ಕಂಪದಕೋಡಿ ವೆದರ್ ರಿಪೋರ್ಟ್ - (ಕರ್ನಾಟಕ ರಾಜ್ಯದ ಹವಾಮಾನ ವರದಿ)
February 23, 2025 at 06:39 AM
23-2-2025 ರ ಹವಾಮಾನ ಮುನ್ಸೂಚನೆ. ಕರಾವಳಿ ಜಿಲ್ಲೆಗಳಲ್ಲಿ ನಿನ್ನೆ ಉರಿಬಿಸಿಲು ಸೆಕೆಯ ವಾತಾವರಣ ಇತ್ತು. ಸಂಜೆ ಸುಳ್ಯ ಬೆಳ್ತಂಗಡಿ ಕಾರ್ಕಳ ಪುತ್ತೂರು ತಾಲ್ಲೂಕಿನ ಅಲ್ಲಲ್ಲಿ ಸಣ್ಣ ಮಳೆಯಾಗಿದೆ. ಇವತ್ತಿನ ಮುನ್ಸೂಚನೆ ಪ್ರಕಾರ ಕಾಸರಗೋಡು ಮತ್ತು ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಮೋಡ - ಬಿಸಿಲಿನ ವಾತಾವರಣ ಇರಲಿದ್ದು ಸಂಜೆ ಮೋಡ ಬರುವ ಮುನ್ಸೂಚನೆ ಇದೆ. ಕಾಸರಗೋಡು-ಕರ್ನಾಟಕ ಗಡಿ ಪ್ರದೇಶಗಳಲ್ಲಿ ಪುತ್ತೂರು ತಾಲ್ಲೂಕಿನ ಕೆಲವೆಡೆ ತುಂತುರು ಮಳೆಯಾಗುವ ಸಾಧ್ಯತೆ ಇದೆ. ಸುಳ್ಯ ತಾ.ನ ಘಟ್ಟಪ್ರದೇಶಗಳ ಅಸುಪಾಸು ಅಲ್ಲಲ್ಲಿ ಸಣ್ಣ ಮಳೆಯಾಗುವ ಸಾಧ್ಯತೆಗಳಿದ್ದು, ಕಾರ್ಕಳ ಬೆಳ್ತಂಗಡಿ ತಾಲ್ಲೂಕುಗಳ ಘಟ್ಟಪ್ರದೇಶಗಳ ಸಮೀಪ ಕೆಲವೆಡೆ ತುಂತುರು ಮಳೆಯಾಗುವ ಸಾಧ್ಯತೆ ಇದೆ. ನಾಳೆಯಿಂದ ಮಳೆ ಸಾಧ್ಯತೆ ಕಡಿಮೆ ಆಗಲಿದೆ. ಮಲೆನಾಡಿನ ಜಿಲ್ಲೆಗಳಲ್ಲಿ ಸಂಜೆ ಮೋಡದ ವಾತಾವರಣ ಇರಲಿದ್ದು ಕೊಡಗು ಜಿಲ್ಲೆಯ ಅಲ್ಲಲ್ಲಿ ತುಂತುರು ಮಳೆಯ ಮುನ್ಸೂಚನೆ ಇದೆ. ಉಳಿದ ಜಿಲ್ಲೆಗಳಲ್ಲಿ ಮೋಡ ಮುಂದುವರಿಯಲಿದೆ. ಉತ್ತರ ಮತ್ತು ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಬಿಸಿಲು ಮುಂದುವರಿಯಲಿದ್ದು ಮಳೆ ಮುನ್ಸೂಚನೆ ಇಲ್ಲ. ಬಂಗಾಳಕೊಲ್ಲಿಯ ಹವಾಮಾನ ವೈಪರೀತ್ಯದಿಂದಾಗಿ ಕರಾವಳಿ ಮಲೆನಾಡು ಭಾಗದಲ್ಲಿ ಮೋಡ ಬರುತ್ತಿದ್ದು ಇದು ನಾಳೆಯಿಂದ ಕಡಿಮೆ ಆಗಲಿದೆ. ಏರ್ ಸರ್ಕ್ಯುಲೇಷನ್ ಫೆ 27/28ಕ್ಕೆ ದಕ್ಷಿಣ ಶ್ರೀಲಂಕಾ ತಲುಪಲಿದ್ದು ಇದರಿಂದಾಗಿ ತಮಿಳುನಾಡಿನಲ್ಲಿ ಮಳೆಯಾಗಬಹುದು. ಸರ್ಕ್ಯುಲೇಷನ್ ಅರಬ್ಬೀಸಮುದ್ರದತ್ತ ಮುಂದುವರೆದರೆ ಮಾರ್ಚ್ ಮೊದಲ ವಾರ ಕರಾವಳಿ ಜಿಲ್ಲೆಗಳಿಗೆ ಮತ್ತೆ ಮೋಡ ಬರುವ ಸಾಧ್ಯತೆ ಇದೆ.
👍 🙏 ❤️ 32

Comments