
Investment Education by Amar
796 subscribers
About Investment Education by Amar
Education, Insights on Investment & Capital Markets. ಸ್ಟಾಕ್ ಮಾರುಕಟ್ಟೆಯ ಬಗ್ಗೆ ಕನ್ನಡದಲ್ಲಿ ಕಲಿಕೆ ಮತ್ತು ಅನುಭವ ಹಂಚಿಕೊಳ್ಳಲು ಈ ಚಾನಲ್ ತೆರೆಯಲಾಗಿದೆ. Posts for awareness only.
Similar Channels
Swipe to see more
Posts

🏆ಅಂದಾಜಿನ ಪ್ರಾಕಾರ ಭಾರತದ ಮನೆಗಳಲ್ಲಿ ಸಂಗ್ರಹ ಆಗಿರುವ ಚಿನ್ನ ಪ್ರಪಂಚದ 10 ದೊಡ್ಡ ದೇಶಗಳಲ್ಲಿ ಸರ್ಕಾರಗಳ ಬಳಿ ಇರುವ ಚಿನ್ನಕ್ಕಿಂತಲೂ ಹೆಚ್ಚಿಗೆಯೇ ಇದೆ. 🥇ಹಳೇ ಕಾಲದಲ್ಲಿ ಅನೇಕ ಹೆಂಗಸರಿಗೆ ವಿದ್ಯಾಭ್ಯಾಸ ಇರಲಿಲ್ಲ, ಹೂಡಿಕೆ ಉಳಿತಾಯ ಅನ್ನುವ ಕಲಿಕೆಯೂ ಇರಲಿಲ್ಲ ಆದರೆ ಚಿನ್ನವನ್ನು ಜೋಪಾನ ಮಾಡುವ ಜಾಣ್ಮೆ ಇತ್ತು. 🎯ಇಂದಿಗೂ ಪ್ರಪಂಚದಲ್ಲಿ ಚಿನ್ನಕ್ಕೆ ಅತಿ ಹೆಚ್ಚು ಬೆಲೆ ಇದೆ. ಸ್ಟಾಕ್ ಮಾರುಕಟ್ಟೆಯಲ್ಲಿ ಭಯ ಇದ್ದಾಗ ಚಿನ್ನದ ಬೆಲೆ ಏರುತ್ತದೆ, ದಿನನಿತ್ಯದ ಬಳಕೆಗೆ ಚಿನ್ನದ utility ಇದೆ, ಕಷ್ಟಕಾಲದಲ್ಲಿ ಚಿನ್ನವನ್ನು ಗಿರವಿ ಇಟ್ಟು ಅಥವಾ ಮಾರಿ ಹಣ ಪಡೆಯಬಹುದು. 👩🍼ಭಾರತದ ತಾಯಂದಿರ ಮುಂದಾಲೋಚನೆಗೆ ದೊಡ್ಡ ನಮಸ್ಕಾರ. 💹ಹೂಡಿಕೆಯಲ್ಲಿ ಒಂದಷ್ಟು ಭಾಗ ಚಿನ್ನದಲ್ಲಿ ಮಾಡುವುದು ಒಳ್ಳೆಯದು. ನನ್ನ ನಡೆ ಮತ್ತು ನಿಲುವೂ ಇದೇ ಆಗಿದೆ.


💹ಬೆಂಗಳೂರಿಗೆ ಅಂಟಿಕೊಂಡಂತೆ ಇರುವ ಮೈಸೂರು ಎಲ್ಲ ಆಯಾಮಗಳಲ್ಲಿಯೂ ಅಭಿವೃದ್ಧಿಗೆ ಸರಿಹೊಂದುವಂತಿದೆ. ಹೌದು ನಮಗೆ ಮೈಸೂರಿನ ಸೌಂದರ್ಯ ಹಾಳಾಗಬಾರದು ಅನ್ನುವ ಭಾವನಾತ್ಮಕ ಅಭಿಮಾನವಿದೆ. ಆದರೆ ಅಭಿವೃದ್ಧಿಗೆ ಪೂರಕವಾಗಿರುವ ನಗರಗಳನ್ನು ಸರ್ಕಾರಗಳು ಮತ್ತು ಬ್ಯುಸಿನೆಸ್ ಗಳು ಉಪಯೋಗಿಸಿಕೊಳ್ಳಲೇ ಬೇಕು. ಅದೇ ಜಗದ ನಿಯಮ ಕೂಡ. 🎯ಮೈಸೂರಿನ ಅಭಿವೃದ್ಧಿಯಲ್ಲಿ ಕನ್ನಡಿಗರು ಹೇಗೆ ಭಾಗವಹಿಸಬಹುದು? ಹೀಗೆ ಲಾಭ ಗಳಿಸಬಹುದು? ❇️ಮೊದಲಿಗೆ ಏರುವುದು ರಿಯಲ್ ಎಸ್ಟೇಟ್ ಬೆಲೆಗಳು. ಒಳ್ಳೆಯ ಬೆಲೆಯಲ್ಲಿ ಕನ್ನಡಿಗರು ಜಾಗ ಕೊಳ್ಳಬೇಕು, ಮೋಸ ಆಗದಂತೆ ಗಮನ ಹರಿಸಬೇಕು. ❇️ಒಳ್ಳೆಯ ಕೆಲಸದ ಅವಕಾಶ ಸಿಕ್ಕರೆ, ಬೆಂಗಳೂರಿಂದ ಮೈಸೂರಿನ ಕಡೆ ಹೊರತು ದುಡಿಯಬಹುದು. ❇️ಇದರಿಂದ ಮೈಸೂರು ಅಕ್ಕ ಪಕ್ಕ ಒಂದಷ್ಟು ರೆಸಾರ್ಟುಗಳು, ದೊಡ್ಡ ಹೋಟೆಲ್ ಗಳು, ಆಸ್ಪತ್ರೆಗಳು , ಅಪಾರ್ಟ್ಮೆಂಟ್ ಗಳು, township ಗಳು ಬರುವ ಅವಕಾಶಗಳು ಹೆಚ್ಚು. ಇಲ್ಲಿಯೂ ಕನ್ನಡಿಗರು ಲಾಭ ಮಾಡಲು ಸಾಧ್ಯವೇ ನೋಡಬಹುದು.


🎯ಕಳೆದ 6 ತಿಂಗಳುಗಳಲ್ಲಿ ನಿಫ್ಟಿ 50 ಯಾವುದೇ ಲಾಭ ಕೊಟ್ಟಿಲ್ಲ. 💹ಈ ಸಮಯದಲ್ಲಿ ಭಾರತದ 2025-26 ಆರ್ಥಿಕ ವರ್ಷದ ಬಜೆಟ್ ಬಂದಿತು ,ಟ್ರಂಪ್ ಸುಂಕ ನೀತಿಯ ಸಮಸ್ಯೆಗಳು ಬಂದವು, ಪಾಕಿಸ್ತಾನ ಭಾರತದ ಮೇಲೆ ಉಗ್ರ ಧಾಳಿ ಮಾಡಿತು. ❇️ಇದೆಲ್ಲದರ ಮಧ್ಯೆ ಭಾರತದ ಮಾರುಕಟ್ಟೆ ಉತ್ತಮ ಚೇತರಿಕೆ ಕಂಡಿದೆ ಅಂತಲೇ ಹೇಳಬಹುದು. 🔆SIP ನಲ್ಲಿರುವುದು ಉತ್ತಮ.


💹ಫೈನಾನ್ಶಿಯಲ್ ಪ್ಲಾನಿಂಗ್, ಜನರ ದುಡಿಮೆ ಮತ್ತು ಶಾಲೆಯ ಶುಲ್ಕಗಳು: ❇️ಒಂದಿಬ್ಬರು ಗೆಳೆಯರು ಏಪ್ರಿಲ್ ಮೇ ನಲ್ಲಿ ಮಕ್ಕಳನ್ನು ಹೊಸ ಶಾಲೆಗೆ ಸೇರಿಸಿದ್ದೀವಿ ಅಂತ ಹೇಳಿದ್ರು. ಶಾಲೆ ಬದಲಿಸಿದ ಕಾರಣ ಕಳೆದ ವರ್ಷಕ್ಕಿಂತ 100% ಹೆಚ್ಚಿಗೆ ಈ ವರ್ಷದ ಫೀಸ್ ಆಗಿದೆಯಂತೆ. (ಒಟ್ಟಾರೆ 1 ಲಕ್ಷ ಇದಿದ್ದು 2 ಲಕ್ಷ ಆಗಿದೆ). ಉತ್ತಮ ಶಾಲೆಗೆ ಹೋಗಿದ್ದೀವಿ ಅನ್ನುವ ನಂಬಿಕೆ ಅವರದು. ❇️ಗಂಡ ಹೆಂಡತಿ ಸೇರಿಸಿ ತಿಂಗಳಿಗೆ ಸುಮಾರು 2 ಲಕ್ಷ ರೂಪಾಯಿಗಳು ಕೈಗೆ ಬರುತ್ತದೆ. 2 ಲಕ್ಷ ಶಾಲೆಯ ಫೀಸ್ ಅಂತ ಹೇಳಿದರು. ಅಂದರೆ ಇಬ್ಬರ ತಿಂಗಳ ದುಡಿಮೆ ಒಂದು ಮಗುವಿನ ವಾರ್ಷಿಕ ಫೀಸು. ಎರಡು ಮಕ್ಕಳಿರುವ ಕಾರಣ 2 ತಿಂಗಳುಗಳ ಸಂಬಳ ಫೀಸಿಗೆ ಹೋಗುತ್ತದೆ. 🎯ವರ್ಷದ 12 ತಿಂಗಳು ಜೀವನ ನಡೆಸಕ್ಕೆ ಉಳಿದಿರುವುದು 10 ತಿಂಗಳ ಸಂಬಳ ಅಷ್ಟೇ. ಹಣದುಬ್ಬರ ಏರಿಕೆ ಅಂದರೆ ಇದು. ಸರ್ಕಾರ ಕೊಡುವ ಅಂಕಿ ಅಂಶಗಳು ನಮ್ಮ ಜೀವನದಲ್ಲಿ ಯಾವುದೇ ಹೋಲಿಕೆ ಇಲ್ಲದಂತೆ ಇವೆ.

💹ಭಾರತ ಪ್ರಪಂಚದ 4ನೇ ದೊಡ್ಡ ಎಕಾನಮಿ ಆಗಿ ಹೊರಹೊಮ್ಮಿದೆ. ಎಲ್ಲ ಭಾರತೀಯರಿಗೂ ಅಭಿನಂದನೆಗಳು. ❇️ನಾವು ಜಿಡಿಪಿ ಯಲ್ಲಿ ನಾಲ್ಕನೆಯ ದೊಡ್ಡ ದೇಶವಾಗಿದ್ದೇವೆ ನಿಜ. ಆದರೆ ನಮ್ಮ ಆದಾಯದಲ್ಲಿ ಮತ್ತು ನಮ್ಮ ಆರ್ಥಿಕ ಉತ್ಪಾದನೆಯಲ್ಲಿ ನಾವಿನ್ನೂ ಬಹಳಷ್ಟು ಪ್ರಗತಿ ಕಾಣಬೇಕಿದೆ. ✅GDP per capita & Per Capita Income ಎರಡರಲ್ಲಿಯೂ ನಾವು 3000$ ಗಿಂತಲೂ ಕಡಿಮೆ ಇದ್ದೇವೆ. 🎯ನಾವು ಮಾಡುವ ಕೆಲಸ ಹೆಚ್ಚು ಆದಾಯ ಗಳಿಸಬೇಕು, ಆಗ ದೇಶದ ಸರಾಸರಿ GDP per capita ಹೆಚ್ಚುತ್ತದೆ. 🎯ದುಡಿಯುವ ಜನರ ಕೈಗೆ ಮತ್ತಷ್ಟು ಹೆಚ್ಚು ಹಣ ತಲುಪಬೇಕು. ಆಗ ದೇಶದ ಸರಾಸರಿ per capita income ಹೆಚ್ಚುತ್ತದೆ.

🎯ಹಣದುಬ್ಬರ ಏರುತ್ತಿದೆ. ಸರ್ಕಾರದ ವರದಿಯ ಹಣದುಬ್ಬರ ಒಂದುಕಡೆಯಾದರೆ ಮಧ್ಯಮ ಮತ್ತು ಮೇಲ್ಮಧ್ಯಮವರ್ಗದ ಆಕಾಂಕ್ಷೆಗಳ ಸುತ್ತ ಆಗುವ ಖರ್ಚುಗಳ (ಶಾಲೆ, ಪ್ರವಾಸ, ಹೊಸಮನೆ ,ಕಾರು ಬೈಕು ಕೊಳ್ಳುವುದು) ಹಣದುಬ್ಬರ ಏರಿಕೆ ಬಹಳ ಹೆಚ್ಚಿದೆ. 🎯ಆದಾಯ/ಸಂಬಳ ಹೆಚ್ಚಿಸಿಕೊಳ್ಳಬೇಕು. 🎯ಹಣದುಬ್ಬರಕ್ಕಿಂತಂಹೆಚ್ಚಿಗೆ ಪ್ರಮಾಣದ ಹೂಡಿಕೆಗಳು ಮಾಡಬೇಕು. ಬ್ಯಾಂಕು ಅಂಚೆ ಕಚೇರಿ ಕೊಡುವ 6-7% ಲಾಭ ಏನಕ್ಕೂ ಸಾಲದು. 🎯ಎಮರ್ಜೆನ್ಸಿ ಹಣ ಬಿಟ್ಟು ಉಳಿದೆಲ್ಲವೂ ಹೆಚ್ಚಿಗೆ ದುಡಿಯಲೇ ಬೇಕು. ಇದು ಆಯ್ಕೆಯಲ್ಲ, ಅನಿವಾರ್ಯತೆ. 🎯ಈಕ್ವಿಟಿ ಹೂಡಿಕೆ ಬಗ್ಗೆ ತಿಳಿದುಕೊಳ್ಳಿ. ಭಾರತದಲ್ಲಿ ಮತ್ತು ಭಾರತದ ಹೊರಗೆ ಹೂಡಿಕೆ ಮಾಡುವುದು ತಿಳಿದುಕೊಳ್ಳಿ. 🎯ಹೂಡಿಕೆ ಶುರು ಮಾಡುವುದು ಮ್ಯುಚುಯಲ್ ಫಂಡ್ ಮಾರ್ಗದಲ್ಲಿದ್ದರೆ ಒಳಿತು. ನೇರ ಸ್ಟಾಕುಗಳನ್ನು ಕೊಳ್ಳಲು ಸಾಮರ್ಥ್ಯ ಜ್ಞಾನ ಬೆಳೆಸಿಕೊಳ್ಳುವ ಮುಂಚೆ ಪ್ರಯೋಗಗಳು ಬೇಡ.

🎯ಪೋಷಕರು ಮಕ್ಕಳಿಗೆ ಹಣದ ಮಹತ್ವ ತಿಳಿಸಬೇಕು. 🛒ಮಕ್ಕಳ ಕೈಗೆ ದುಡ್ಡು ಕೊಟ್ಟು ವ್ಯಾಪಾರ ಮಾಡುವುದು ಕಲಿಸಿ. ⚱️ಅವರಿಗೆ ಹಣದ ಹುಂಡಿ ಕೊಡಿಸಿ, ಅವರಿಗೆ ಸಿಗುವ ಪಾಕೆಟ್ ಮನಿ, ಮುಯ್ಯಿಗಳು ಅದರಲ್ಲಿ ಹಾಕುವುದು ಕಲಿಸಿಕೊಡಿ. 🏦ಸ್ವಲ್ಪ ಬುದ್ದಿ ಬಂದಿದೆ ಅನ್ನುವ ಸಮಯದಲ್ಲಿ ಬ್ಯಾಂಕ್, ಸ್ಟಾಕ್ ಇತ್ಯಾದಿ ಹೂಡಿಕೆಗಳಲ್ಲಿ ತಿಳಿಸಿಕೊಡಿ.

💹ಭಾರತೀಯ ರಿಸರ್ವ್ ಬ್ಯಾಂಕ್ ಮತ್ತೆ ಬಡ್ಡಿದರ ಇಳಿಸಿದೆ. ನಾವು ಪಡೆಯುವ ಸಾಲಗಳು 0.5% ಕಡಿಮೆ ಆಗಲಿವೆ ಅನ್ನುವುದು ಒಳ್ಳೆಯ ವಿಚಾರ. ❇️ಆದರೆ ಬ್ಯಾಂಕಿನಲ್ಲಿ ಹಣ ಡೆಪಾಸಿಟ್ ಇಡುವವರ ಲಾಭದಲ್ಲಿಯೂ 0.5% ಇಳಿಕೆ ಆಗುತ್ತದೆ. ಬಡ್ಡಿ ದರ ಇಳಿಯುತ್ತಾ ಇರುವಾಗ ಡೆಪಾಸಿಟ್ ಇಡುವುದು ಸೂಕ್ತವಲ್ಲ. 🎯ಕಂಪನಿಗಳ ಬೆಳವಣಿಗೆಗೆ ಬಡ್ಡಿದರ ಇಳಿಕೆ ಒಳ್ಳೆಯದು


💹ಹಣ ಉಳಿಸುವ ಮೊದಲ ಪಾಠ: ❇️ನಿಮ್ಮ ಸಂಬಳದಲ್ಲಿ ಅಥವಾ ಬ್ಯುಸಿನೆಸ್ ದುಡಿಮೆಯಲ್ಲಿ ತೆರಿಗೆ ಎಲ್ಲಾ ಕಳೆದು ಕೈಗೆ ಬರುವ 20% ಹಣವನ್ನು ಕಡ್ಡಾಯವಾಗಿ ಉಳಿಸಿ, ಹೂಡಿಕೆ ಮಾಡಿ. ❇️ಒಂದೆರಡು ತಿಂಗಳು ಕಷ್ಟ ಅನಿಸಬಹುದು, ಮೂರನೇ ತಿಂಗಳಿನಿಂದ ಉಳಿದಿರುವ ಹಣದಲ್ಲಿಯೇ ಖರ್ಚುಗಳನ್ನು ಮಾಡುವುದು ಅಭ್ಯಾಸವಾಗುತ್ತದೆ. 🎯ಹೂಡಿಕೆ ಮೊದಲು, ಖರ್ಚು ನಂತರ.