Investment Education by Amar
Investment Education by Amar
February 9, 2025 at 11:07 AM
💹ಗೆಳೆಯರೊಬ್ಬರು ಇದುವರೆಗೂ ಈಕ್ವಿಟಿ ಹೂಡಿಕೆ ಶುರು ಮಾಡಿಲ್ಲ. ಅವರಿಗೀಗ 40 ವರ್ಷ ವಯಸ್ಸು ಮೊನ್ನೆ ಮಾತನಾಡುತ್ತಾ - Did I miss the bus ಅಂತ ಕೇಳಿದರು. ಉತ್ತರ ಹೌದು ಅನ್ನುವುದೇ. ಆದರೆ ಹೋದ ಬಸ್ ಅಥವಾ ರೈಲಿನ ಬಗ್ಗೆ ತಲೆ ಕೆಡಿಸಿಕೊಳ್ಳುವ ಬದಲು ಮುಂದಿನ ಪ್ರಯಾಣ ಹೇಗೆ ಅನ್ನುವುದು ಯೋಚಿಸಿ ಕೆಲಸ ಮಾಡುವುದು ಮುಖ್ಯ ❇️40 ವರ್ಷದ ವ್ಯಕ್ತಿ ತನ್ನ 55 ನೇ ವಯಸ್ಸಿನ ತನಕ ಎಡೆಬಿಡದೆ ಹೂಡಿಕೆ ಮಾಡುತ್ತಾ ವರ್ಷಕ್ಕೆ 10% SIP ಮೊತ್ತ ಏರಿಸಿದರೆ ಸಾಕು ಒಳ್ಳೆಯ ಲಾಭ 15 ವರ್ಷಗಳಲ್ಲಿ ಕಾಣಬಹುದು ಅಂತ ಹೇಳಿದೆ. ಇದು ಕೇವಲ 12% ಲಾಭ ಅಂತ ಲೆಕ್ಕ ಮಾಡಿದಕ್ಕೆ. ✅ಹೂಡಿಕೆ ಮಾಡಲು ಅತಿ ಕಡಿಮೆ ವಯಸಿನಲ್ಲಿ ಶುರು ಮಾಡಬೇಕು ನಿಜ ಆದರೆ 35-40 ವರ್ಷದ ಮೇಲೆ ಶುರು ಮಾಡಿದಾಗ ಹೂಡಿಕೆ ಮಾಡುವ ಶಕ್ತಿ ಹೆಚ್ಚು ಇರುತ್ತದೆ ಹಾಗಾಗಿ catchup ಮಾಡುವ ಪ್ರಯತ್ನ ಮಾಡಬಹುದು.
Image from Investment Education by Amar: 💹ಗೆಳೆಯರೊಬ್ಬರು ಇದುವರೆಗೂ ಈಕ್ವಿಟಿ ಹೂಡಿಕೆ ಶುರು ಮಾಡಿಲ್ಲ. ಅವರಿಗೀಗ 40 ವರ್ಷ ವ...
👍 9

Comments