Investment Education by Amar
February 10, 2025 at 09:52 AM
💹ಮನೆ ಕೊಳ್ಳಬೇಕೆ? ಫೈನಾನ್ಸಿಯಲ್ ಪ್ಲಾನಿಂಗ್ ಪ್ರಕಾರ ಅದು ಒಳ್ಳೆಯ ನಿರ್ಧಾರವೇ ಅಂತ ಅನೇಕ ಗೆಳೆಯರು ಮೆಸೇಜ್ ಮಾಡಿ ಕೇಳಿದ್ದಾರೆ. ಇದಕ್ಕೆ ಮುಖ್ಯ ಕಾರಣ ಸೋಶಿಯಾಲ್ ಮೀಡಿಯಾದಲ್ಲಿ ಜನರ ತಲೆ ಕೆಡಿಸಿರುವ Finfluencer ಗಳು
✅ಇದು ಬಹುತೇಕ ಅವರವರ ಯೋಚನೆಗೆ ಬಿಟ್ಟಿದ್ದು.
ನನ್ನ ಯಾರಾದರೂ ಸಲಹೆ ಸೂಚನೆ ಕೇಳಿದರೆ - ನಾನು ಹೇಳುವುದು, ಹೇಳಿರುವುದು ಒಂದೇ. ನಿಮ್ಮ ಶಕ್ತಿಗೆ ತಕ್ಕಂತೆ ವಾಸಕ್ಕೆ ಒಂದು ಮನೆ ಅಥವಾ ಅಪಾರ್ಟ್ಮೆಂಟ್ ಖಂಡಿತ ಕೊಂಡುಕೊಳ್ಳಿ ಅಂತ.
✳️ಅದು ಲಾಭ ನಷ್ಟ ಕೊಡುವ ಅಸೆಟ್ ಅಲ್ಲ. ನೆಮ್ಮದಿಯಾಗಿ ನಾವು ವಾಸ ಮಾಡಕ್ಕೆ ಇರೋ ಸೂರು. ಅದಕ್ಕೆ ಬೆಲೆ ಕಟ್ಟಿಕೊಂಡು ಲೆಕ್ಕಾಚಾರ ಹಾಕಿ ಜೀವನ ವ್ಯರ್ಥ ಮಾಡುವುದರಲ್ಲಿ ಅರ್ಥವಿಲ್ಲ ಅನಿಸುತ್ತದೆ.
❎ವಾಸಕ್ಕೆ ಒಂದು ಮನೆ ಕಟ್ಟಿದಮೇಲೆ/ಕೊಂಡಮೇಲೆ ಮತ್ತೆ ಹೂಡಿಕೆಯ ರೂಪದಲ್ಲಿ ಮನೆ ಬೇಕೇ, ಅಪಾರ್ಟ್ಮೆಂಟ್ ಬೇಕೇ ಅನ್ನುವುದು ಬೇರೆಯ ವಿಚಾರ. ಆಗ rental yield ಎಷ್ಟು, ಕೈನಲ್ಲಿ ಪೂರ್ತಿ ಕಾಸಿದೆಯೇ ಅಥವಾ ಸಾಲ ಪಡೆದು ಮನೆ ಕೊಳ್ಳಬೇಕೆ, ಇನ್ನ ಎಷ್ಟು ವರ್ಷ ಸಾಲ ಕಟ್ಟುವ ಶಕ್ತಿ ಇದೆ, ಹೀಗೆ ಅನೇಕ ವಿಚಾರಗಳನ್ನು ಗಣನೆಗೆ ತೆಗೆದುಕೊಳ್ಳಬೇಕು.
👍
❤️
👌
7