ಸನಾತನ ಹಿಂದೂ ಧರ್ಮ🚩
March 1, 2025 at 12:09 AM
🙏🌹🙏 *ಶುಭೋದಯ*
*“ಓಂ ಶ್ರೀ ರಾಘವೇಂದ್ರಾಯ ನಮಃ” ಇತ್ಯಷ್ಟಾಕ್ಷರಮಂತ್ರತಃ |*
*ಜಪಿತಾದ್ಭಾವಿತಾನಿತ್ಯಂ ಇಷ್ಟಾರ್ಥಾಹಸ್ಯುರ್ನ ಸಂಶಯಃ ||*
ರಥವನೇರಿದ ರಾಘವೇಂದ್ರ ಸದ್ಗುಣಗಣಸಾಂದ್ರಾ ||ಪ||
ಸತತ ಮಾರ್ಗದಿ ಸಂತತ ಸೇವಿಪರಿಗೆ ಅತಿ ಹಿತದಲಿ ಮನೋರಥವ ನೀಡುವೆನೆಂದು ||ಅ.ಪ||
ಚತುರ ದಿಕ್ಕುವಿದಿಕ್ಕುಗಳಲ್ಲಿ ಹರಿವೋ ಜನರಲ್ಲಿ ಮಿತಿಯಿಲ್ಲದೆ ಬಂದು ಓಲೈಸುತಲಿ ವರಗಳ ಬೇಡುತಲಿ ನುತಿಸುತ ಪರಿಪರಿ ನತರಾಗಿ ಹರಿಗೆ ಗತಿಪೇಳದೆ ಸರ್ವಥಾ ನಾ ಬಿಡೆನೆಂದು ||೧||
ಅತುಲ ಮಹಿಮಾನೆ ಆ ದಿನದಲ್ಲಿ ದಿತಿವಂಶದಲಿ ಉತ್ಪತ್ತಿಯಾಗಿ ಉಚಿತದಲ್ಲಿ ಉತ್ತಮ ಮತಿಯಲ್ಲಿ ಅತಿಶಯವಿರುತಿರೆ ಪಿತನ ಬಾಧೆಗೆ ಮನ್ಮಥ-ಪಿತನೊಲಿಸಿದೆ ಜಿತ ಕರುಣದಲಿ ||೨||
ಸನಾತನ ಹಿಂದೂ ಧರ್ಮ
https://whatsapp.com/channel/0029Va9eH0M3bbUz1vZGVU0V
ಪ್ರಥಮ ಪ್ರಹ್ಲಾದ ವ್ಯಾಸಮುನಿಯೆ ಯತಿ ರಾಘವೇಂದ್ರ ಪ್ರತಿವಾದಿ ಕದಳಿವನ ಕರಿಯೆ ಕರ ಮುಗಿವೆನು ದೊರೆಯೆ ಕ್ಷಿತಿಯೊಳು ಗೋಪಾಲವಿಠಲನ ಸ್ಮರಿಸುತ ವರಮಂತ್ರಾಲಯದೊಳು ಶುಭವೀಯುತ ||೩||
🙏
8