದರ್ ರಿಪೋರ್ಟ್ - (ಕರ್ನಾಟಕ ರಾಜ್ಯದ ಹವಾಮಾನ ವರದಿ)
February 22, 2025 at 06:28 AM
22-2-2025 ರ ಹವಾಮಾನ ಮುನ್ಸೂಚನೆ.
ಕರಾವಳಿ ಜಿಲ್ಲೆಗಳಲ್ಲಿ ನಿನ್ನೆ ಮೋಡ ಮತ್ತು ಸೆಕೆಯ ವಾತಾವರಣ ಇತ್ತು. ಉ.ಕ. ಜಿಲ್ಲೆಯ ಒಂದೆರಡು ಪ್ರದೇಶಗಳಲ್ಲಿ ಮಳೆಯಾಗಿದ್ದು ಉಳಿದ ಜಿಲ್ಲೆಗಳಲ್ಲಿ ಮೋಡ ಮುಂದುವರೆದಿತ್ತು.
ಇವತ್ತಿನ ಮುನ್ಸೂಚನೆ ಪ್ರಕಾರ ಕಾಸರಗೋಡು ಮತ್ತು ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಬಿಸಿಲಿನ ವಾತಾವರಣ ಮುಂದುವರಿಯಲಿದ್ದು ಸಂಜೆ - ರಾತ್ರಿ ಮಳೆ ಮೋಡ ಬರುವ ಸಾಧ್ಯತೆ ಇದೆ. ಸುಳ್ಯ ಬೆಳ್ತಂಗಡಿ ಕಾರ್ಕಳ ಪುತ್ತೂರು ತಾ.ಗಳ ಕೆಲವೆಡೆ ತುಂತುರು ಮಳೆಯ ಹಾಗೂ ಸುಬ್ರಹ್ಮಣ್ಯ ಸುತ್ತಮುತ್ತಲಿನ ಒಂದೆರಡು ಕಡೆಗಳಲ್ಲಿ ಸಣ್ಣ ಮಳೆಯಾಗುವ ಸಾಧ್ಯತೆಗಳಿವೆ. ನಾಳೆಯೂ ಇದೇ ರೀತಿಯ ವಾತಾವರಣ ಇರಬಹುದು.
ಕೊಡಗು ಹಾಸನ ಚಿಕ್ಕಮಗಳೂರು ಶಿವಮೊಗ್ಗ ಜಿಲ್ಲೆಗಳ ಕರಾವಳಿಗೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಮೋಡದವಾತಾವರಣದ ಇರಲಿದ್ದು ಅಲ್ಲಲ್ಲಿ ತುಂತುರು ಮಳೆಯ ಮುನ್ಸೂಚನೆ ಇದೆ.
ದಕ್ಷಿಣ ಒಳನಾಡಿನಲ್ಲಿ ಬಿಸಿಲಿನ ವಾತಾವರಣ ಇರಲಿದ್ದು ಮಾರ್ಚ್ ಮೊದಲ ವಾರ ಮೋಡ ಬರುವ ಮುನ್ಸೂಚನೆ ಇದೆ.
ಉತ್ತರ ಒಳನಾಡಿನಲ್ಲಿಯೂ ಬಿಸಿಲಿನ ವಾತಾವರಣ ಇರಲಿದ್ದು ಒಣಹವೆ ಮುಂದುವರಿಯಲಿದೆ.
ಬಂಗಾಳ ಕೊಲ್ಲಿಯ ಗಾಳಿಯ ತಿರುಗುವಿಕೆ ಕಾರಣದಿಂದ ಮೋಡ ಬರುತ್ತಿದ್ದು ವಾತಾವರಣದ ತೇವಾoಶ ಅಧಿಕವಾಗಿ ಸೆಕೆಯ ವಾತಾವರಣ ಮಾರ್ಚ್ 5 ತನಕ ಮುಂದುವರಿಯಲಿದೆ. ಫೆಬ್ರವರಿ 24-28 ತನಕ ಮಳೆ ಸಾಧ್ಯತೆ ಕಡಿಮೆ ಆದರೂ ಮಾರ್ಚ್ 1 ರ ನಂತರ ಮತ್ತೆ ಮಳೆ ಮೋಡ ಕರಾವಳಿ ಮಲೆನಾಡು ಜಿಲ್ಲೆಗಳಿಗೆ ಬರಲಿದೆ.
👍
🙏
❤️
👌
30