Investment Education by Amar
Investment Education by Amar
February 3, 2025 at 02:04 PM
💹ಕಾರ್ ಸಾಲ ಆದಷ್ಟು ಮಾಡಬಾರದು? ಫೈನಾನ್ಸಿಯಲ್ ಪ್ಲಾನಿಂಗ್ ಆಯಾಮದಲ್ಲಿ ಏನು ಮಾಡಬಹುದು? ❇️ಕಾರ್ ಸಾಲದ ಬಡ್ಡಿದರಗಳು ಬಹಳ ಹೆಚ್ಚಿಗೆ ಇರುತ್ತದೆ. ಕಾರ್ ಶೋರೂಮಿನಿಂದ ಹೊರಗೆ ಬಂಡ ಘಳಿಗೆಯಿಂದ ಬೆಲೆ ಕಳೆದುಕೊಳ್ಳುತ್ತಾ ಹೋಗುತ್ತೆ (Depreciating asset). ⭕️ಏನಾದರೂ ಸಮಸ್ಯೆ ಬಂದು ಕಾರು ಮಾರಬೇಕಾದ ಸಂದರ್ಭದಲ್ಲಿ ಇನ್ನೂ ಸಾಲ ಉಳಿದಿದ್ದರೆ, ಕೈಗೆ ಸಿಗುವ ಹಣ ಬಹಳ ಕಡಿಮೆ ಇರುತ್ತದೆ. ✅ಒಂದು ವೇಳೆ ಕಾರ್ ಸಾಲ ಮಾಡಿದರೂ ಅದನ್ನು ಸಾಧ್ಯವಾದಷ್ಟು ಬೇಗ ತೀರಿಸುವ ಯೋಜನೆ ಹಾಕಿಕೊಳ್ಳಬೇಕು. ಪಾರ್ಟ್ ಪೇಮೆಂಟ್ ಮಾಡುವ ಅಭ್ಯಾಸ ಮಾಡಿಕೊಳ್ಳಬೇಕು. ✅ಈಗಾಗಲೇ ಒಂದು ಕಾರ್ ಇರುವವರು ಹೊಸ ಕಾರಿಗೆ upgrade ಮಾಡುವ ಚಿಂತನೆ ಇದ್ದರೆ, ಒಂದಷ್ಟು ತಿಂಗಳುಗಳು ಕಾದು ಹಣ ಕೂಡಿತ್ತು ಕೊಳ್ಳಬಹುದು. ✅ಮೊದಲನೇ ಕಾರ್ ಕೊಳ್ಳುವವರಿಗೆ ಅದು ಕಷ್ಟ, ಹಾಗಾಗಿ ಕಡಿಮೆ ಬಜೆಟಿನ ಕಾರ್ ಮೊದಲ ಕಾರ್ ಆಗಿ ಕೊಳ್ಳುವುದು ಉತ್ತಮ. ದುಡಿಮೆ ಹೆಚ್ಚುತ್ತಿದ್ದಂತೆ ಒಂದಷ್ಟು ವರ್ಷಗಳ ಬಳಿಕ upgrade ಮಾಡಿಕೊಳ್ಳಬಹುದು.
👍 ❤️ 13

Comments