ಸನಾತನ ಹಿಂದೂ ಧರ್ಮ🚩
February 28, 2025 at 12:40 AM
*ಜೀವನದ 6 ವೈರಿಗಳ ಚಿಕ್ಕ ಪರಿಚಯದ ಪ್ರಯತ್ನ:* * 1) ಕಂಡದ್ದನ್ನು ಬಯಸುವುದೇ **ಕಾಮ.** * 2) ಬಯಸಿದ್ದು ದೊರೆಯದಿದ್ದರೆ **ಕ್ರೋಧ.** * 3) ದೊರೆತರೆ ಇನ್ನಷ್ಟು ದೊರೆಯಲೆಂಬುವುದೇ **ಲೋಭ.** * 4) ಇನ್ನಷ್ಟು ದೊರಕಿತೆಂದರೆ ಅದು ತನ್ನ ಕೈ ಬಿಟ್ಟು ಹೊಗಬಾರದೆಂಬುದೇ **ಮೋಹ.** * 5) ಅದು ಕೈ ಬಿಟ್ಟು ಹೋಗದೆ ತನ್ನಲ್ಲಿಯೇ ಉಳಿದರೆ ಅದು ತನ್ನೊಬ್ಬನಿಗೆ ಇದೆಯೆಂಬುದು **ಮದ.** * 6) ತನ್ನಲ್ಲಿರುವುದು ಬೇರೋಬ್ಬನಲ್ಲಿ ಇದೆ ಎಂದು ತಿಳಿದು ಬಂದಾಗ ಬರುವುದೇ **ಮತ್ಸರ.** ಹೀಗೆ ಕಾಮವೊಂದರಿಂದ 6 ವೈರಿಗಳು ರಕ್ತ ಬೀಜಾಸುರನ ಸಂತತಿಯಂತೆ ಬೆಳೆಯುತ್ತಾ ಹೋಗುತ್ತದೆ. ಕೊನೆಗೆ ನಾವು ತೆಗೆದುಕೊಂಡು ಹೋಗುವುದು ಒಂದು ದೊಡ್ಡ ಸೊನ್ನೆಯನ್ನು. ಸುಲಭವಾಗಿ ಗೆಲ್ಲಲಾಗದ ಈ ಪರಮ ಪದ ಪಯಣ ಮಾರ್ಗದ ಶತ್ರುಗಳನ್ನು ಗೆಲ್ಲುವ ಪ್ರಯತ್ನ ಮಾಡೋಣ, ವಿಜಯ ಸಂದರೆ ಹರಿ ಕೃಪೆ ಎನ್ನೋಣ. ಆಗದೇ ಸೋತರೆ ಜೀವ ಯೋಗ್ಯತೆ ಎಂದು ಭಾವಿಸೋಣ. ಸನಾತನ ಹಿಂದೂ ಧರ್ಮ https://whatsapp.com/channel/0029Va9eH0M3bbUz1vZGVU0V
🙏 5

Comments