Investment Education by Amar
February 8, 2025 at 08:30 PM
💹EPFO ಇಲಾಖೆ vs PF Trust : ಇದರ ಸಾಧ. ಬಾಧಕಗಳೇನು?
✅ಭಾರತ ಮೂಲದ ಕಂಪನಿಗಳಿಗೆ ಪ್ರಾವಿಡೆಂಟ್ ಫಂಡ್ ಟ್ರಸ್ಟ್ ಕಟ್ಟಿಕೊಳ್ಳುವ ಅವಕಾಶವಿದೆ. ಅಂದರೆ ಭಾರತದಲ್ಲಿ ತಮ್ಮ ಮುಖ್ಯ ಕಚೇರಿ ಇರುವ TCS, Infosys, HCL Tech, Wipro, Tech Mahindra, Reliance ಮುಂತಾದ ಸಂಸ್ಥೆಗಳು PF ಹಣವನ್ನು ತಮ್ಮದೇ PF ಟ್ರಸ್ಟ್ ನಲ್ಲಿ ಇಟ್ಟುಕೊಂಡಿರುತ್ತಾರೆ.
✅PF ಟ್ರಸ್ಟ್ ನಲ್ಲಿ ಸ್ವಲ್ಪ ಹೆಚ್ಚಿಗೆ ಬಡ್ಡಿಯನ್ನು ಕಂಪನಿಗಳು ಕೆಲವು ಬಾರಿ ಕೊಡುತ್ತವೆ.
✅PF ಹಣ ಮನೆ ಕಟ್ಟುವುದಕ್ಕೆ , ಮದುವೆಗೆ, ಆರೋಗ್ಯ ಸಮಸ್ಯೆ ಬಂದರೆ, ಮನೆ ಸಾಲ ತೀರಿಸಲು ಹೀಗೆ ಒಂದಷ್ಟು ಕಾರಣಗಳಿಗೆ partial withdrawal ಅನುಮತಿ ಇರುತ್ತದೆ ಮತ್ತು ಈ ಹಣ PF ಟ್ರಸ್ಟ್ ನಲ್ಲಿದ್ದರೆ, ನಮ್ಮ ಕೈಗೆ ಹಣ ಬಹಳ ಬೇಗ ತಲುಪುತ್ತದೆ.
⭕️EPFO ಇಲಾಖೆಗೆ ಹೋದ ಹಣ ತೆಗೆಯುವುದು ಕಷ್ಟಕರ. ಬಹಳ ತಡವಾಗುತ್ತದೆ, ಹಲವು ಡಾಕ್ಯುಮೆಂಟ್ ಗಳನ್ನು ಕಳುಹಿಸಿ ಅವರಿಂದ ಪ್ರತಿಕ್ರಿಯೆಗೆ ಕಾಯಬೇಕು.
❇️PF ನಲ್ಲಿ ಹಣ ಸಂಗ್ರಹ ಮಾಡುವುದು ಒಳ್ಳೆಯದು. ನಮ್ಮ debt ಹೂಡಿಕೆಯ ಮುಖ್ಯ ಭಾಗ PF ಹಣ. ಜನರಿಗೆ ಕಷ್ಟಕಾಲದಲ್ಲಿ ಕೈಗೆ ಸಿಗುವಂತಾದರೆ ಬಹಳ ಒಳ್ಳೆಯದು. ಇತ್ತೀಚಿಗೆ ಭಾರತ ಸರ್ಕಾರ ಈ ವಿಷಯವಾಗಿ ಬದಲಾವಣೆಗಳನ್ನು ತರುತ್ತೇವೆಂದು ಹೇಳಿದೆ. ಕಾದು ನೋಡೋಣ.
👍
❤️
🙏
19