Investment Education by Amar
Investment Education by Amar
February 4, 2025 at 07:04 PM
💹ಹೊಸ ಆದಾಯ ತೆರಿಗೆ ನೀತಿಯಿಂದ ವರ್ಷಕ್ಕೆ 60000 ದಿಂದ 1 ಲಕ್ಷದವರೆಗೆ ಜನರ ಕೈನಲ್ಲಿ ಹೆಚ್ಚು ದುಡ್ಡು ಉಳಿದರೆ ಏನು ಮಾಡಬಹುದು ಮತ್ತು ಸ್ಟಾಕ್ ಮಾರುಕಟ್ಟೆಯ ಮೇಲೆ ಅದರ ಪರಿಣಾಮ. ⭕️Consumption ಹೆಚ್ಚುತ್ತದೆ ಅನ್ನುವುದು ಸಾಮಾನ್ಯ ನಂಬಿಕೆ. ಅದು ನಿಜ ಕೂಡ. ಆದರೆ ಈ ಹಣದಲ್ಲಿ ಜನರು ಹೆಚ್ಚು ಸೋಪುಗಳು ಶಾಂಪೂಗಳು ಬಿಸ್ಕತ್ತುಗಳು ಕೊಳ್ಳುವುದಿಲ್ಲ. ಅಂದರೆ FMCG ಗೆ ಅಷ್ಟೇನೂ ಪ್ರಯೋಜನವಿಲ್ಲ. ❇️ಯೋಚನೆ ಮಾಡಿ ನೋಡಿದರೆ ಅನೇಕ ಕಡೆ ಈ ಹಣ ಬಳಕೆಯಾಗಬಹುದು : ✅ಹೊಸ ಸ್ಕೂಟರ್ ಅಥವಾ ಬೈಕುಗಳನ್ನು ಕೊಳ್ಳಬಹುದು. ✅ಚಿನ್ನದ ಒಡವೆಗಳನ್ನು , ಬೆಳ್ಳಿ ವಸ್ತುಗಳನ್ನು ಕೊಳ್ಳಬಹುದು. ✅ಈ ಹಣವನ್ನು ಬ್ಯಾಂಕಿನಲ್ಲಿ ಡೆಪಾಸಿಟ್ ಇಡಬಹುದು. ✅ಮ್ಯುಚುಯಲ್ ಫಂಡ್ , ಸ್ಟಾಕ್ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಬಹುದು. ✅ಪ್ರವಾಸಗಳು ಹೋಗಬಹುದು. ✅ಒಳ್ಳೊಳ್ಳೆ ಬಟ್ಟೆಗಳು ವಾಚುಗಳು ಚಪ್ಪಲಿ ಶೂಗಳು ಕೊಳ್ಳಬಹುದು. ✅ಹೋಟೆಲುಗಳಿಗೆ ಹೋಗಿ ಊಟ ತಿಂಡಿ ತಿನ್ನುವುದು ಹೆಚ್ಚಬಹುದು ಅಥವಾ ಮನೆಯಲ್ಲೇ ಕೂತು ಊಟ ತರಿಸಿಕೊಳ್ಳಬಹುದು ✅ಸಿನಿಮಾಗಳಿಗೆ ಹೆಚ್ಚು ಹೋಗಬಹುದು. ❇️ತಕ್ಷಣ ಈ ಸೆಕ್ಟರ್ಗಳಲ್ಲಿ ಹೂಡಿಕೆ ಮಾಡೋಣ ಅದರಿಂದ ಲಾಭ ಬರುತ್ತದೆ ಅನ್ನುವ ಆಲೋಚನೆ ಬೇಡ. ಒಂದಷ್ಟು ಬ್ಯುಸಿನೆಸ್ ಸೈಕಲ್ ಗಳು ಹಿಡಿಯುತ್ತೆ ಇದೆಲ್ಲಾ ಲಾಭವಾಗಿ ಕಾಣಲು. ನಿಮ್ಮ ನಿಮ್ಮ ಅಸೆಟ್ ಸ್ಟ್ರಾಟಜಿ ಮುಂದುವರೆಸಿಕೊಂಡು ಹೋಗಿ.
👍 🙏 ❤️ 👌 22

Comments